ಹೈದರಾಬಾದ್:ರಾಮೋಜಿ ರಾವ್ ಅವರ 88ನೇ ಜನ್ಮದಿನವಾದ ಇಂದು ರಾಮೋಜಿ ಗ್ರೂಪ್ ಸಬಲಾ ಮಿಲ್ಲೆಟ್ಸ್ - ಭಾರತ್ ಕಾ ಸೂಪರ್ಫುಡ್ ಅನ್ನು ಅನಾವರಣಗೊಳಿಸಿದೆ.
ಸಬಲಾ ಮಿಲ್ಲೆಟ್ಸ್ನ ನಿರ್ದೇಶಕರಾದ ಸಹರಿ ಚೆರುಕುರಿ ಮಾತನಾಡಿ, "ಸಬಲಾ ಸಿರಿಧಾನ್ಯಗಳು ಆರೋಗ್ಯಕರ ಜೀವನದ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಸಬಲಾ ಮಿಲ್ಲೆಟ್ಸ್ ಸಾಂಪ್ರದಾಯಿಕ ಭಾರತೀಯ ಸಿರಿಧಾನ್ಯಗಳು ಮತ್ತು ಆಧುನಿಕ ಪಾಕ ವಿಧಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ" ಎಂದರು.
"ಸಮತೋಲಿತ ಪೌಷ್ಠಿಕಾಂಶವನ್ನು ಉತ್ತಮ ಪರಿಮಳದೊಂದಿಗೆ ಸಂಯೋಜಿಸುವ ನಮ್ಮ ದೃಢ ಸಂಕಲ್ಪವನ್ನು ಇದು ನಿರೂಪಿಸುತ್ತದೆ. ರಾಮೋಜಿ ಗ್ರೂಪ್ ಸ್ಥಾಪಕರಾದ ಶ್ರೀರಾಮೋಜಿ ರಾವ್ ಅವರ ಜನ್ಮ ದಿನಾಚರಣೆಯಂದು ಸಬಲಾ ಮಿಲ್ಲೆಟ್ಸ್ ಅನಾವರಣಗೊಳಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಇದೆ. ಏಕೆಂದರೆ ಆರೋಗ್ಯಕರ ಭಾರತಕ್ಕಾಗಿ ಅವರ ದೂರದೃಷ್ಟಿಯ ಕನಸಿಗೆ ನಾವು ಗೌರವ ಸಲ್ಲಿಸುತ್ತೇವೆ. ಸಮತೋಲಿತ ಪೌಷ್ಠಿಕಾಂಶವನ್ನು ಉತ್ತೇಜಿಸಲು ಸಬಲಾ ಒಂದು ಬ್ರ್ಯಾಂಡ್ ಆಗಿರುತ್ತದೆ" ಎಂದು ತಿಳಿಸಿದರು.
ಪೌಷ್ಠಿಕಾಂಶದ ಸಮಗ್ರತೆಗೆ ಧಕ್ಕೆಯಾಗದಂತೆ ಆಧುನಿಕ, ಆರೋಗ್ಯಕರ ಜೀವನಶೈಲಿಗಾಗಿ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗಿದೆ. ಸಬಲಾ ಮಿಲ್ಲೆಟ್ಸ್ ತನ್ನ ಗ್ರಾಹಕರಿಗೆ ಪೌಷ್ಟಿಕ ಮತ್ತು ರುಚಿಕರವಾದ ಉತ್ಪನ್ನಗಳನ್ನು ನೀಡಲು ಬದ್ಧವಾಗಿದೆ. ಅದರ ಮೊದಲ ಹಂತದಲ್ಲಿ, ವಿವಿಧ ರಾಜ್ಯಗಳಲ್ಲಿ ಸಿರಿಧಾನ್ಯ ಆಧಾರಿತ ಕುಕೀಸ್, ಹೆಲ್ತ್ ಬಾರ್‌ಗಳು ಮತ್ತು ನೂಡಲ್ಸ್‌ಗಳು ಸೇರಿದಂತೆ 45 ಉತ್ಪನ್ನಗಳನ್ನು ಅನಾವರಣಗೊಳಿಸಲಾಗಿದೆ.
ಶ್ರೀರಾಮೋಜಿ ರಾವ್ ಅವರ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ನಂಬಿಕೆ, ಗುಣಮಟ್ಟ ಮತ್ತು ಉತ್ಕೃಷ್ಟತೆಯಿಂದ ಸಬಲಾ ಮಿಲ್ಲೆಟ್ಸ್, ಉತ್ತಮ ಗುಣಮಟ್ಟದ, ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲಿದೆ.