ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ ಸಮ್ಮಕ್ಕ - ಸರಳಮ್ಮ ಜಾತ್ರಾ ವೈಭವ: ದೇವತೆಗಳ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತರ ದಂಡು - ತೆಲಂಗಾಣದಲ್ಲಿ ಜಾತ್ರಾ ವೈಭವ

ಬುಧವಾರದಿಂದ ಆರಂಭವಾಗಿರುವ ಮೆಡಾರಂನ ಸಮ್ಮಕ್ಕ - ಸರಳಮ್ಮ ಜಾತ್ರೆ ವೈಭವದಿಂದ ನೆರವೇರುತ್ತಿದೆ. ಈ ಜಾತ್ರೆ ನೋಡಲು ಲಕ್ಷಾಂತರ ಭಕ್ತರು ಮೆಡಾರಂನತ್ತ ಹರಿದು ಬರುತ್ತಿದ್ದಾರೆ.

Etv Bharatsaralamma-arrival-medaram
Etv Bharatತೆಲಂಗಾಣದಲ್ಲಿ ಸಮ್ಮಕ್ಕ - ಸರಳಮ್ಮ ಜಾತ್ರಾ ವೈಭವ: ಜಾತ್ರೆ ನೋಡಲು ಹರಿದು ಬರುತ್ತಿದೆ ಭಕ್ತರ ದಂಡು

By ETV Bharat Karnataka Team

Published : Feb 22, 2024, 9:55 AM IST

Updated : Feb 22, 2024, 10:08 AM IST

ಮೆಡಾರಂ: ತೆಲಂಗಾಣದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಮೇಡಾರಂ ಮಹಾಜಾತ್ರೆ ವಿಜೃಂಭಣೆಯಿಂದ ಜರುಗುತ್ತಿದೆ. ಜಾತ್ರೆಯ ಮೊದಲ ದಿನ ದೇವತೆಗಳ ಆಗಮನದೊಂದಿಗೆ ರಂಗು ಪಡೆದುಕೊಂಡಿದೆ. ಸರಳಮ್ಮ ಗದ್ದುಗೆಯನ್ನು ಜಾತ್ರೆಯ ನಿಮಿತ್ತ ಗ್ರಾಮಸ್ಥರು ಸ್ವಚ್ಛಗೊಳಿಸಿ, ಬಳಿಕ ಕನ್ನೆಪಲ್ಲಿಯಲ್ಲಿರುವ ಸರಳಮ್ಮನಿಗೆ ಆದಿವಾಸಿ ಸಂಪ್ರದಾಯಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಅರ್ಚಕರು ದೇವಿಯ ಮೂರ್ತಿಯೊಂದಿಗೆ ಹೊರಡುತ್ತಿದ್ದಂತೆಯೇ ಭಕ್ತರು ದೇವಿಯ ದರ್ಶನ ಪಡೆಯಲು ಮುಗಿಬಿದ್ದರು.

ಕನ್ನೆಪಲ್ಲಿ ಸುತ್ತಮುತ್ತ ಡೊಳ್ಳಿನ ನಾದ ಜಾತ್ರೆಯ ಮೆರಗನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಸರಳಮ್ಮ ಅವರನ್ನು ಪಂಚಾಯತ್ ರಾಜ್ ಇಲಾಖೆ ಸಚಿವೆ ಹಾಗೂ ಮುಳುಗು ಜಿಲ್ಲಾಧಿಕಾರಿ ಇಳಾ ತ್ರಿಪಾಠಿ, ಎಸ್ಪಿ ಶಬರೀಶ್ ಮತ್ತಿತರರು ಸ್ವಾಗತಿಸಿದರು. ಬುಧವಾರ ರಾತ್ರಿ 12 ಗಂಟೆಯ ನಂತರ ಸರಳಮ್ಮ, ಪಗಿದ್ದರಾಜು ಮತ್ತು ಗೋವಿಂದರಾಜ ಗದ್ದುಗೆಗೆ ಆಗಮಿಸಿದರು.

ಮಹಾಜಾತ್ರೆಯ ಎರಡನೇ ದಿನವಾದ ಇಂದು ಗಿರಿಜನರ ಇಲವೇಲ್ಪು ಸಮ್ಮ್ಮಕ್ಕ ಚಿಲಕಲಗುಟ್ಟದಿಂದ ಗದ್ದೆಗೆ ಆಗಮಿಸಲಿದ್ದಾರೆ. ಮೇಡಾರಂ ಮಹಾ ಜಾತ್ರೆಯಲ್ಲಿ ಸಮ್ಮಕ್ಕನ ಆಗಮನವೇ ಪ್ರಮುಖ ಕ್ಷಣವಾಗಿರುತ್ತದೆ. ಹೀಗಾಗಿಯೇ ಭಕ್ತರೆಲ್ಲ ಸಮ್ಮಕ್ಕನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಸಮ್ಮಕ್ಕ ಬೆಟ್ಟದಿಂದ ಇಳಿದ ತಕ್ಷಣ, ನೆರೆದಿದ್ದವರು ಅವಳನ್ನ ಭಕ್ತರು ಹುರಿದುಂಬಿಸಲಿದ್ದಾರೆ. ಸಮ್ಮಕ್ಕ ಕಾಕತೀಯ ಪಡೆಗಳ ವಿರುದ್ಧ ಅಸಾಧಾರಣ ಹೋರಾಟ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಹೀಗಾಗಿಯೇ ಗಿರಿಜನರ ಹಾಗೂ ಆ ಸಮುದಾಯದ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಇದೇ ಹಿನ್ನೆಲೆಯಲ್ಲಿ ವೀರ ಸಮ್ಮಕ್ಕಳ ಆಗಮನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ

ಜಾತ್ರೆಯ ಮೊದಲ ದಿನ ಸರಳಮ್ಮ, ಪಗಿದ್ದರಾಜು, ಗೋವಿಂದರಾಜ ಗದ್ದೆಗೆ ಆಗಮಿಸಿದರೆ, ಎರಡನೇ ದಿನ ಸಂಜೆ ಸಮ್ಮಕ್ಕ ಗದ್ದೆಗೆ ಆಗಮಿಸುತ್ತಾರೆ. ಇದಕ್ಕೂ ಮುನ್ನ ಅರ್ಚಕರು ಚಿಲಕಲ ಗುಟ್ಟಾದ ಸಮ್ಮಕ್ಕನಿಗೆ ಕುಂಕುಮ ನೀಡಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಿದ್ದಾರೆ. ಅದಾದ ನಂತರ ಸಮ್ಮಕ್ಕ ಕಾಡು ಬಿಟ್ಟು ನಾಡಿನತ್ತ ಆಗಮಿಸುತ್ತಾಳೆ. ಡ್ರಮ್‌ನ ಬೀಟ್ ಮತ್ತು ಡ್ರಮ್‌ಗಳ ಮೂಲಕ ಸಮ್ಮಕ್ಕಳನ ಸ್ವಾಗತಿಸಲಾಗುತ್ತದೆ. ಸಮ್ಮಕ್ಕನ ಆಗಮನದೊಂದಿಗೆ ಜಾತ್ರೆ ಮತ್ತಷ್ಟು ಕಳೆ ಕಟ್ಟುತ್ತದೆ.

ಜಾತ್ರೆಯ ಮೂರನೇ ದಿನವಾದ ಶುಕ್ರವಾರ ಅಮ್ಮನವರೆಲ್ಲ ಕಟ್ಟೆಗಳ ಮೇಲೆ ಕುಳಿತುಕೊಳ್ಳಲಿದ್ದಾರೆ. ಆಗ ಅಮ್ಮನವರನ್ನು ಕಾಣಲು ಭಕ್ತರು ತುದಿಗಾಲ ಮೇಲೆ ನಿಂತಿರುತ್ತಾರೆ. ಅವರನ್ನು ಭೇಟಿ ಮಾಡಿ ನಮನ ಸಲ್ಲಿಸಲು ಭಕ್ತರು ಪೈಪೋಟಿ ನಡೆಸುತ್ತಾರೆ.

ಇದನ್ನು ಓದಿ:ಬುಡಕಟ್ಟು ಸಮುದಾಯದ ಮೇಡಾರಂ ಸಮ್ಮಕ್ಕ- ಸರಳಮ್ಮ ಜಾತ್ರೆ: ಭಕ್ತರಿಂದ ಎತ್ತಿನ ಬಂಡಿ ಯಾತ್ರೆ

Last Updated : Feb 22, 2024, 10:08 AM IST

ABOUT THE AUTHOR

...view details