Ramoji Film City: ಇನ್ನೇನು ಈ ವರ್ಷ ಮುಗಿತಾ ಬಂತು. ಹೊಸ ವರ್ಷಕ್ಕೆ ನಾವೆಲ್ಲರೂ ಹರ್ಷದಿಂದ ಕಾಲಿಡಲು ಸಜ್ಜಾಗಿದ್ದೇವೆ. ಈ ವೇಳೆ ಅನೇಕ ಸ್ಥಳಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಅಷ್ಟೇ ಅಲ್ಲ ಅನೇಕ ಖಾಸಗಿ ಸ್ಥಳಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಆಕರ್ಷಕ ಆಫರ್ ಸಹ ನೀಡಿ ಗ್ರಾಹಕರನ್ನು ಸೆಳೆಯುವಂತಹ ಪ್ರಯತ್ನಗಳು ನಡೆಯುತ್ತಿವೆ.
ಇನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. ಅಷ್ಟೇ ಅಲ್ಲ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಡಿಸೆಂಬರ್ 31 ರಂದು ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ವಿಸಿಟರ್ಸ್ಗೆ ಹೆಚ್ಚು ಸಂತೋಷ ಮತ್ತು ಸಂಭ್ರಮದಿಂದ ಹೊಸ ವರ್ಷಕ್ಕೆ ಕಾಲಿಡುವ ಅವಕಾಶವನ್ನು ರಾಮೋಜಿ ಫಿಲಂ ಸಿಟಿ ಕಲ್ಪಿಸುತ್ತಿದೆ. ಈ ಹಿನ್ನೆಲೆ ಹೊಸ ವರ್ಷಾಚರಣೆ ನಿಮಿತ್ತ ಡಿಸೆಂಬರ್ 31 ರಂದು ರಾಮೋಜಿ ಫಿಲಂ ಸಿಟಿಯಲ್ಲಿ ಡಿಜೆ ಚೇತಾಸ್ ಅವರ ನೇರಪ್ರಸಾರ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರವಾಸಿಗರನ್ನು ಪುಳಕಿತಗೊಳಿಸಲಿದೆ.
ರಾಮೋಜಿ ಫಿಲಂ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮ: ಈ ಹೊಸ ವರ್ಷ ಆರ್ಎಫ್ಸಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೆಚ್ಚು ಉತ್ಸಾಹಗೊಳಿಸಲಿದೆ. DJ ಚೇತಾಸ್ ಅವರ ಅಭಿನಯದ ಜೊತೆಗೆ, ಅತಿಥಿಗಳು ಸ್ವಾಗತ ನೃತ್ಯ, ಬಾಲಿವುಡ್ ಡ್ಯಾನ್ಸ್ ಪ್ರದರ್ಶನಗಳು, ಫನ್ ಗೇಮ್ಸ್ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿ ಸೇರಿದಂತೆ ವಿವಿಧ ಆಕರ್ಷಕ ಇವೆಂಟ್ಗಳು ನಡೆಯಲಿವೆ. ಅಂತಾರಾಷ್ಟ್ರೀಯ ಅಗ್ನಿ ಪ್ರದರ್ಶನಗಳು, ಜಂಗಲ್-ಥೀಮಿನ ಚಮತ್ಕಾರಿಕ ಸಾಹಸಗಳು, ಕ್ಲೌನ್ ಶೋಗಳು, ಲಯನ್ ಕಿಂಗ್ ಪ್ರದರ್ಶನಗಳು ಮತ್ತು ಸ್ಕ್ವಿಡ್ ಆಟಗಳಂತಹ ವಿಶೇಷ ಕಾರ್ಯಕ್ರಮಗಳು ಸಹ ನೀವು ಸಖತ್ ಎಂಜಾಯ್ ಮಾಡಬಹುದಾಗಿದೆ.
ಆಕರ್ಷಕ ಪ್ಯಾಕೇಜ್‌ಗಳು: ಈ ಹೊಸ ವರ್ಷದ ಸಂಭ್ರಮ 31ರ ರಾತ್ರಿ 8 ಗಂಟೆಗೆ ಪ್ರಾರಂಭವಾಗಲಿದೆ. ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಆಕರ್ಷಕ ಪ್ಯಾಕೇಜ್‌ಗಳನ್ನು ಆರ್ಎಫ್ಸಿ ಒದಗಿಸುತ್ತಿದೆ. ತಮ್ಮ ಆದ್ಯತೆಗಳಿಗೆ ಸರಿ ಹೊಂದುವಂತಹ ಹಲವಾರು ಪ್ಯಾಕೇಜ್‌ಗಳನ್ನು ನೀವು ಆಯ್ಕೆ ಮಾಡಬಹುದಾಗಿದೆ. ಆಯ್ಕೆಗಳಲ್ಲಿ ಪ್ರೀಮಿಯಂ ಟೇಬಲ್‌ಗಳು, ದಂಪತಿಗಳಿಗೆ ವಿಶೇಷ ಆಸನಗಳು, ವಿಐಪಿ ಪ್ಯಾಕೇಜ್‌ಗಳು ಮತ್ತು ಬಜೆಟ್ ಸ್ನೇಹಿ ಫ್ಯಾನ್ ಪಿಟ್ ಪ್ಯಾಕೇಜ್‌ಗಳು ಸಹ ಸೇರಿವೆ. ಇನ್ನು ಈ ಪ್ಯಾಕೇಜ್‌ಗಳು 2,000 ರೂ ದಿಂದ ಪ್ರಾರಂಭಗೊಳ್ಳುತ್ತಿರುವುದು ಗಮನಾರ್ಹ..