ಹೈದರಾಬಾದ್: ಮನೆಗೆಲಸ, ಕಟ್ಟಡಗಳಿಗೆ ಭದ್ರತೆ ಸೇರಿದಂತೆ ಹಲವು ಕೆಲಸಗಳಿಗೆ ಕಡಿಮೆ ವೇತನಕ್ಕೆ ನೇಮಕಗೊಳ್ಳುವ ಕಾರ್ಮಿಕರು ಕಳ್ಳತನ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನೇಪಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧೆಡೆಯ ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ದಾಖಲಾಗಿರುವ ಪ್ರಮುಖ ಗಂಭೀರ ಸ್ವರೂಪದ ಪ್ರಕರಣಗಳು ಹೀಗಿವೆ.
- ಸಿಕಂದರಾಬಾದ್ನಲ್ಲಿ ಉದ್ಯೋಗಕ್ಕೆ ನೇಮಕಗೊಂಡ ನೇಪಾಳಿ ದಂಪತಿ 25-30 ಲಕ್ಷ ರೂ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
- ಜುಬ್ಲಿ ಹಿಲ್ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ವ್ಯಕ್ತಿ 70 ಲಕ್ಷ ಮೌಲ್ಯದ ಸ್ವತ್ತು ಕಳವು ಮಾಡಿದ್ದಾರೆ.
- ಗಗನ್ಮಹಲ್ನಲ್ಲಿ ನಿವೃತ್ತ ಹಿರಿಯ ಉದ್ಯೋಗಿಯ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ಅವರ ಎಟಿಎಂ ಕಾರ್ಡ್ನಿಂದ 30 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾನೆ.