ಕರ್ನಾಟಕ

karnataka

ETV Bharat / bharat

'ರಾಜಕೀಯ ಸ್ಟಾರ್ಟ್​ಅಪ್​ನಲ್ಲಿ ಪ್ರತಿ ಬಾರಿ ಫೇಲ್'​: ರಾಹುಲ್​ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ - PM Modi

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ರಾಜಕೀಯದಲ್ಲಿ ವೈಫಲ್ಯ ಕಾಣುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ವ್ಯಂಗ್ಯವಾಡಿದ್ದಾರೆ.

ರಾಹುಲ್​ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ
ರಾಹುಲ್​ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಪರೋಕ್ಷ ವಾಗ್ದಾಳಿ

By ANI

Published : Mar 20, 2024, 3:42 PM IST

ನವದೆಹಲಿ:"ಆರಂಭಿಸಿದ ಸ್ಟಾರ್ಟ್​ಅಪ್​ ಸಫಲವಾಗದಿದ್ದಲ್ಲಿ, ನೀವು ಹೊಸ ಯೋಜನೆಯೊಂದಿಗೆ ಮತ್ತೊಮ್ಮೆ ಪ್ರಯತ್ನಿಸುತ್ತೀರಿ. ಆದರೆ, ರಾಜಕೀಯದಲ್ಲಿ ಕೆಲವರನ್ನು ಹಲವು ಬಾರಿ ಲಾಂಚ್​ ಮಾಡುತ್ತಲೇ ಇದ್ದಾರೆ. ಆದರೆ, ಅವರು ಪ್ರತಿ ಬಾರಿಯೂ ವಿಫಲವಾಗುತ್ತಿದ್ದಾರೆ" ಇದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಪರೋಕ್ಷವಾಗಿ ತಿವಿದ ರೀತಿ.

ಇಲ್ಲಿ ಬುಧವಾರ ನಡೆದ ಸ್ಟಾರ್ಟ್‌ಅಪ್ ಮಹಾಕುಂಭಮೇಳದಲ್ಲಿ ಮಾತನಾಡಿದ ಪ್ರಧಾನಿ, ಸ್ಟಾರ್ಟ್‌ಅಪ್‌ಗಳು ಮತ್ತು ರಾಜಕೀಯದ ನಡುವಿನ ಸಾಮ್ಯತೆಯನ್ನು ಹೇಳುವ ಮೂಲಕ ಕಾಂಗ್ರೆಸ್​ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಲವರು ರಾಜಕೀಯದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಲು ಪ್ರಯತ್ನಿಸುತ್ತಾರೆ. ಆದರೆ, ಅವು ಎಂದಿಗೂ ಯಶಸ್ಸು ಕಾಣುವುದಿಲ್ಲ. ನಿಷ್ಕ್ರಿಯ ಪ್ರಯತ್ನವನ್ನೇ ಮತ್ತೆ ಮತ್ತೆ ಮಾಡಿದಲ್ಲಿ ಸಫಲತೆ ಕಾಣಲು ಹೇಗೆ ಸಾಧ್ಯ. ಮೂಲ ಸ್ಟಾರ್ಟ್‌ಅಪ್‌ಗಳು ಮತ್ತು ಹೊಸ ಸ್ಟಾರ್ಟ್​ಅಪ್​ಗಳ ನಡುವೆ ಹೆಚ್ಚಿನ ವ್ಯತ್ಯಾಸ ಇದೆ ಎಂದು ಹೇಳಿದರು.

ಜನರು ಆರಂಭಿಸುವ ಸ್ಟಾರ್ಟ್​ಅಪ್​ಗಳು ಹೊಸ ಆಲೋಚನೆಯೊಂದಿಗೆ ಬಂದರೆ, ರಾಜಕೀಯದ ಸ್ಟಾರ್ಟ್​ಅಪ್​ನಲ್ಲಿ ಹಳೆಯ ಪ್ರಯೋಗಗಳನ್ನೇ ಮಾಡುತ್ತಿದ್ದಾರೆ. ನೀವು ಪ್ರಯೋಗಶೀಲರಾಗಿದ್ದೀರಿ. ಬೇರೆಯವರು ವಿಫಲ ಆಲೋಚನೆಗಳನ್ನೇ ಪ್ರಯತ್ನಿಸುತ್ತಾರೆ ಎಂದು ಕುಟುಕಿದರು.

ಸೂಕ್ತ ಸಮಯದಲ್ಲಿ ನಿರ್ಧಾರ:ಭಾರತವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹೊಸ ಆವಿಷ್ಕಾರ ಮತ್ತು ಅಭಿವೃದ್ಧಿಯ ವೇಗದಲ್ಲಿ ಮುನ್ನುಗ್ಗುತ್ತಿದೆ. ಅದರ ಶಕ್ತಿ ಮತ್ತು ವೈಬ್ ಅದ್ಭುತವಾಗಿದೆ. ಸ್ಟಾರ್ಟ್​ಅಪ್​ಗಳಲ್ಲಿ ಮಾಡಲಾಗುತ್ತಿರುವ ಹೊಸ ಆವಿಷ್ಕಾರಗಳನ್ನು ವೀಕ್ಷಿಸಿದಾಗ, ಭಾರತದ ಭವಿಷ್ಯವು ಅನೇಕ ಯುನಿಕಾರ್ನ್‌ಗಳು ಮತ್ತು ಡೆಕಾಕಾರ್ನ್‌ಗಳ ಮೇಲೆ ಹೊಂದಿದೆ ಎಂದು ಭಾಸವಾಗುತ್ತದೆ. ಇಂತಹ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು, ಭಾರತವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದರು.

ಕಳೆದೊಂದು ದಶಕದಲ್ಲಿ ದೇಶವು ಸಾಫ್ಟ್‌ವೇರ್ ಮತ್ತು ಐಟಿ ಕ್ಷೇತ್ರದಲ್ಲಿ ಹೇಗೆ ದೊಡ್ಡ ಪ್ರಗತಿ ಕಂಡಿದೆ ಎಂಬುದನ್ನು ನಾವು ಗಮನಿಸಬಹುದು. ನಾವೀನ್ಯತೆ ಮತ್ತು ಅಭಿವೃದ್ಧಿಯ ವೇಗವನ್ನು ನಾವು ಗಮನಿಸಬಹುದು. ಸ್ಟಾರ್ಟ್​ಅಪ್ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರದ ಪಾತ್ರವನ್ನು ಪ್ರಧಾನಿ ಮೋದಿ ಹೊಗಳಿದರು.

ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟ್​ಅಪ್​ ಕೇಂದ್ರವಾಗಿದೆ. 1.25 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳು, 12 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸಿವೆ. 110 ಯುನಿಕಾರ್ನ್‌ಗಳನ್ನು ದೇಶ ಹೊಂದಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು 12,000 ಪೇಟೆಂಟ್‌ಗಳನ್ನು ನೋಂದಾಯಿಸಿವೆ ಎಂದು ಅವರು ವಿವರಿಸಿದರು.

2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 96.8 ಕೋಟಿ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಕೇರಳ, ತಮಿಳುನಾಡು ಅಧಿಕಾರಿಗಳಿಗೆ ಮಾಹಿತಿ ನೀಡಿದ ಎನ್ಐಎ

ABOUT THE AUTHOR

...view details