ಮುಂಬೈ(ಮಹಾರಾಷ್ಟ್ರ):ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ ಯಾತ್ರೆ' ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮದ ಬಳಿಕವೂ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ನ್ಯಾಯ ಯಾತ್ರೆ ಕೊನೆಯ ಕಾರ್ಯಕ್ರಮದ ಫೋಟೋ ಪೋಸ್ಟ್ ಮಾಡಿ, ದೇಶ ವಿಭಜಿಸುವ ಉದ್ದೇಶ ಹೊಂದಿರುವ ಶಕ್ತಿಯು I.N.D.I.A ಶಕ್ತಿಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಮುಂಬೈನಿಂದ ವಾಯ್ಸ್ ಆಫ್ ಹಿಂದೂಸ್ತಾನ್ ಹೊರಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಕಾರಾತ್ಮಕ ಶಕ್ತಿಯ ಮುಖವಾಡ ಧರಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಮೋದಿ ಭಾರತದ ಸಂಸ್ಥೆಗಳು, ರೈತರು, ಕಾರ್ಮಿಕರು, ಯುವಕರು, ಮಹಿಳೆಯರು, ಬಡವರು ಮತ್ತು ಸಣ್ಣ ಕೈಗಾರಿಕೆಗಳನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಇಂದು ದೇಶದಲ್ಲಿ ಭ್ರಷ್ಟಾಚಾರ ಏಕಸ್ವಾಮ್ಯ ಸಾಧಿಸುತ್ತಿದೆ. ದೇಶದಲ್ಲಿ ಕೆಲವೇ ಕೋಟ್ಯಧಿಪತಿ ಸ್ನೇಹಿತರಿಗೆ ಎಲ್ಲವನ್ನೂ ನೀಡಲಾಗುತ್ತಿದೆ ಎಂದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಥ ನಕಾರಾತ್ಮಕ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಸಮಯ ಬಂದಿದೆ. ಇದು ನಮ್ಮ, ನಿಮ್ಮ ಮತ್ತು ಪ್ರತಿಯೊಬ್ಬರ ಜವಾಬ್ದಾರಿ. ಈ ಪ್ರೀತಿಯ ದೇಶದಲ್ಲಿ ದ್ವೇಷ ಸೋಲುತ್ತದೆ, ಭಾರತ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ದೇಶದ ಯುವಕರಿಗೆ ಮತ್ತಷ್ಟು ಭರವಸೆಗಳನ್ನು ನೀಡಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ದೇಶದ ಯುವಕರೇ, ಕಾಂಗ್ರೆಸ್ ಪಕ್ಷ ನಿಮಗಾಗಿ ಐದು ಭರವಸೆಗಳನ್ನು ನೀಡುತ್ತಿದೆ. ಆ ಭರವಸೆ ನಿಮ್ಮ ಭವಿಷ್ಯ ಬದಲಾಯಿಸುತ್ತದೆ' ಎಂದಿದ್ದಾರೆ.
ರಾಹುಲ್ ಭರವಸೆಗಳು: