ಕರ್ನಾಟಕ

karnataka

ETV Bharat / bharat

ಅಯೋಧ್ಯೆಯಲ್ಲಿ 6ನೇ ದಿನದ ಧಾರ್ಮಿಕ ಆಚರಣೆ: ಇಂದಿನ ಕಾರ್ಯಕ್ರಮಗಳ ವಿವರ - ಬಾಲ ರಾಮನಿಗೆ 125 ಕಲಶ ನೀರಿನಿಂದ ಸ್ನಾನ

ರಾಮನಗರಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

Ram Mandir Pran Pratishtha 6th Day  Ramlalla bath sleep  Ram Mandir 2024  Ramlala Pran Pratistha  Ayodhya Ram Temple  6ನೇ ದಿನದ ಧಾರ್ಮಿಕ ಆಚರಣೆ  ಬಾಲ ರಾಮನಿಗೆ 125 ಕಲಶ ನೀರಿನಿಂದ ಸ್ನಾನ  ಧಾರ್ಮಿಕ ಕಾರ್ಯಕ್ರಮ
6ನೇ ದಿನದ ಧಾರ್ಮಿಕ ಆಚರಣೆ: ಬಾಲ ರಾಮನಿಗೆ 125 ಕಲಶ ನೀರಿನಿಂದ ಸ್ನಾನ, ಲಾಲಿ ಆಲಿಸಿ ನಂತರ ನಿದ್ರೆಗೆ ಜಾರಲಿರುವ ರಾಮಲಲ್ಲಾ

By ETV Bharat Karnataka Team

Published : Jan 21, 2024, 1:13 PM IST

ಅಯೋಧ್ಯೆ(ಉತ್ತರ ಪ್ರದೇಶ):ರಾಮ ಮಂದಿರದಲ್ಲಿ ನಾಳೆ (ಸೋಮವಾರ) ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಕಳೆದ ಮಂಗಳವಾರದಿಂದ ಆರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಐದನೇ ದಿನವಾದ ನಿನ್ನೆ (ಶನಿವಾರ) ಬಾಲ ರಾಮನ ಮೂರ್ತಿಗೆ ಶಕ್ರಾಧಿವಾಸ್ ಮತ್ತು ಫಲಾಧಿವಾಸ ಧಾರ್ಮಿಕ ವಿಧಿವಿಧಾನ ನೆರವೇರಿತು.

ಶುಕ್ರಾಧಿವಾಸ್ ಮತ್ತು ಫಲಾಧಿವಾಸ ಧಾರ್ಮಿಕ ವಿಧಿವಿಧಾನ

ಇಂದಿನ ಧಾರ್ಮಿಕ ಕಾರ್ಯಕ್ರಮಗಳೂ ವಿಶೇಷವಾಗಿದೆ. ವಿವಿಧ ಕಾರ್ಯಕ್ರಮಗಳು ದಿನವಿಡೀ ನಡೆಯಲಿವೆ. ಇವತ್ತು ರಾಮಲಲ್ಲಾ ದೇವರಿಗೆ 125 ಕಲಶದ ಪವಿತ್ರ ನೀರಿನಿಂದ ಸ್ನಾನ ಮಾಡಿಸಲಾಗುತ್ತದೆ. ಇದರ ನಂತರ, ಶಯಧಿವಾಸ್ ಸಂಸ್ಕಾರದ ಅಂಗವಾಗಿ ಲಾಲಿ ಆಲಿಸಿದ ನಂತರ ಬಾಲ ರಾಮ ನಿದ್ರೆಗೆ ಜಾರಲಿದ್ದಾನೆ. ಇದಾದ ನಂತರ ಜನವರಿ 22ರಂದು ಬೆಳಿಗ್ಗೆ ಮಂಗಳಧ್ವನಿ ಮೂಲಕ ಚಪ್ಪಾಳೆ ತಟ್ಟುವ ಮತ್ತು ಮಂತ್ರಗಳನ್ನು ಪಠಿಸುವ ಮೂಲಕ ಬಾಲ ಶ್ರೀರಾಮನನ್ನು ನಿದ್ರೆಯಿಂದ ಎಬ್ಬಿಸಲಾಗುತ್ತದೆ. ಈ ಧಾರ್ಮಿಕ ಆಚರಣೆ ತುಂಬಾ ವಿಶೇಷವಾಗಿದೆ. ಇದಾದ ಬಳಿಕ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ಕಾರ್ಯಕ್ರಮ ನಡೆಯಲಿದೆ.

ಸುನೀಲ್ ಲಕ್ಷ್ಮೀಕಾಂತ್ ದೀಕ್ಷಿತ್ ಹೇಳಿಕೆ: ''ಇಂದು ವಿಶೇಷ ಪೂಜೆ, ಹವನದ ನಡುವೆಯೇ ಬಾಲ ರಾಮನಿಗೆ 125 ಕಲಶಗಳಿಂದ ದಿವ್ಯ ಸ್ನಾನ ಮಾಡಲಾಗುವುದು. ಈ ವೇಳೆ ಶಯಾಧಿವಾಸ ಧಾರ್ಮಿಕ ಆಚರಣೆ ನಡೆಯುತ್ತದೆ. ಶಯಾಧಿವಾಸ ಪದ್ಧತಿಯ ಪ್ರಕಾರ ಮಗುವಿನಂತೆ ಲಾಲಿ ಹಾಡುವ ಮೂಲಕ ಭಗವಂತನಿಗೆ ನಿದ್ರೆ ಮಾಡಿಸುವ ಸಂಪ್ರದಾಯ ನೆರವೇರಿಸಲಾಗುವುದು. ಮರುದಿನ, ಜನವರಿ 22 ರಂದು ಬೆಳಿಗ್ಗೆ ಚಪ್ಪಾಳೆ ತಟ್ಟಿ ಮತ್ತು ಶುಭ ಗೀತೆಗಳನ್ನು ಹಾಡುವ ಮೂಲಕ ರಾಮಲಲ್ಲಾನನ್ನು ನಿದ್ರೆಯಿಂದ ಎಚ್ಚರಗೊಳಿಸಲಾಗುತ್ತದೆ. ನಂತರ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ವಿಧಿ ವಿಧಾನಗಳು ಜರುಗಲಿವೆ'' ಎಂದು ಕಾಶಿ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ ದೀಕ್ಷಿತ್ ಅವರ ಪುತ್ರ ಸುನೀಲ್ ಲಕ್ಷ್ಮೀಕಾಂತ್ ದೀಕ್ಷಿತ್ ತಿಳಿಸಿದರು.

ವಿವಿಧ ಧಾರ್ಮಿಕ ವಿಧಿ ವಿಧಾನಗಳು

ಅಭಿಜಿನ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ: ಜನವರಿ 16 ರಿಂದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳು ನಡೆಯುತ್ತಿವೆ. ಬಾಲ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಜನವರಿ 22 ರಂದು ನಿಗದಿಪಡಿಸಲಾಗಿದ್ದು, ಅಭಿಜಿನ್ ಮುಹೂರ್ತದಲ್ಲಿ ಶಾಸ್ತ್ರೋಕ್ತ ಸಂಪ್ರದಾಯಗಳನ್ನು ಅನುಸರಿಸಿ ಮಹಾಮಸ್ತಕಾಭಿಷೇಕದ ಕಾರ್ಯಕ್ರಮ ನೆರವೇರಲಿದೆ. ಅಭಿಜಿತ್ ಮುಹೂರ್ತವು ಜನವರಿ 22 ರಂದು ಮಧ್ಯಾಹ್ನ 12:29 ನಿಮಿಷ 8 ಸೆಕೆಂಡುಗಳಿಂದ 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯು 2024 ರ ಜನವರಿ 22 ರಂದು ಪೌಷಾ ಮಾಸದ ಹನ್ನೆರಡನೆಯ ದಿನದಂದು ಅಭಿಜಿತ ಮುಹೂರ್ತ, ಇಂದ್ರ ಯೋಗ, ಮೃಗಶಿರಾ ನಕ್ಷತ್ರ, ಮೇಷ ಲಗ್ನ ಮತ್ತು ವೃಶ್ಚಿಕ ನವಾಂಶದಂದು ನಡೆಯಲಿದೆ. ಈ ಶುಭ ಸಮಯವು ದಿನದ 12:29 ನಿಮಿಷ 8 ಸೆಕೆಂಡ್‌ಗಳಿಂದ 12:30 ನಿಮಿಷ 32 ಸೆಕೆಂಡುಗಳವರೆಗೆ ಇರುತ್ತದೆ. ಅಂದರೆ, ಪ್ರಾಣ ಪ್ರತಿಷ್ಠಾಪನೆಗೆ ಶುಭ ಮುಹೂರ್ತ 84 ಸೆಕೆಂಡುಗಳು ಆಗಿರುತ್ತದೆ.

ಹಿಗಿತ್ತು ಶನಿವಾರದ ಕಾರ್ಯಕ್ರಮ:ಐದನೇ ದಿನದ ಧಾರ್ಮಿಕ ವಿಧಿ ವಿಧಾನಗಳು ಶನಿವಾರ (ಜ.20 ರಂದು) ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡಿದ್ದವು. ರಾಮಲಲ್ಲಾನನ್ನು ಬೆಳಿಗ್ಗೆ ಸಕ್ಕರೆಯಲ್ಲಿ ಇರಿಸಲಾಯಿತು. ಇದಾದ ನಂತರ ಹಣ್ಣನ್ನು ಇಡಲಾಯಿತು. ಇದಾದ ಬಳಿಕ 81 ಕಲಶಗಳಲ್ಲಿ ಸಂಗ್ರಹಿಸಿದ ವಿವಿಧ ಔಷಧಗಳನ್ನು ಒಳಗೊಂಡ ನೀರಿನಿಂದ ಸ್ನಾನವನ್ನು ಮಾಡಲಾಯಿತು. ನಂತರ ಪುಷ್ಪಾಧಿವಾಸದಲ್ಲಿ ವಿಗ್ರಹವನ್ನು ಇರಿಸುವ ಮೂಲಕ ನಿವಾಸ ಪ್ರಕ್ರಿಯೆ ಪೂರ್ಣಗೊಂಡಿತು. ಸಂಜೆಯವರೆಗೂ ಕಾರ್ಯಕ್ರಮ ಮುಂದುವರೆಯಿತು.

ಧಾರ್ಮಿಕ ಕಾರ್ಯಕ್ರಮಗಳು

ಇದನ್ನೂ ಓದಿ:ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ ಬಚ್ಚನ್: ಮನೆಯಿಂದ ದೇಗುಲಕ್ಕೆ ಕೇವಲ 15 ನಿಮಿಷದ ಹಾದಿ

ABOUT THE AUTHOR

...view details