ಹೈದರಾಬಾದ್: ಬೇಸಿಗೆ ರಜೆಯ ಮೋಜು, ಉತ್ಸಾಹ, ಉಲ್ಲಾಸದ ದಿನಗಳನ್ನು ಒದಗಿಸಲು ರಾಮೋಜಿ ಫಿಲ್ಮ್ ಸಿಟಿ ಸಿದ್ಧವಾಗಿದೆ. ಬೇಸಿಗೆ ಬಂತೆಂದರೆ ಹೊಸ ಸಾಹಸ- ಅನ್ವೇಷಣೆಗಳ ಜೊತೆ ಕುಟುಂಬದೊಂದಿಗೆ ರಜೆ ಕಳೆಯಲು ಸಜ್ಜಾಗುವ ಕುಟುಂಬಗಳನ್ನು ಸ್ವಾಗತಿಸಲು ರಾಮೋಜಿ ಫಿಲ್ಮ್ ಸಿಟಿ ಸಜ್ಜಾಗಿದೆ. ಅದ್ಭುತ ಮನೋರಂಜನೆ ಜೊತೆಗೆ ಮಸ್ತಿಗೆ ಸೂಕ್ತ ತಾಣ ಇದಾಗಿದೆ.
ಸೂರ್ಯೋದಯದಿಂದ ಸುರ್ಯಾಸ್ತದವರೆಗೆ ಕಲರವದ ಸ್ಫೂರ್ತಿಯಿಂದ ಕೂಡಿರುವ ರಾಮೋಜಿ ಫಿಲ್ಮ್ ಸಿಟಿ ಎಲ್ಲಾ ವಯೋಮಾನದವರನ್ನು ಆಕರ್ಷಿಸುತ್ತಿದೆ. ಈ ಬೇಸಿಗೆ ರಜೆಯ ಹಬ್ಬದಲ್ಲಿ ಇದೀಗ ಹಾಲಿಡೇ ಕಾರ್ನಿವಲ್ ಆರಂಭವಾಗಿದೆ.
ಫಿಲ್ಮ್ ಸಿಟಿಯಲ್ಲಿರುವ ಮೋಷನ್ ಕ್ಯಾಪ್ಚರ್ ಮತ್ತು ವರ್ಚುವಲ್ ಶೂಟ್ ಎಲ್ಲರನ್ನು ಆಕರ್ಷಿಸಲಿವೆ. ಜೊತೆಗೆ ಆಧುನಿಕ ತಂತ್ರಜ್ಞಾನದ ಅದ್ಭುತಗಳನ್ನು ಅನ್ವೇಷಿಸಲು ನಿಮಗಿದು ಸೂಕ್ತ ಅವಕಾಶವಾಗಿದೆ. ಜೊತೆಗೆ ಬೇಸಿಗೆಯಲ್ಲಿ ಮಳೆಯ ಅನುಭವ ನೀಡಲು ರೈನ್ ಡ್ಯಾನ್ಸ್ ಇದ್ದು, ಇದು ನಿಮಗೆ ಉಲ್ಲಾಸದ ಅನುಭವ ನೀಡಲಿದೆ.
ಇಷ್ಟಕ್ಕೆ ಈ ಬೇಸಿಗೆ ಹಬ್ಬ ಮುಗಿಯುವುದಿಲ್ಲ. ಇದರ ಜೊತೆಗೆ ಯುರೇಕಾ ಲೈವ್ ಪ್ರದರ್ಶನಗಳಲ್ಲಿ ಪ್ರತಿಭಾವಂತರ ಕಲೆ ಅನಾವರಣವಾಗಲಿದೆ. ಜೊತೆಗೆ ಉದ್ಯಾನದ ಸೌಂದರ್ಯದೊಂದಿಗೆ ಅದ್ಭುತ ಶಿಲ್ಪಕಲೆಗಳಿಗೂ ಸಾಕ್ಷಿಯಾಗಲಿದೆ. ಇಲ್ಲಿನ ಚಿಕ್ಕ ಅನುಭವವು ನಿಮಗೆ ದೊಡ್ಡ ಅನುಭೂತಿ ನೀಡುವುದು ಸುಳ್ಳಲ್ಲ. ಇದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿ ವಿವಿಧ ದರದಲ್ಲಿ ವಿಶೇಷ ಪ್ಯಾಕೇಜ್ಗಳನ್ನು ಕೂಡ ನೀಡಿದೆ.