ಕರ್ನಾಟಕ

karnataka

ETV Bharat / bharat

ಸಲ್ಮಾನ್​ ಖಾನ್​ ನಿವಾಸದ ಮೇಲೆ ಗುಂಡಿನ ದಾಳಿ ಕೇಸ್​: ಲಾಕಪ್​ನಲ್ಲಿ ಆರೋಪಿ ಆತ್ಮಹತ್ಯೆ - Salman Khan House Firing Case - SALMAN KHAN HOUSE FIRING CASE

ಸಲ್ಮಾನ್​ ಖಾನ್​ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣದ ಆರೋಪಿಗಳ ಪೈಕಿ ಓರ್ವ ಇಂದು ಲಾಕಪ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Salman Khan house firing case: accused Anuj Thapan in dies by suicide in lock-up at Mumbai
ನಟ ಸಲ್ಮಾನ್​ ಖಾನ್​ ನಿವಾಸದ ಮೇಲೆ ಗುಂಡಿನ ದಾಳಿ ಕೇಸ್​: ಲಾಕಪ್​ನಲ್ಲೇ ಆರೋಪಿ ಆತ್ಮಹತ್ಯೆ

By PTI

Published : May 1, 2024, 3:50 PM IST

Updated : May 1, 2024, 4:15 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟ ಸಲ್ಮಾನ್​ ಖಾನ್​ ನಿವಾಸದ ಮೇಲೆ ಇತ್ತೀಚಿಗೆ ಗುಂಡಿನ ದಾಳಿ ಮಾಡಿದ ಆರೋಪಿಗಳ ಪೈಕಿ ಓರ್ವ ಇಂದು ಪೊಲೀಸ್​ ಲಾಕಪ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 32 ವರ್ಷದ ಅನುಜ್ ಥಾಪನ್ ಎಂಬಾತ ಮೃತಪಟ್ಟಿದ್ದಾನೆ. ಈತ ಮುಂಬೈ ಪೊಲೀಸ್​ ಇಲಾಖೆಯ ಅಪರಾಧ ವಿಭಾಗದ ಲಾಕಪ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಗೋಕುಲ್​ ದಾಸ್​ ತೇಜ್​ಪಾಲ್​ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಮೇಲೆ ಏಪ್ರಿಲ್ 14ರಂದು ಗುಂಡಿನ ದಾಳಿ ನಡೆದಿತ್ತು. ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಮತ್ತು ಅನ್ಮೋಲ್ ಬಿಷ್ಣೋಯ್ ಈ ಪ್ರಕರಣದ ರೂವಾರಿಗಳೆಂದು ಹೇಳಲಾಗಿದೆ. ಈ ಬಗ್ಗೆ ಮುಂಬೈ ಕ್ರೈಂ ಬ್ರ್ಯಾಂಚ್, ಬಿಷ್ಣೋಯ್ ಸಹೋದರರು ಸೇರಿದಂತೆ ಆರು ಆರೋಪಿಗಳ ವಿರುದ್ಧ ಕೇಸ್​ ದಾಖಲಿಸಿ, ತನಿಖೆ ಕೈಗೊಂಡಿದೆ.

ತನಿಖೆಯ ಭಾಗವಾಗಿ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದೆ. ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಆರೋಪಿ ವಿಕ್ಕಿ ಗುಪ್ತಾ, ಸಾಗರ್ ಪಾಲ್ ಮತ್ತು ಅನುಜ್ ಥಾಪನ್, ಸೋನುಕುಮಾರ್ ಬಿಷ್ಣೋಯ್ ಬಂಧಿತರಾಗಿದ್ದರು. ವಿಕ್ಕಿ ಗುಪ್ತಾ, ಸಾಗರ್ ಪಾಲ್ ಗುಜರಾತ್‌ನಲ್ಲಿ ಸೆರೆಸಿಕ್ಕಿದ್ದಾರೆ. ಪಿಸ್ತೂಲ್​ ಪೂರೈಕೆದಾರರು ಎನ್ನಲಾದ ಅನುಜ್ ಥಾಪನ್, ಸೋನುಕುಮಾರ್​ನನ್ನು ಪಂಜಾಬ್​ನಲ್ಲಿ ಬಂಧಿಸಲಾಗಿತ್ತು.

ಈ ಪೈಕಿ ಸೋನುಕುಮಾರ್​ನನ್ನು ವೈದ್ಯಕೀಯ ಕಾರಣಗಳಿಂದಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರೆ, ಮೃತಪಟ್ಟಿರುವ ಅನುಜ್ ಸೇರಿ ಮೂವರನ್ನು ಮೇ 8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆದರೆ, ಇಂದು ಲಾಕಪ್​ನಲ್ಲೇ ಅನುಜ್​ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯವನ್ನು ಉಪ ಪೊಲೀಸ್ ಆಯುಕ್ತ ದತ್ತಾ ನಲವಡೆ ಖಚಿತಪಡಿಸಿದ್ದು, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು, ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಸಬರಮತಿ ಜೈಲಿನಲ್ಲಿದ್ದರೆ, ಈತನ ಸಹೋದರ ಅನ್ಮೋಲ್ ಬಿಷ್ಣೋಯ್ ಕೆನಡಾದಲ್ಲಿ ನೆಲೆಸಿದ್ದಾನೆ.

ಇದನ್ನೂ ಓದಿ:ಸಲ್ಮಾನ್​ ಮನೆ ಮೇಲಿನ ದಾಳಿ ಪ್ರಕರಣ: ಶೂಟರ್​​ನ ಆಪ್ತರು ಪೊಲೀಸ್​ ವಶಕ್ಕೆ

Last Updated : May 1, 2024, 4:15 PM IST

ABOUT THE AUTHOR

...view details