ಕೋಲ್ಕತ್ತಾ (ಪಶ್ಚಿಮಬಂಗಾಳ):ಜಲಪೈಗುರಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದ್ದನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದಾರೆ. ಭಾರತೀಯ ರೈಲ್ವೆಗಳು ಹಳಿ ತಪ್ಪುವುದರಲ್ಲಿ ವಿಶ್ವದಾಖಲೆ ಸೃಷ್ಟಿಸಿವೆ. ಹಳಿ ತಪ್ಪಿದ ಘಟನೆಗಳು ವರದಿಯಾಗುತ್ತಲ್ಲೇ ಇವೆ ಎಂದು ಲೇವಡಿ ಮಾಡಿದ್ದಾರೆ.
ಹಳಿ ತಪ್ಪುದರಲ್ಲಿ ಭಾರತೀಯ ರೈಲ್ವೆ ಇಲಾಖೆ ವಿಶ್ವ ದಾಖಲೆ ನಿರ್ಮಿಸಿದೆ. ನಮ್ಮ ರಾಜ್ಯದ ಜಲಪೈಗುರಿ ಜಿಲ್ಲೆಯಲ್ಲಿ ಖಾಲಿ ಗೂಡ್ಸ್ ರೈಲಿನ ಕೆಲವು ವ್ಯಾಗನ್‌ಗಳು ಹಳಿಗಳನ್ನು ತಪ್ಪಿವೆ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ಭಾರತೀಯ ರೈಲ್ವೆ ಇಲಾಖೆ ಎಷ್ಟು ಗಂಭೀರವಾಗಿದೆ ಎಂಬುದು ತಿಳಿಯುತ್ತದೆ ಎಂದು ಛೇಡಿಸಿದ್ದಾರೆ.
ಬಿರ್ಭೂಮ್‌ನಲ್ಲಿ ಮಂಗಳವಾರ ನಡೆದ ಆಡಳಿತ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರಿಗೆ ಮಾತನಾಡಿದ ಅವರು, "ರೈಲ್ವೆಯಲ್ಲಿ ಏನಾಗುತ್ತಿದೆ? ಇವತ್ತಿಗೂ ಹಳಿ ತಪ್ಪಿದ ಸುದ್ದಿಗಳು ಬರುತ್ತಲೇ ಇವೆ. ರೈಲು ಹಳಿತಪ್ಪುವುದರಲ್ಲಿ ವಿಶ್ವ ದಾಖಲೆ ನಿರ್ಮಿಸಿರಬೇಕು. ಆದರೂ, ಈ ಬಗ್ಗೆ ಸರ್ಕಾರ ಏನೊಂದು ಹೇಳಿಕೆಯನ್ನೂ ನೀಡುತ್ತಿಲ್ಲ" ಎಂದರು.
"ಜನರ ಸುರಕ್ಷತೆ ಮತ್ತು ಭದ್ರತೆ ಅಪಾಯದಲ್ಲಿದೆ. ಅವರು ರೈಲುಗಳಲ್ಲಿ ಪ್ರಯಾಣಿಸಲು ಜನರು ಹೆದರುತ್ತಾರೆ. ರೈಲ್ವೆ ಸಚಿವರು ಎಲ್ಲಿದ್ದಾರೆ? ಚುನಾವಣೆ ಸಮಯದಲ್ಲಿ ಕೇವಲ ಮತ ಕೇಳುವುದರಿಂದ ಪ್ರಯೋಜನವಾಗುವುದಿಲ್ಲ. ಜನರು ಅಪಾಯದಲ್ಲಿದ್ದಾಗ ಅವರ ಜೊತೆಗಿರಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.