ವಾರಣಾಸಿ (ಉತ್ತರ ಪ್ರದೇಶ): ನಮ್ಮ ದೇಶದಲ್ಲಿ ಜಾತಿಯ ಹೆಸರಿನಲ್ಲಿ ಪ್ರಚೋದನೆ ಮತ್ತು ಸಂಘರ್ಷದಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದವರು ನಂಬಿಕೆ ಹೊಂದಿದ್ದಾರೆ. ದಲಿತರು ಮತ್ತು ವಂಚಿತರ ಅನುಕೂಲಕ್ಕಾಗಿ ರೂಪಿಸಿರುವ ಯೋಜನೆಗಳನ್ನು ಅವರು ವಿರೋಧಿಸುತ್ತಾರೆ. ಇದನ್ನು ಇಂದು ಪ್ರತಿಯೊಬ್ಬ ದಲಿತ ಮತ್ತು ಹಿಂದುಳಿದ ವ್ಯಕ್ತಿಯು ನೆನಪಿನಲ್ಲಿಟ್ಟುಕೊಳ್ಳಬೇಕು. ಬಡವರ ಕಲ್ಯಾಣದ ಹೆಸರಿನಲ್ಲಿ ಅವರು (ಪ್ರತಿಪಕ್ಷದವರು) ತಮ್ಮ ಪರಿವಾರಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಸಂತ ರವಿದಾಸ್ ಅವರ 647ನೇ ಜಯಂತಿ ನಿಮಿತ್ತ ಅವರ ಪ್ರತಿಮೆ ಅನಾವರಣಗೊಳಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮೋದಿ, ಇಂದು ನಮ್ಮ ಸರ್ಕಾರ ಸಂತ ರವಿದಾಸ್ ಅವರ ಆಲೋಚನೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಸರ್ಕಾರ ಎಲ್ಲರಿಗೂ ಸೇರಿದ್ದು, ಬಿಜೆಪಿ ಸರ್ಕಾರದ ಯೋಜನೆಗಳು ಕೂಡ ಎಲ್ಲರಿಗೂ ಸೇರಿವೆ. ಈ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ ಮತ್ತು ಸಬ್ ಕಾ ಪ್ರಯಾಸ ಮಂತ್ರವು 140 ಕೋಟಿ ದೇಶವಾಸಿಗಳೊಂದಿಗೆ ಸಂಪರ್ಕ ಸಾಧಿಸುವ ಮಂತ್ರವೂ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ:ರಾತ್ರಿಯೇ ಶಿವಪುರ ಮಾರ್ಗ ಪರಿಶೀಲಿಸಿದ ಪ್ರಧಾನಿ ಮೋದಿ: ವಾರಾಣಸಿಯಲ್ಲಿ ಇಂದು ಹಲವು ಯೋಜನೆಗಳಿಗೆ ಚಾಲನೆ