ಕರ್ನಾಟಕ

karnataka

ETV Bharat / bharat

ಪೂಜಾ ಖೇಡ್ಕರ್ ಪ್ರಕರಣ: ಅಭ್ಯರ್ಥಿಗಳ ಗುರುತು ಪರಿಶೀಲನೆಗೆ ಆಧಾರ್ ಆಧಾರಿತ ದೃಢೀಕರಣಕ್ಕೆ UPSC ಗೆ ಕೇಂದ್ರದ ಅನುಮತಿ - Centre Allows UPSC Perform Aadhaar - CENTRE ALLOWS UPSC PERFORM AADHAAR

ನಾಗರಿಕ ಸೇವೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಆಧಾರಿತ ದೃಢೀಕರಣವನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಯುಪಿಎಸ್‌ಸಿಗೆ ಅನುಮತಿ ನೀಡಿದೆ. 'ಒನ್ ಟೈಮ್ ರಿಜಿಸ್ಟ್ರೇಶನ್' ಪೋರ್ಟಲ್ ಮತ್ತು ವಿವಿಧ ಹಂತದ ಪರೀಕ್ಷೆ/ನೇಮಕಾತಿ ಪರೀಕ್ಷೆಯಲ್ಲಿ ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳ ಗುರುತಿನ ಪರಿಶೀಲನೆಗಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ದೃಢೀಕರಣವನ್ನು ನಿರ್ವಹಿಸಲು ಯುಪಿಎಸ್‌ಸಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Puja Khedkar Fallout: Centre Allows UPSC To Perform Aadhaar-
ಪೂಜಾ ಖೇಡ್ಕರ್ ಪ್ರಕರಣ: ಅಭ್ಯರ್ಥಿಗಳ ಗುರುತು ಪರಿಶೀಲನೆಗೆ ಆಧಾರ್ ಆಧಾರಿತ ದೃಢೀಕರಣಕ್ಕೆ UPSC ಗೆ ಕೇಂದ್ರದ ಅನುಮತಿ (ETV Bharat)

By ETV Bharat Karnataka Team

Published : Aug 29, 2024, 8:18 AM IST

ನವದೆಹಲಿ: ನೋಂದಣಿ ಸಮಯದಲ್ಲಿ ಮತ್ತು ಪರೀಕ್ಷೆಗಳು ಮತ್ತು ನೇಮಕಾತಿಯ ವಿವಿಧ ಹಂತಗಳಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಲು ಆಧಾರ್ ಆಧಾರಿತ ದೃಢೀಕರಣ ಮಾಡಲು ಕೇಂದ್ರವು ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC) ಅನುಮತಿ ನೀಡಿದೆ.

ಆಯೋಗವು ಕಳೆದ ತಿಂಗಳು ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆ ರದ್ದುಗೊಳಿಸಿದ್ದರಿಂದ ಮತ್ತು ಅರ್ಹತೆ ಮೀರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೋಸದ ಪ್ರಯತ್ನಗಳಿಗಾಗಿ ಅವರನ್ನು ಮುಂದಿನ ಎಲ್ಲಾ ಪರೀಕ್ಷೆಗಳಿಂದ ಡಿಬಾರ್ ಮಾಡಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ತಡೆಯಲು ಯುಪಿಎಸ್​​​ಸಿ ಮುಂದಾಗಿದೆ. ಖೇಡ್ಕರ್ ಅವರು ಅಂಗವೈಕಲ್ಯ ಮತ್ತು ಇತರ ಹಿಂದುಳಿದ ವರ್ಗಗಳು ಅಥವಾ OBC (ನಾನ್-ಕ್ರೀಮಿ ಲೇಯರ್) ಕೋಟಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಬ್ಬಂದಿ ಸಚಿವಾಲಯವು ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ 'ಒನ್ ಟೈಮ್ ರಿಜಿಸ್ಟ್ರೇಶನ್' ಪೋರ್ಟಲ್ ಮತ್ತು ಪರೀಕ್ಷೆಯ ವಿವಿಧ ಹಂತಗಳಲ್ಲಿ ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳ ಗುರುತಿನ ಪರಿಶೀಲನೆಗಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ದೃಢೀಕರಣವನ್ನು ನಿರ್ವಹಿಸಲು ಯುಪಿಎಸ್‌ಸಿಗೆ ಅನುಮತಿಸಲಾಗಿದೆ ಎಂದು ಹೇಳಿದೆ. ನೇಮಕಾತಿ ಪರೀಕ್ಷೆ, ಹೌದು/ಇಲ್ಲ ಅಥವಾ/ಮತ್ತು ಇ-ಕೆವೈಸಿ ದೃಢೀಕರಣ ಸೌಲಭ್ಯವನ್ನು ಬಳಸಬಹುದಾಗಿದೆ.

ಆಯೋಗವು ಆಧಾರ್ (ಹಣಕಾಸು ಮತ್ತು ಇತರ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನಗಳು ಮತ್ತು ಸೇವೆಗಳು) ಕಾಯಿದೆ, 2016ರ ಎಲ್ಲಾ ನಿಬಂಧನೆಗಳಿಗೆ ಬದ್ಧವಾಗಿರುತ್ತದೆ. ಅದರ ಅಡಿ ಮಾಡಿದ ನಿಯಮಗಳು ಮತ್ತು ನಿಬಂಧನೆಗಳು ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ- ಯುಐಡಿಎಐ ಹೊರಡಿಸಿದ ನಿರ್ದೇಶನಗಳು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ಕಳೆದ ಜುಲೈನಲ್ಲಿ ಯುಪಿಎಸ್‌ಸಿ ಖೇಡ್ಕರ್ ವಿರುದ್ಧ ಕ್ರಮ ಕೈಗೊಂಡಿತ್ತು. ನಕಲಿ ಗುರುತಿನ ಮೂಲಕ ನಾಗರಿಕ ಸೇವೆಗಳ ಪರೀಕ್ಷೆ ಬರೆಯಲು ಪ್ರಯತ್ನಿಸಿದ್ದಕ್ಕಾಗಿ ಅವರ ವಿರುದ್ಧ ಫೋರ್ಜರಿ ಪ್ರಕರಣವನ್ನು ದಾಖಲಿಸುವುದು ಸೇರಿದಂತೆ ಇತರ ಕಾರಣಗಳಿಗಾಗಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಖೇಡ್ಕರ್​ ಪುಣೆಯಲ್ಲಿ ತರಬೇತಿ ಸಮಯದಲ್ಲಿ ಅಧಿಕಾರ ಮತ್ತು ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಕಳೆದ ಜೂನ್‌ನಲ್ಲಿ UPSC ತನ್ನ ವಿವಿಧ ಪರೀಕ್ಷೆಗಳಲ್ಲಿ ಮೋಸ ಮತ್ತು ವಂಚನೆ ತಡೆಯಲು ಮುಖ ಗುರುತಿಸುವಿಕೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ CCTV ಕಣ್ಗಾವಲು ವ್ಯವಸ್ಥೆಗಳನ್ನು ಬಳಸಲು ನಿರ್ಧರಿಸಿದೆ. ಟೆಂಡರ್ ಡಾಕ್ಯುಮೆಂಟ್ ಮೂಲಕ, ಅನುಭವಿ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಎರಡು ತಾಂತ್ರಿಕ ಪರಿಹಾರಗಳನ್ನು ರೂಪಿಸಲು ಬಿಡ್‌ಗಳನ್ನು ಕೂಡಾ ಆಹ್ವಾನಿಸಿದೆ. "ಆಧಾರ್- ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ ಮತ್ತು ಅಭ್ಯರ್ಥಿಗಳ ಮುಖ ಗುರುತಿಸುವಿಕೆ ಮತ್ತು ಇ - ಪ್ರವೇಶ ಕಾರ್ಡ್‌ಗಳ QR ಕೋಡ್ ಸ್ಕ್ಯಾನಿಂಗ್" ಮತ್ತು "ಲೈವ್. AI-ಆಧಾರಿತ CCTV ಕಣ್ಗಾವಲು ಸೇವೆ"ಯನ್ನು ಪರೀಕ್ಷೆ ವೇಳೆ ಬಳಕೆ ಮಾಡಲು ಯುಪಿಎಸ್​​​ಸಿ ತೀರ್ಮಾನಿಸಿದೆ.

ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಗಳನ್ನು ಆಯ್ಕೆ ಮಾಡಲು ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆ ಸೇರಿದಂತೆ UPSC ವಾರ್ಷಿಕವಾಗಿ 14 ಪ್ರಮುಖ ಪರೀಕ್ಷೆಗಳನ್ನು ನಡೆಸುತ್ತದೆ. ಜೊತೆಗೆ ಪ್ರತಿ ವರ್ಷ ಹಲವಾರು ನೇಮಕಾತಿ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸುತ್ತದೆ.

ಇದನ್ನು ಓದಿ:ಸೆಪ್ಟೆಂಬರ್​ 9ರಂದು ಜಿಎಸ್​ಟಿ ಕೌನ್ಸಿಲ್ ಸಭೆ: ದರ ತರ್ಕಬದ್ಧಗೊಳಿಸುವಿಕೆಯ ಬಗ್ಗೆ ಚರ್ಚೆ - GST COUNCIL

ABOUT THE AUTHOR

...view details