ಲಖನೌ, ಉತ್ತರಪ್ರದೇಶ:ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಯಾರು ಸ್ಪರ್ಧಿಸಲಿದ್ದಾರೆ ಎಂದ ಕುತೂಹಲಕ್ಕೆ ತೆರೆಬಿದ್ದಿದೆ. ರಾಯಬರೇಲಿಯಿಂದ ರಾಹುಲ್ ಗಾಂಧಿ ಹಾಗೂ ಅಮೇಥಿಯಿಂದ ಶ್ರೀ ಕಿಶೋರಿ ಲಾಲ್ ಶರ್ಮಾ ಅವರು ಕಣಕ್ಕೆ ಇಳಿದಿದ್ದು, ಈ ಬಗ್ಗೆ ಪಕ್ಷ ಅಧಿಕೃತ ಘೋಷಣೆ ಮಾಡಿದೆ.
ರಾಹುಲ್ ಗಾಂಧಿ ಹಾಗೂ ಶ್ರೀ ಕಿಶೋರಿ ಲಾಲ್ ಶರ್ಮಾ ನಾಮಪತ್ರ (ETV Bharat kannada) ಇಂದು ಈ 2 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಿನ್ನೆಯಿಂದಲೇ ಸುದ್ದಿಯಲ್ಲಿದ್ದ ರಾಹುಲ್ ಗಾಂಧಿ ಕ್ಷೇತ್ರದ ನಿರ್ಣಯ ಫೈನಲ್ ಆಗಿದೆ. ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದಲ್ಲಿ ತನ್ನ ಸ್ಥಾನಗಳನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದು. ಈ ಹಿನ್ನೆಲೆ ತಮ್ಮ ತಾಯಿ ಸೋನಿಯಾ ಗಾಂಧಿ ಕ್ಷೇತ್ರವಾದ ರಾಯಬರೇಲಿಯಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿದಿದ್ದಾರೆ. ರಾಹುಲ್ ಗಾಂಧಿ ಪ್ರಸ್ತುತ ಕೇರಳದ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಏಳು ಹಂತಗಳ ಸಾರ್ವತ್ರಿಕ ಚುನಾವಣೆಯ 5ನೇ ಸುತ್ತಿನಲ್ಲಿಈ ಕ್ಷೆತ್ರಗಳಿಗೆ ಮೇ 20 ರಂದು ಚುನಾವಣೆ ನಡೆಯಲಿದೆ. ರಾಯಬರೇಲಿ ಹಾಗೂ ಅಮೇಥಿ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಕ್ಷೇತ್ರವೆಂದೇ ಕರೆಯಲಾಗುತ್ತದೆ. ಕಾಂಗ್ರೆಸ್ ಪಕ್ಷವು 1951 ರಿಂದ ಮೂರು ಲೋಕಸಭಾ ಚುನಾವಣೆಗಳನ್ನು ಹೊರತುಪಡಿಸಿ ಉಳಿದೆಲ್ಲವೂ ತನ್ನ ಭದ್ರಕೋಟೆಯನ್ನು ಗೆದ್ದುಕೊಂಡಿದೆ. ಸೋನಿಯಾ ಗಾಂಧಿಯವರಿಗಿಂತ ಮೊದಲು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ರಾಯಬರೇಲಿಯಿಂದ ಮೂರು ಬಾರಿ ಗೆದ್ದಿದ್ದರು.
ಇನ್ನು ಗುರುವಾರ ಬಿಜೆಪಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು ರಾಯಬರೇಲಿಯಿಂದ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಇವರು 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸೋತಿದ್ದರು. 2019 ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಅಮೇಥಿಯಿಂದ ಸೋತಿದ್ದರು. ಈ ಬಾರಿ ಕಿಶೋರಿ ಲಾಲ್ ಅವರನ್ನು ಅಮೇಥಿಯಿಂದ ಅಂತಿಮಗೊಳಿಸಲಾಗಿದೆ.
ಇದನ್ನೂ ಓದಿ:ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡಲಿ: ಕಾಂಗ್ರೆಸ್ ಪಕ್ಷದಲ್ಲೇ ಹೆಚ್ಚಿದ ಕೂಗು