ಕರ್ನಾಟಕ

karnataka

ETV Bharat / bharat

ಸೆಂಟ್ರಲ್​ ಬ್ಯಾಂಕರ್​ ಜಾಗತಿಕ ಶ್ರೇಯಾಂಕ ಮನ್ನಣೆ; ಆರ್​ಬಿಐ ಗವರ್ನರ್​ಗೆ ಪ್ರಧಾನಿ ಪ್ರಶಂಸೆ - Central Banker Globally Ranking

ಅಮೆರಿಕ ಮೂಲಕ ಗ್ಲೋಬಲ್​ ಫೈನಾನ್ಸ್​ ನಿಯತಕಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳ ಜಾಗತಿಕ ಶ್ರೇಯಾಂಕದಲ್ಲಿ ಶಕ್ತಿಕಾಂತ್​ ದಾಸ್​ ಅವರು ಸ್ಥಾನ ಪಡೆದಿದ್ದಾರೆ.

recognition-of-his-leadership-pm-modi-lauds-rbi-governor-shaktikanta-das-ranked-top-central-banker-globally
ಶಕ್ತಿಕಾಂತ್​ ದಾಸ್​ (ಈಟಿವಿ ಭಾರತ್​​​)

By ETV Bharat Karnataka Team

Published : Aug 21, 2024, 12:28 PM IST

ನವದೆಹಲಿ: ಕೇಂದ್ರೀಯ ಬ್ಯಾಂಕರ್​ಗಳ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ರೇಟಿಂಗ್​ ಪಡೆದ ಹಿನ್ನೆಲೆ ರಿಸರ್ವ್​ ಬ್ಯಾಂಕ್​ ಗವರ್ನರ್​ ಶಕ್ತಿಕಾಂತ್​ ದಾಸ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದು, ಅವರ ನಾಯಕತ್ವದ ಮನ್ನಣೆ ಎಂದು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಈ ಕುರಿತು ಪೋಸ್ಟ್​ ಮಾಡಿರುವ ಪ್ರಧಾನಿ, ಎರಡನೇ ಬಾರಿಗೆ ಉನ್ನತ ರೇಟಿಂಗ್​ ಪಡೆದಿದ್ದಕ್ಕೆ ಶುಭಾಶಯಕಗಳು. ಇದು ಆರ್​​ಬಿಐನಲ್ಲಿ ಅವರ ನಾಯಕತ್ವಕ್ಕೆ ಮನ್ನಣೆಯಾಗಿದ್ದು, ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಕೆಲಸವಾಗಿದೆ ಎಂದಿದ್ದಾರೆ.

ಅಮೆರಿಕ ಮೂಲಕ ಗ್ಲೋಬಲ್​ ಫೈನಾನ್ಸ್​ ನಿಯತಕಾಲಿಕೆಯಲ್ಲಿ ಸತತ ಎರಡನೇ ಬಾರಿಗೆ ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳ ಜಾಗತಿಕ ಶ್ರೇಯಾಂಕದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ದಾಸ್​ ಅವರು ಇನ್ನಿಬ್ಬರು ಕೇಂದ್ರೀಯ ಬ್ಯಾಂಕ್​ ಗವರ್ನರ್​​ ಜೊತೆಗೆ ಅವರು ಎ+ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಗ್ಲೋಬಲ್​ ಫೈನಾನ್ಸ್​ ಮ್ಯಾಗಜೀನ್​ ಪ್ರಕಾರ, ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆ ಗುರಿ, ಹಣಕಾಸಿನ ಸ್ಥಿರತೆ ಮತ್ತು ಬಡ್ಡಿ ದರ ನಿರ್ವಹಣೆ ಯಶಸ್ಸಿಗೆ ಎ ಯಿಂದ ಎಫ್​ವರೆಗೆ ಗ್ರೇಡ್​ಗಳನ್ನು ಹಂಚಿಕೆ ಮಾಡಲಾಗುವುದು.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ಆರ್​ಬಿಐ, ಸತತ ಎರಡನೇ ಬಾರಿಗೆ ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಅವರು ಜಾಗತಿಕ ಫೈನಾನ್ಸ್​​ ಸೆಂಟ್ರಲ್​ ಬ್ಯಾಂಕರ್​ ರಿಪೋರ್ಟ್​​ ಕಾರ್ಡ್​ 2004ರಲ್ಲಿ ಎ+ ರೇಟ್​ ಪಡೆದಿದ್ದಾರೆ ಎಂದು ಪ್ರಕಟಿಸಲು ಸಂತಸವಾಗುತ್ತಿದೆ ಎಂದು ತಿಳಿಸಿದೆ. ಶಕ್ತಿಕಾಂತ್​ ದಾಸ್​ ಅವರ ಜೊತೆಗೆ ಡೆನ್ಮಾರ್ಕ್​ನ ಕ್ರಿಸ್ಟಿಯನ್​ ಕೆಟೆಲ್​ ಥಾಮ್ಸೆನ್​ ಮತ್ತು ಸ್ವಿಟ್ಜರ್​ಲೆಂಡ್​ ಥಾಮಸ್​ ಜೋರ್ಡನ್​ ಕೂಡ ಕೇಂದ್ರ ಬ್ಯಾಂಕರ್ಸ್​​ ವರ್ಗದಲ್ಲಿ ಎ+ ಶ್ರೇಯಾಂಕ ಪಡೆದಿದ್ದಾರೆ.

ಏನಿದು ಶ್ರೇಯಾಂಕ: ಗ್ಲೋಬಲ್​ ಫೈನಾನ್ಸ್​​ ವಾರ್ಷಿಕವಾಗಿ ಕೇಂದ್ರೀಯ ಬ್ಯಾಂಕರ್​ ರಿಪೋರ್ಟ್​ ಕಾರ್ಡ್​​ ಅನ್ನು ನೀಡುತ್ತದೆ. ಈ ಮೂಲಕ ಸ್ವಂತಿಕೆ, ಸೃಜನಶೀಲತೆ ಮತ್ತು ದೃಢತೆಯ ಮೂಲಕ ಆರ್ಥಿಕತೆ ತಂತ್ರಗಾರಿಕೆ ನಡೆಸಿದ ಬ್ಯಾಂಕ್​ ನಾಯಕರಿಗೆ ಗೌರವವನ್ನು ನೀಡಲಾಗುವುದು. ಈ ಸೆಂಟ್ರಲ್​ ಬ್ಯಾಂಕರ್​ ರಿಪೋರ್ಟ್​ ಕಾರ್ಡ್​​ ಅನ್ನು ಗ್ಲೋಬಲ್​ ಫೈನಾನ್ಸ್ 1994ರಿಂದ ಪ್ರತಿ ವರ್ಷ ​ಪ್ರಕಟಿಸುತ್ತಿದೆ. ಯುರೋಪಿಯನ್​ ಯುನಿಯನ್​ ಈಸ್ಟರ್ನ್​​ ಕೆರೆಬಿಯನ್​ ಸೆಂಟ್ರಲ್​ ಬ್ಯಾಂಕ್​, ಬ್ಯಾಂಕ್​ ಆಫ್​ ಸೆಂಟ್ರಲ್​ ಆಫ್ರಿಕನ್​ ಸ್ಟೇಟ್ಸ್​ ಮತ್ತು ಸೆಂಟ್ರಲ್​ ಬ್ಯಾಂಕ್​ ಆಫ್​ ಆಫ್ರಿಕನ್​ ಸ್ಟೇಟ್​​ ಸೇರಿದಂತೆ ಸರಿಸುಮಾರು 100 ದೇಶ, ಪ್ರದೇಶ, ಜಿಲ್ಲಾ ಕೇಂದ್ರೀಯ ಬ್ಯಾಂಕರ್​ ಗವರ್ನರ್​ಗಳ ಕಾರ್ಯತಂತ್ರದ ಆಧಾರದ ಮೇಲೆ ಶ್ರೇಯಾಂಕ ನೀಡಲಾಗುತ್ತದೆ.

ಇದನ್ನೂ ಓದಿ: ಸಾಲಗಾರರಿಗೆ ಗುಡ್​ ನ್ಯೂಸ್​, ಬಡ್ಡಿ ದರದಲ್ಲಿಲ್ಲ ಯಾವುದೇ ಬದಲಾವಣೆ: ರೆಪೋ ರೇಟ್​​​​​​ ಏರಿಕೆ ಮಾಡದಿರಲು RBI ನಿರ್ಧಾರ

ABOUT THE AUTHOR

...view details