ಮುಂಬೈ(ಮಹಾರಾಷ್ಟ್ರ):ದೇಶದಲ್ಲಿಆನ್ಲೈನ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಹೆಚ್ಚುತ್ತಿವೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ಗೆ(ಆರ್‌ಬಿಐ) ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಒಂದೇ ತಿಂಗಳಲ್ಲೇ ಬಂದ ಎರಡನೇ ಬೆದರಿಕೆ ಇದಾಗಿದೆ.
ದುಷ್ಕರ್ಮಿಗಳು ಗುರುವಾರ ಆರ್‌ಬಿಐ ಅಧಿಕೃತ ವೆಬ್ ಜಾಲತಾಣಕ್ಕೆ ಬೆದರಿಕೆ ಇಮೇಲ್ ಕಳುಹಿಸಿದ್ದು, ಕಟ್ಟಡ ಸ್ಪೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಮೇಲ್ ಸಂದೇಶವನ್ನು ರಷ್ಯಾನ್ ಭಾಷೆಯಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.