ಹೈದರಾಬಾದ್: ಅಫ್ಜಲ್ಗಂಜ್ ಮತ್ತು ಬೀದರ್ ದರೋಡೆ ಮತ್ತು ಗುಂಡಿನ ದಾಳಿ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಹೈದರಾಬಾದ್ ಮತ್ತು ಬೀದರ್ ಪೊಲೀಸರ ಜಂಟಿ ತನಿಖೆ ಆರಂಭವಾಗಿದ್ದು, ಆರೋಪಿಗಳು ನಾಪತ್ತೆಯಾದ ಮಾರ್ಗದ ಮೂಲಕ ಅವರ ಹುಡುಕಾಟ ನಡೆಸಿದ್ದಾರೆ.
ನಾಪತ್ತೆ ಮಾರ್ಗ: ಪ್ರಕರಣದ ಶಂಕಿತ ಆರೋಪಿಗಳಾದ ಅಮಿತ್ ಮತ್ತು ಮನೀಶ್ ದರೋಡೆ ಮತ್ತು ಗುಂಡಿನ ದಾಳಿ ಬಳಿಕ ಓಡಿ ಹೋದ ಮಾರ್ಗಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ತನಿಖೆಯಲ್ಲಿ ಈ ಎಸ್ಕೇಪ್ ಮಾರ್ಗವನ್ನು ಬಹಿರಂಗಪಡಿಸಿದ್ದಾರೆ.
- ತಿರುಮಲಗಿರಿಯಿಂದ ಸಮೀರ್ಪೇಟ್ : ಆರೋಪಿಗಳು ಆರಂಭದಲ್ಲಿ ತಿರುಮಲಗಿರಿಯಿಂದ ಆಟೋದಲ್ಲಿ ಸಮೀರ್ಪೇಟ್ಗೆ ಪ್ರಯಾಣಿಸಿದ್ದಾರೆ.
- ಸಮಿರ್ಪೇಟ್ನಿಂದ ಗಜ್ವಾಲ್: ಶೇರ್ ಆಟೋ ಮೂಲಕ ಅವರು ಸಮೀರ್ಪೇಟ್ನಿಂದ ಗಜ್ವಾಲ್ಗೆ ಸಾಗಿದ್ದಾರೆ
- ಗಜ್ವಾಲ್ನಿಂದ ಅದಿಲಾಬಾದ್: ಬಳಿಕ ಆರೋಪಿಗಳು ಲಾರಿ ಮೂಲಕ ಗಜ್ವಾಲ್ನಿಂದ ಆದಿಲಾಬಾದ್ಗೆ ಸಾಗಿದ್ದಾರೆ.
- ಆದಿಲಾಬಾದ್ನಿಂದ ಬಿಹಾರ್ ಮಾರ್ಗವಾಗಿ ಮಧ್ಯಪ್ರದೇಶ: ಆದಿಲ್ಬಾದ್ನಿಂದ ಮಧ್ಯಪ್ರದೇಶಕ್ಕೆ ಸಾಗುವ ಯೋಜನೆ ರೂಪಿಸಿದ್ದ ಅವರು ಬೀದರ್ಗೆ ತಲುಪಿದ್ದಾರೆ.
ಶಂಕಿತರ ಪತ್ತೆ : ಅಮಿತ್ ಮತ್ತು ಮನೀಶ್ ಪ್ರಕರಣದ ಪ್ರಮುಖ ಆರೋಪಿಗಳು ಎಂಬುದನ್ನು ಪತ್ತೆ ಮಾಡಲಾಗಿದೆ. ಇವರು ಸದ್ಯ ಎಲ್ಲಿದ್ದಾರೆ ಎಂಬ ಕುರಿತು ಬೀದರ್ ಮತ್ತು ಹೈದರಾಬಾದ್ ಪೊಲೀಸರು ಜಂಟಿಯಾಗಿ ಪತ್ತೆಗೆ ಮುಂದಾಗಿದ್ದಾರೆ.