ಕರ್ನಾಟಕ

karnataka

ETV Bharat / bharat

ಭಾರತದ ಸಂವಿಧಾನ ದಿನ 2024: ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಿದ ರಾಷ್ಟ್ರಪತಿ - CONSTITUTION DAY OF INDIA

ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಗದೀಪ್​ ಧನಕರ್​, ಪ್ರಧಾನಿ ನರೇಂದ್ರ ಮೋದಿ, ಲೋಕಸಭ ಸ್ಪೀಕರ್​ ಓಂ ಬಿರ್ಲಾ ಸೆರಿದಂತೆ ಇತರ ಪ್ರಮುಖ ನಾಯಕರು ಹಾಜರಿದ್ದು, ಭಾರತದ ಪ್ರಭಾಪ್ರಭುತ್ವ ಇತಿಹಾಸದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

president-murmu-addresses-joint-sitting-of-parliament-unveils-coin-and-stamp-on-constitution-day
ಸಂವಿಧಾನ ದಿನ (ಐಎಎನ್​ಎಸ್​)

By ETV Bharat Karnataka Team

Published : Nov 26, 2024, 3:05 PM IST

ನವದೆಹಲಿ:ಸಂವಿಧಾನ ಅಂಗೀಕಾರಗೊಂಡ 75ನೇ ವರ್ಷಾಚರಣೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನ ದಿನದ ನಿಮಿತ್ತ ಐತಿಹಾಸಿಕ ಸೆಂಟ್ರಲ್​ ಹಾಲ್​ನಲ್ಲಿ ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​, ಪ್ರಧಾನಿ ನರೇಂದ್ರ ಮೋದಿ, ಲೋಕಸಭ ಸ್ಪೀಕರ್​ ಓಂ ಬಿರ್ಲಾ ಸೆರಿದಂತೆ ಇತರ ಪ್ರಮುಖ ನಾಯಕರು ಹಾಜರಿದ್ದು, ಭಾರತದ ಪ್ರಭಾಪ್ರಭುತ್ವ ಇತಿಹಾಸದ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಈ ವೇಳೆ ಮಾತನಾಡಿದ ರಾಷ್ಟ್ರಪತಿ ಮುರ್ಮ, ಭಾರತದ ಪ್ರಜಾಪ್ರಭುತ್ವ ತತ್ವ ನೀತಿ ರೂಪಿಸುವಲ್ಲಿ ಸಂವಿಧಾನ ಪ್ರಮುಖ ಪಾತ್ರ ವಹಿಸಿದೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಸಂಸ್ಕೃತ ಹಾಗೂ ಮೈಥಾಲಿ ಭಾಷೆಗೆ ಭಾಷಾಂತರಗೊಂಡ ಸಂವಿಧಾನದ ಪ್ರತಿ ಬಿಡುಗಡೆ ಮಾಡಿದರು. ಈ ವೇಳೆ, ಸಂವಿಧಾನದ ಪ್ರಸ್ತಾವನೆ ಓದಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಅನಾವರಣಗೊಳಿಸಿದರು.

ನಮ್ಮ ಸಂವಿಧಾನವೂ ಜೀವಂತ ಮತ್ತು ಪ್ರಗತಿ ದಾಖಲೆಯಾಗಿದೆ. ನಮ್ಮ ಸಂವಿಧಾನದ ಮೂಲಕ ನಾವು ಸಾಮಾಜಿಕ ನ್ಯಾಯ ಮತ್ತು ಎಲ್ಲರ ಒಳಗೊಂಡ ಅಭಿವೃದ್ಧಿಯ ಗುರಿ ಸಾಧಿಸಿದ್ದೇವೆ ಎಂದರು.

ಮಹಿಳಾ ಮೀಸಲಾತಿ ಕಾನೂನಿನ ಕುರಿತು ಮಾತನಾಡಿದ ಅವರು, ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಮಹಿಳಾ ಸಬಲೀಕರಣದ ಹೊಸ ಕಾಲವನ್ನು ಆರಂಭಿಸಿದೆ ಎಂದ ಅವರು, ಸಂವಿಧಾನ ರಚನೆಯಲ್ಲಿ ಭಾಗಿಯಾದ 15 ಮಹಿಳಾ ಸದಸ್ಯರಿಗೆ ಗೌರವ ನಮನ ಸಲ್ಲಿಸಿದರು.

ಪ್ರಜಾಪ್ರಭುತ್ವದ ಮೌಲ್ಯ ಪ್ರಾಮುಖ್ಯತೆ ತಿಳಿಸಿದ ಉಪ ರಾಷ್ಟ್ರಪತಿ: ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​, ಭಾರತದ ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಸಂವಿಧಾನದ ಪಾತ್ರವನ್ನು ಒತ್ತಿ ಹೇಳಿದರು. ನಮ್ಮ ಸಂವಿಧಾನವೂ ಭಾರತದ ಪ್ರಭಾಪ್ರಭುತ್ವವನ್ನು ಪರಿಣಾಮಕಾರಿಯಾಗಿ ನಿರೂಪಣೆ ಮಾಡಿದೆ. ನಮ್ಮ ಸಂವಿಧಾನದ ಪ್ರಮುಖ ಮೌಲ್ಯವನ್ನು ಈ ಕಾರ್ಯಕ್ರಮ ಪ್ರತಿನಿಧಿಸುತ್ತದೆ. ಸಂಸದರ ಪ್ರಜಾಪ್ರಭುತ್ವ ಮಾರ್ಗದರ್ಶಿಯಾಗಿ ಸಂವಿಧಾನ ಕಾರ್ಯ ನಿರ್ವಹಿಸಿದೆ ಎಂದರು.

ಇದೇ ವೇಳೆ 1975-77 ತುರ್ತು ಪರಿಸ್ಥಿತಿ ಸಂದರ್ಭ ನೆನಪಿಸಿಕೊಂಡ ಅವರು, ಜನರ ಮೂಲ ಹಕ್ಕು ಹತ್ತಿಕ್ಕಿದ ಕತ್ತಲೆಯ ಅವಧಿ ಇದಾಗಿದೆ ಎಂದರು. ಅಲ್ಲದೇ ಜೂನ್​ 25 ಅನ್ನು ತುರ್ತು ಪರಿಸ್ಥಿತಿಯ ಜ್ಞಾಪನೆಯಾಗಿ ವಾರ್ಷಿಕ ಆಚರಣೆಯಾಗಿ ಸ್ಮರಣೆ ದಿನವಾಗಿ ಅವರು ಪ್ರಸ್ತಾಪಿಸಿದರು.

ಸಂವಿಧಾನ ಪರಂಪರೆ ಒತ್ತಿಹೇಳಿದ ಲೋಕಸಭಾ ಸ್ಪೀಕರ್​:ಸಂಸದರು ಸಂವಿಧಾನ ಸಭೆಯಿಂದ ಸ್ಥಾಪನೆಯಾದ ರಚನಾತ್ಮಕ ಮತ್ತು ಗೌರವಾನ್ವಿತ ಚರ್ಚೆಗಳನ್ನು ಎತ್ತಿ ಹಿಡಿಯಬೇಕು ಎಂದು ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ತಿಳಿಸಿದರು. ಇದೇ ವೇಳೆ, ಸಂವಿಧಾನದಲ್ಲಿ ಭಾರತದ ಭೌಗೋಳಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಬಿಂಬಿಸಲು ಮೂರು ವರ್ಷದ ಪ್ರಯತ್ನವನ್ನು ಸ್ಮರಿಸಿದರು.

75 ವರ್ಷಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ಮುನ್ನಡೆಸುವಲ್ಲಿ ಸಂಸತ್ತಿನ ಪರಿವರ್ತಕ ಪಾತ್ರ ತಿಳಿಸಿದರು. 2024ರ ನವೆಂಬರ್​ 26 ಭಾರತ ಸಂವಿಧಾನದ 75ನೇ ವರ್ಷಾಚರಣೆ. ಬಿ ಆರ್​ ಅಂಬೇಡ್ಕರ್​​ ನಾಯಕತ್ವದಲ್ಲಿ ನವೆಂಬರ್​ 26, 1949ರಂದು ಭಾರತದ ಸಂವಿಧಾನವನ್ನು ಅಂಗೀಕಾರ ಮಾಡಲಾಯಿತು. ಭಾರತದ ಪ್ರಜಾಸತ್ತಾತ್ಮಕ, ಜಾತ್ಯತೀತ ಮತ್ತು ಸಮಾನತೆಯ ಚೌಕಟ್ಟನ್ನು ವ್ಯಾಖ್ಯಾನಿಸುವ ಅಡಿಪಾಯದ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಶುಭಾಶಯ ತಿಳಿಸಿದ ಪ್ರಧಾನಿ ಮೋದಿ: ಸಂವಿಧಾನ ಅಂಗೀಕರಗೊಂಡ 75ನೇ ವರ್ಷಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದರು. ರಾಜನಾಥ್​ ಸಿಂಗ್​ ಅವರು ಕೂಡ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಬಿ.ಆರ್.​ ಅಂಬೇಡ್ಕರ್ ಸೇರಿದಂತೆ ಅನೇಕರಿಗೆ ​ ಅವರಿಗೆ ಗೌರವ ಸಲ್ಲಿಸಿದ ಸಂವಿಧಾನದ ಶುಭಾಶಯ ತಿಳಿಸಿದರು.

ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಸಂವಿಧಾನದ ತತ್ವ ರಕ್ಷಣೆಗೆ ಭಾರತದ ಜನರು ಒಗ್ಗೂಡಬೇಕು ಎಂದು ಕರೆ ನೀಡಿ, ಶುಭಾಶಯ ತಿಳಿಸಿದರು.

ಸಂವಿಧಾನ ದಿನದ ಇತಿಹಾಸ:ಭಾರತದ ಐತಿಹಾಸಿಕ ಘಟನೆ ಮಹತ್ವ ಗುರುತಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಡಿ ಸರ್ಕಾರ 2015ರ ನವೆಂಬರ್​ 26ನ್ನು ಸಂವಿಧಾನ ದಿನವಾಗಿ ಘೋಷಿಸಿದೆ. ಅಂದಿನಿಂದ ಪ್ರತಿ ವರ್ಷ ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.

ಇದನ್ನೂ ಓದಿ: ಇಂದು ರಾಷ್ಟ್ರೀಯ ಸಂವಿಧಾನ ದಿನ: ಅಮೃತಮಹೋತ್ಸವ ಸಂಭ್ರಮದಲ್ಲಿ ನಮ್ಮ 'ಸಂವಿಧಾನ'

ABOUT THE AUTHOR

...view details