ಅಯೋಧ್ಯೆ(ಉತ್ತರ ಪ್ರದೇಶ): ರಾಮನಗರಿಯಲ್ಲಿಂದು ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ. ಪ್ರಧಾನಿ ಆಗಮನ ಹಾಗೂ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಮಧ್ಯಾಹ್ನ 12:55ಕ್ಕೆ ಪೂಜಾ ಸ್ಥಳದಿಂದ ನಿರ್ಗಮಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವರು. ಈ ಕಾರ್ಯಕ್ರಮಕ್ಕಾಗಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಈ ವೇದಿಕೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುವರು. ಇದಾದ ಬಳಿಕ ಎರಡು ಗಂಟೆಯವರೆಗೆ ಅಲ್ಲಿಯೇ ತಂಗಲಿದ್ದಾರೆ. ಮಧ್ಯಾಹ್ನ 2.10ಕ್ಕೆ ಕುಬೇರ್ ತಿಲಾ ದರ್ಶನಕ್ಕೆ ತೆರಳುವರು. ಮಧ್ಯಾಹ್ನ 3.30ಕ್ಕೆ ರಾಮನಗರಿಯಿಂದ ಹೊರಡುವ ನಿರೀಕ್ಷೆಯಿದೆ.