ಜೈಪುರ್/ ಡೆಹರಾಡೂನ್: ರಾಜಸ್ಥಾನ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳನ್ನು ಮಾನವ ಮತ್ತು ಪ್ರಾಣಿಗಳ ಸಂಘರ್ಷಗಳ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಆನೆ, ಚಿರತೆ ಮತ್ತು ಹುಲಿಯ ದಾಳಿಗೆ ಅಸಾಯಕ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಕೂಡಾ ದಿನೇ ದಿನೇ ಹೆಚ್ಚಳವಾಗುತ್ತಿದೆ.
ಚಿರತೆಗಳಿಂದ ಹೆಚ್ಚಿನ ಮಾನವರ ಹತ್ಯೆ ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ಈ ಸಂಘರ್ಷಗಳು ಪರಸ್ಪರ ಕ್ರಿಯೆಯ ಆಧಾರಿತವಾಗಿದೆ. ಇದು ಜನರು ಅಥವಾ ಅವರ ಸಂಪನ್ಮೂಲ ಅಥವಾ ಕಾಡು ಪ್ರಾಣಿಗಳು ಅಥವಾ ಅವುಗಳ ಆವಾಸಸ್ಥಾನಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜನರು ವನ್ಯ ಜೀವಿಗಳ ಪ್ರದೇಶವನ್ನು ಅತಿಕ್ರಮಿಸಿದಾಗ ಈ ಮಾನವ ವನ್ಯಜೀವಿ ಸಂಘರ್ಷಗಳು ಉದ್ಬವಿಸುತ್ತದೆ.
ದೇಶಾದ್ಯಂತ ಹೆಚ್ಚುತ್ತಿರುವ ಈ ಪ್ರಕರಣಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುವ ಅಗತ್ಯತೆಯನ್ನು ತಿಳಿಸುತ್ತಿದೆ. ಮಾನವರು - ಪ್ರಾಣಿ ಸಂಘರ್ಷಗಳು ವನ್ಯಜೀವಿ ಅಧಿಕಾರಿಗಳ ಮೇಲೆ ಹೆಚ್ಚಿನ ಹೊರೆಯನ್ನು ಹಾಕಿವೆ. ಮಾನವ- ಪ್ರಾಣಿಗಳ ಸಂಘರ್ಷವನ್ನು ಮಾನವ - ಹುಲಿ ಸಂಘರ್ಷ, ಮಾನವ - ಚಿರತೆ ಸಂಘರ್ಷ ಮತ್ತು ಮಾನವ - ಆನೆ ಸಂಘರ್ಷ ಎಂದು ಮೂರು ವಿಧವಾಗಿ ವರ್ಗೀಕರಿಸಲಾಗಿದೆ.
ಪಶ್ಚಿಮ ಬಂಗಾಳದ ಆನೆ ಕಾರಿಡಾರ್ನಲ್ಲಿ ಮಾನವ - ಪ್ರಾಣಿ ಸಂಘರ್ಷ ಪಶ್ಚಿಮ ಬಂಗಾಳದ ಸುಂದರ್ಬನ್ಸ್ನಲ್ಲಿ ವಿಶ್ವದಲ್ಲಿಯೇ ಅತಿಹೆಚ್ಚು ಮ್ಯಾಂಗ್ರೋವ್ ದ್ವೀಪಗಳಿದ್ದು, ಇಲ್ಲಿ 500 ಕ್ಕೂ ಹೆಚ್ಚು ಬೆಂಗಾಲ್ ಹುಲಿಗಳನ್ನು ಕಾಣಬಹುದು. ಇವು ವರ್ಷಕ್ಕೆ 50 ರಿಂದ 100 ಜನರ ಪ್ರಾಣವನ್ನು ತೆಗೆದುಕೊಳ್ಳುತ್ತಿವೆ. ಮಾನವ - ಆನೆ ಸಂಘರ್ಷದಲ್ಲಿ ವರ್ಷಕ್ಕೆ ಭಾರತದಲ್ಲಿ 400 ಮಂದಿ ಜೀವ ಕಳೆದುಕೊಳ್ಳುತ್ತಾರೆ. ಈ ಸಂತ್ರಸ್ತರಲ್ಲಿ ಬಹುತೇಕರು ಸಾಮಾಜಿಕ - ಆರ್ಥಿಕ ದುರ್ಬಲತೆಗೆ ಒಳಗಾದ ಸಮುದಾಯದವರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಚಿರತೆಗಳಿಂದ ಹೆಚ್ಚಿನ ಮಾನವರ ಹತ್ಯೆ:ಅಂದಾಜಿನ ಪ್ರಕಾರ, ಭಾರತದಲ್ಲಿ ಇತರ ಪ್ರಾಣಿಗಳಿಗಿಂತ ಚಿರತೆ ಅತಿ ಹೆಚ್ಚು ಮಾನವರನ್ನು ಕೊಂದಿದೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ಹೆಚ್ಚಿನ ಮಾನವ - ಚಿರತೆ ಸಂಘರ್ಷ ಕಾಣಬಹುದಾಗಿದೆ, ಉತ್ತರಾಖಂಡ್ನ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವೂ ಮಾನವರನ್ನು ತಿನ್ನುವ ಚಿರತೆಗಳಿಗೆ ಪ್ರಖ್ಯಾತಿ ಹೊಂದಿದೆ. ಚಿರತೆಗಳು ಮಾನವರ ಮೇಲೆ ಆಗಾಗ್ಗೆ ದಾಳಿ ಮಾಡುತ್ತವೆ.
ರಾಜಸ್ಥಾನ, ಉತ್ತರಾಖಂಡ್, ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿದೆ ಮಾನವ - ಪ್ರಾಣಿ ಸಂಘರ್ಷ ಕಳೆದ ಮೂರು ವರ್ಷದಲ್ಲಿ ಅಂದರೆ, 2021ರಿಂದ 2023ರಲ್ಲಿ ಅತಿ ಹೆಚ್ಚು ಮಾನವರ ಸಾವುಗಳು ಉತ್ತರಾಖಂಡದಲ್ಲಿ ಸಂಭವಿಸಿವೆ. ಒಟ್ಟು 1003 ಜನರು ಪ್ರಾಣಿಗಳಿಂದ ಗಾಯಗೊಂಡಿರುವುದು ವರದಿಯಾಗಿದೆ. 2021ರಲ್ಲಿ ರಾಜ್ಯದಲ್ಲಿ 71 ಮಾನವರು ಸಾವನ್ನಪ್ಪಿದ್ದರೆ, 2022ರಲ್ಲಿ 82 ಸಾವುಗಳು ಸಂಭವಿಸಿವೆ. ಆದರೆ, 2023ರಲ್ಲಿ ಈ ಸಂಖ್ಯೆ ಕಡಿಮೆಯಾಗಿದ್ದು, 66 ಪ್ರಾಣಿಗಳ ದಾಳಿಗೆ ಒಳಗಾಗಿದ್ದಾರೆ.
ಆನೆ ದಾಳಿಯಿಂದಾಗಿ 2021ರಲ್ಲಿ 13 ಮಂದಿ ಸಾವನ್ನಪ್ಪಿದರೆ, 2022ರಲ್ಲಿ 9 ಮತ್ತು 2023ರಲ್ಲಿ 5 ಸಾವು ಸಂಭವಿಸಿದೆ. ಚಿರತೆ ದಾಳಿಗೆ 2021ರಲ್ಲಿ 23, ನಂತರದ ವರ್ಷದಲ್ಲಿ 22 ಮತ್ತು 18 ಸಾವುಗಳು ವರದಿಯಾಗಿವೆ.
ರಾಜ್ಯದಲ್ಲಿ 2021ರಲ್ಲಿ ಚಿರತೆಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಿದೆ. ಮುಂದಿನ ಎರಡು ವರ್ಷ ಕ್ರಮವಾಗಿ 22 ಮತ್ತು 18 ಸಾವು ವರದಿಯಾಗಿದೆ. ಹುಲಿಯಿಂದ ದಾಳಿಯ ಪ್ರಕರಣದಲ್ಲಿ 10 ಪಟ್ಟು ಹೆಚ್ಚಳವನ್ನು ಕಾಣಬಹುದಾಗಿದೆ. 2021ರಲ್ಲಿ 2 ಸಾವು ಆದರೆ, 2022ರಲ್ಲಿ 16 ಮತ್ತು 2023ರಲ್ಲಿ 17 ಸಾವು ದಾಖಲಾಗಿವೆ.
ಪಶ್ಚಿಮ ಬಂಗಾಳದ ಆನೆ ಕಾರಿಡಾರ್ನಲ್ಲಿ ಮಾನವ - ಪ್ರಾಣಿ ಸಂಘರ್ಷ:ಪಶ್ಚಿಮ ಬಂಗಾಳದ ರಾಜ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಹೊರೆ ಹೆಚ್ಚಿದ್ದು, ಇದು ಸಾಮಾನ್ಯವಾಗುತ್ತಿದೆ. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿನ ಆನೆ ಕಾರಿಡಾರ್ ಹಾದು ಹೋಗುವ ಪ್ರದೇಶವಾಗಿದೆ.
2008 ರಲ್ಲಿ 450 ಆನೆಗಳು ಇದ್ದರೆ, 2010ರಲ್ಲಿ 530 ಮತ್ತು 2014ರಲ್ಲಿ ಈ ಸಂಖ್ಯೆ 640 ಇತ್ತು. ಸದ್ಯ ಉತ್ತರ ಬಂಗಾಳದಲ್ಲಿನ ಆನೆಗಳ ಸಂಖ್ಯೆ 700 ಆಗಿದೆ. ಇಲ್ಲಿನ ಸಮಸ್ಯೆ ಎಂದರೆ, ಇಲ್ಲಿರುವ ಅರಣ್ಯ ಪ್ರದೇಶಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆನೆಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಅರಣ್ಯ ಇಲಾಖೆಯಲ್ಲಿ ಲಭ್ಯವಿರುವ ಅಂಕಿ ಅಂಶದ ಪ್ರಕಾರ, ಆನೆಗಳ ದಾಳಿಯಿಂದ ಪ್ರತಿ ವರ್ಷ ಸರಾಸರಿ 35 ರಿಂದ 50 ಜನರು ಸಾವನ್ನಪ್ಪುತ್ತಿದ್ದಾರೆ.
ಜಂಗಲ್ ಮಹಲ್ ಆನೆ ಕಾರಿಡಾರ್:ಬಂಗಾಳದ ಜಂಗಲ್‌ಮಹಲ್ ಪ್ರದೇಶದ ಆನೆ ಕಾರಿಡಾರ್ ಜಾರ್‌ಗ್ರಾಮ್, ಬಂಕುರಾ, ಪುರುಲಿಯಾ ಮತ್ತು ಪಶ್ಚಿಮ್ ಮೆದಿನಿಪುರ್ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಈ ಆನೆ ಕಾರಿಕಾಡ್ ನೆರೆಯ ಜಾರ್ಖಂಡ್ ಪ್ರದೇಶವನ್ನು ತಲುಪುವುದರಿಂದ ನೆರಯ ರಾಜ್ಯದಲ್ಲಿ ಕೂಡ ಆನೆಗಳು ಗ್ರಾಮ ಮತ್ತು ಕೃಷಿ ಭೂಮಿ ಮೇಲೆ ದಾಳಿ ಮಾಡುತ್ತಿರುತ್ತದೆ ಎಂದು ಜಾರ್ಗ್ರಾಮ್ನ ಡಿಎಫ್ಒ ಪಂಕಜ್ ಸೂರ್ಯವಂಶಿ ಈ ಟಿವಿ ಭಾರತ್ಗೆ ತಿಳಿಸಿದ್ದಾರೆ. ಏಪ್ರಿಲ್ 1, 2023ರಿಂದ ಇಲ್ಲಿಯವರೆಗೆ ಕಾಡಾನೆಗಳ ದಾಳಿಯಿಂದಾಗಿ 17 ಜನರ ಸ್ಥಿತಿ ಗಂಭೀರವಾಗಿದೆ.
ರಾಯಲ್ ಬೆಂಗಾಲ್ ಹುಲಿಗಳಿಗೆ ಪ್ರಖ್ಯಾತಿಯನ್ನು ಹೊಂದಿರುವ ಪ್ರದೇಶ ಸುಂದರ್ಬನ್ ಆಗಿದ್ದು, ಇಲ್ಲಿ ಕಡಿಮೆಯಾಗುತ್ತಿರುವ ಅರಣ್ಯ, ಸೈಕ್ಲೋನ್, ಹೆಚ್ಚಿನ ಸವೆತ ಮತ್ತು ಮಾನವನ ಆವಾಸಸ್ಥಾನಗಳು ಯೋಚಿತವಲ್ಲದ ರೀತಿಯಲ್ಲಿ ವೇಗವಾಗಿ ಹರಡುತ್ತಿರುವುದು ಈಗಾಗಲೇ ಅರಣ್ಯದ ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಇಲ್ಲಿನ ಜನರು ಕಾಡಿನ ಜೇನು ಪಡೆಯಲು ನಿಯಮಿತವಾಗಿ ಕಾಡಿಗೆ ಬರುತ್ತಿರುತ್ತಾರೆ. ಏಡಿ ಹಿಡಿಯಲು ಮತ್ತು ಮೀನುಗಾರಿಕೆಗಾಗಿ ನದಿಯ ಡೆಲ್ಟಾ ಪ್ರದೇಶದಲ್ಲಿ ನದಿಗಳು ಮತ್ತು ಕಾಲುವೆಗಳನ್ನು ದಾಟುತ್ತಾರೆ. ಈ ಮೂಲಕ ಅವರು ಹುಲಿಗಳ ನೇರ ಸಂರ್ಪಕಕ್ಕೆ ಬರುತ್ತಿದ್ದಾರೆ., ಅರಣ್ಯಾಧಿಕಾರಿಗಳು ಹೇಳುವಂತೆ ಈ ರೀತಿ ಸುಂದರ್ಬನ್ ಅರಣ್ಯ ಪ್ರದೇಶದಲ್ಲಿ ಕಳೆದ ಐದು ವರ್ಷದಲ್ಲಿ ಹುಲಿಗಳ ನೇರ ಸಂಪರ್ಕಕ್ಕೆ ಬಂದ 13 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಮಾನವ-ಪ್ರಾಣಿ ಸಂಘರ್ಷ: ಕೇರಳದಲ್ಲಿ ಸಾವಿನ ಸಂಖ್ಯೆ ಗಮನಾರ್ಹ ಇಳಿಕೆ- ಅರಣ್ಯ ಇಲಾಖೆ ಮಾಹಿತಿ