ಕರ್ನಾಟಕ

karnataka

ETV Bharat / bharat

ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 9.26 ಕೋಟಿ ರೈತರಿಗೆ ಹಣ ಬಿಡುಗಡೆ; ಹೀಗೆ ಪರಿಶೀಲಿಸಿ - PM KISAN SAMMAN NIDHI YOJANA - PM KISAN SAMMAN NIDHI YOJANA

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಗೆಲುವಿನ ಬಳಿಕ ವಾರಾಣಸಿಗೆ ಮೊದಲ ಭೇಟಿ ನೀಡಿದ್ದು, ಇಲ್ಲಿಯೇ ಅವರು ಪಿಎಂ ಕಿಸಾನ್​ ಸಮ್ಮಾನ್​ ಯೋನೆಜಯ 17ನೇ ಕಂತಿನ ಹಣ ಬಿಡುಗಡೆ ಮಾಡಿದರು.

ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ
ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 17ನೇ ಕಂತಿನ ಹಣ ಬಿಡುಗಡೆ (ETV Bharat)

By PTI

Published : Jun 18, 2024, 7:35 PM IST

Updated : Jun 18, 2024, 8:16 PM IST

ವಾರಾಣಸಿ (ಉತ್ತರಪ್ರದೇಶ):ತಮ್ಮನ್ನು ಸತತ ಮೂರನೇ ಬಾರಿಗೆ ಗೆಲ್ಲಿಸಿ ಸಂಸತ್ತಿಗೆ ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ವಾರಾಣಸಿಗೆ ಮಂಗಳವಾರ ಭೇಟಿ ನೀಡಿದರು. ಪ್ರಧಾನಿಯಾದ ಬಳಿಕ ಮೊದಲ ಕಡತಕ್ಕೆ ಸಹಿ ಹಾಕಿದಂತೆ ದೇಶದ ರೈತರಿಗೆ ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯ ಹಣವನ್ನೂ ಬಿಡುಗಡೆ ಮಾಡಿದರು.

ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 17ನೇ ಕಂತಿನ 20 ಸಾವಿರ ಕೋಟಿ ರೂಪಾಯಿ ನೆರವಿನ ಹಣವು 9.26 ಕೋಟಿ ರೈತರಿಗೆ ತಲುಪಲು ಚಾಲನೆ ನೀಡಿದರು. ಜೊತೆಗೆ, ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು ತರಬೇತಿ ಪಡೆದ 30 ಸಾವಿರಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರಮಾಣಪತ್ರವನ್ನೂ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ಅಭೂತಪೂರ್ವ ಮತ್ತು ಇತಿಹಾಸ ಸೃಷ್ಟಿಸಿದೆ. ರೈತರು ಮತ್ತು ಬಡವರಿಗೆ ಸಂಬಂಧಿಸಿದ ಹೊಸ ಸರ್ಕಾರದ ಮೊದಲ ನಿರ್ಧಾರವಾಗಿ ನೆರವಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಾಶಿ ವಿಶ್ವನಾಥ, ಗಂಗಾಮಾತೆ ಮತ್ತು ಕಾಶಿಯ ಜನರ ಪ್ರೀತಿಯಿಂದ ನಾನು ಮೂರನೇ ಬಾರಿಗೆ ದೇಶದ 'ಪ್ರಧಾನ ಸೇವಕ'ನಾಗಿ ಆಯ್ಕೆಯಾಗಿದ್ದೇನೆ ಎಂದರು.

ದೇಶದ 9.26 ಕೋಟಿಗೂ ಹೆಚ್ಚು ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20 ಸಾವಿರ ಕೋಟಿ ರೂಪಾಯಿಯ 17 ನೇ ಕಂತಿನ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಮುಂಗಾರು ಶುರುವಾಗುತ್ತಿದ್ದು, ಸರ್ಕಾರ ನೀಡಿದ ಹಣದಲ್ಲಿ ರೈತರು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬಳಸಿಕೊಳ್ಳಲು ನೆರವಾಗಲಿದೆ ಎಂದು ಹೇಳಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮತ್ತು ರಾಜ್ಯದ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ಕೃಷಿ ಸಚಿವಾಲಯದ ಪ್ರಕಾರ, ದೇಶಾದ್ಯಂತ 732 ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಒಂದು ಲಕ್ಷಕ್ಕೂ ಹೆಚ್ಚು ಮೂಲ ಕೃಷಿ ಸಹಕಾರ ಸಂಘಗಳು ಮತ್ತು 5 ಲಕ್ಷ ಜಂಟಿ ಸೇವಾ ಕೇಂದ್ರಗಳು ಸೇರಿದಂತೆ 2.5 ಕೋಟಿ ರೈತರು ಈ ಕಾರ್ಯಕ್ರಮದಲ್ಲಿ ಇದ್ದರು.

ಪಿಎಂ ಕಿಸಾನ್ ಹಣ ಹೀಗೆ ಚೆಕ್​ ಮಾಡಿ:

  • PM ಕಿಸಾನ್ ಫಲಾನುಭವಿ ರೈತರು ಖಾತೆಗೆ ಬಂದ ಹಣವನ್ನು ಚೆಕ್​ ಮಾಡಲು https://pmkisan.gov.in/ ಪೋರ್ಟಲ್​ ಅನ್ನು ತೆರೆಯಬೇಕು.
  • ನಂತರ Know Your Status ಆಯ್ಕೆಯನ್ನು ಕ್ಲಿಕ್ ಮಾಡಿ
  • ನಂತರ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ
  • ಅದರ ನಂತರ, GET DATA ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ

ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ತಿಳಿಯುವುದು ಹೇಗೆ?

  • ಮೊದಲು ನೀವು www.pmkisan.gov.in ವೆಬ್‌ಸೈಟ್ ತೆರೆಯಬೇಕು.
  • ವೆಬ್‌ಸೈಟ್‌ನಲ್ಲಿ "Beneficiary List" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಾಜ್ಯ, ಜಿಲ್ಲೆ, ಮಂಡಲ, ಗ್ರಾಮ ವಿವರಗಳನ್ನು ಆಯ್ಕೆ ಮಾಡಿ.
  • ಫಲಾನುಭವಿಗಳ ಪಟ್ಟಿಗಾಗಿ ''Get Report" ಅನ್ನು ಕ್ಲಿಕ್ ಮಾಡಿ.
  • ಆಗ ನಿಮ್ಮ ಗ್ರಾಮದ ಫಲಾನುಭವಿಗಳ ಹೆಸರುಗಳು ಅಲ್ಲಿ ಕಾಣಿಸುತ್ತವೆ. ಅವುಗಳಲ್ಲಿ ನಿಮ್ಮ ಹೆಸರಿದೆಯೇ? ಅಥವಾ ಇಲ್ಲವೇ ನೋಡಿಕೊಳ್ಳಿ

ಗಮನಿಸಿ:ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ ಬಗ್ಗೆ ನಿಮಗೆ ಏನಾದರೂ ಸಂದೇಹಗಳು ಇದ್ದರೆ ಅಥವಾ ನಿಮಗೆ ಏನಾದರೂ ಸಹಾಯ ಬೇಕಾದಲ್ಲಿ 155261 ಅಥವಾ 011-24300606 ಸಹಾಯವಾಣಿಗೆ ಕರೆ ಮಾಡಬಹುದು.

ಇದನ್ನೂ ಓದಿ:ರಾಜ್ಯದಲ್ಲಿ ಮತ್ತೆ ಚುನಾವಣೆ ಕಾವು; ಎಂಎಲ್​ಸಿ ಉಪ ಚುನಾವಣೆ ವೇಳಾಪಟ್ಟಿ ರಿಲೀಸ್​ - MLC By Election

Last Updated : Jun 18, 2024, 8:16 PM IST

ABOUT THE AUTHOR

...view details