ಕರ್ನಾಟಕ

karnataka

ETV Bharat / bharat

ಪೇಟಾ ಜೊತೆಗೂಡಿ ಕೊಚ್ಚಿ ದೇಗುಲಕ್ಕೆ ಯಾಂತ್ರಿಕ ಆನೆ ದಾನ ನೀಡಿದ ನಟಿ ಪ್ರಿಯಾಮಣಿ - donate mechanical elephant

ಕೇರಳದ ದೇಗುಲಕ್ಕೆ ಪರಿಚಯಗೊಂಡ ಎರಡನೇ ಯಾಂತ್ರಿಕ ಆನೆ ಇದಾಗಿದೆ.

peta-actor-priyamani-donate-mechanical-elephant-to-kerala-temple
peta-actor-priyamani-donate-mechanical-elephant-to-kerala-temple

By PTI

Published : Mar 18, 2024, 2:03 PM IST

ಕೊಚ್ಚಿ:ಇಲ್ಲಿನ ತೃಕ್ಕಾಯಿಲ್ ಮಹಾದೇವ ದೇಗುಲದಲ್ಲಿ ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆಗೆ ಬಳಕೆ ಮಾಡದಂತೆ ಅಥವಾ ಬಾಡಿಗೆ ಪಡೆಯದಂತೆ ನಿರ್ಧಾರ ಮಾಡಿದೆ. ಈ ಹಿನ್ನೆಲೆ ಲಾಭರಹಿತ ಸಂಸ್ಥೆಯಾಗಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಜೊತೆ ನಟಿ ಪ್ರಿಯಾಮಣಿ ತೃಕ್ಕಾಯಿಲ್​ ಮಹಾದೇವ ದೇಗುಲಕ್ಕೆ ಜೀವಂತ ಆನೆಯ ತದ್ರೂಪದಂತಹ ಯಾಂತ್ರಿಕ (ಮೆಕಾನಿಕಲ್​ ಅಥವಾ ರೋಬೊಟಿಕ್​) ಆನೆಯನ್ನು ದಾನ ಮಾಡಿದ್ದಾರೆ.

ಈ ಯಾಂತ್ರಿಕ ಆನೆಗೂ ಮಹಾದೇವನ್​ ಎಂದು ನಾಮಕರಣ ಮಾಡಲಾಗಿದ್ದು, ದೇಗುಲದ ಆಚರಣೆಯಲ್ಲಿ ಸುರಕ್ಷಿತ ಮತ್ತು ಹಿಂಸೆ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಎಂದು ಪೇಟಾ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೇರಳದ ದೇಗುಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ.

ಯಾಂತ್ರಿಕ ಆನೆ ದಾನ ನೀಡಿರುವ ಪ್ರಿಯಾಮಣಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪೇಟಾ ಇಂಡಿಯಾದ ಜೊತೆಗೂಡಿ ಯಾಂತ್ರಿಕ ಆನೆ ದಾನ ಮಾಡುತ್ತಿರುವುದು ತೃಪ್ತಿ ನೀಡಿದೆ. ಈ ಮೂಲಕ ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು. ಆಧುನಿಕ ತಂತ್ರಜ್ಞಾನಗಳು ಎಂದರೆ ನಾವು ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಅಭ್ಯಾಸವನ್ನು ನಡೆಸಬಹುದು. ಈ ಮೂಲಕ ಪ್ರಾಣಿಗಳಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

ಈ ಆನೆ ದಾನದ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ತೃಕ್ಕಾಯಿಲ್​ ಮಹಾದೇವ ದೇಗುಲ ಮಾಲೀಕ ತೆಕ್ಕಿಣಿಯೆದತ್ ವಲ್ಲಭನ್ ನಂಬೂಧರಿ ಮಾತನಾಡಿ, ಈ ಯಾಂತ್ರಿಕ ಆನೆ ಮಹಾದೇವನ್​​ ಅನ್ನು ಬಳಸಲು ನಮಗೆ ಖುಷಿಯಾಗಿದೆ. ಎಲ್ಲಾ ಪ್ರಾಣಿಗಳನ್ನು ದೇವರು ನಿರ್ಮಿಸಿದ್ದಾರೆ. ಅವು ಕೂಡ ಮನುಷ್ಯರಂತೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬದೊಂದಿಗೆ ಜೀವಿಸಬೇಕು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ತ್ರಿಸ್ಸೂರ್​ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನ ಮೊದಲ ಬಾರಿಗೆ ಹಬ್ಬಗಳಲ್ಲಿ ಜೀವಂತ ಪ್ರಾಣಿಗಳ ಬಳಕೆ ಮಾಡುವುದಿಲ್ಲ. ಬದಲಾಗಿ ದೇಗುಲದ ಸಂಪ್ರದಾಯಗಳ ಆಚರಣೆಗೆ ರೋಬೊಟಿಕ್​ ಆನೆ ಬಳಕೆ ಮಾಡಲು ನಿರ್ಧರಿಸುವುದಾಗಿ ತಿಳಿಸಿತು. ಅದರಂತೆ ಮೊದಲ ಯಾಂತ್ರಿಕೃತ ಆನೆ ತ್ರಿಸ್ಸೂರ್​ ದೇಗುಲದಲ್ಲಿ ಕಾಣಿಸಿಕೊಂಡಿತು.

ಕೇರಳ ಸೇರಿದಂತೆ ದೇಶದಲ್ಲಿ ಸೆರೆಯಲ್ಲಿರುವ ಅನೇಕ ಆನೆಗಳನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡು ದೇಗುಲದ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತಿತ್ತು. ಜೊತೆಗೆ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಇವುಗಳನ್ನು ತಮ್ಮ ಆದೇಶಕ್ಕೆ ಪಳಗಿಸಲು ಹಿಂಸೆ ನೀಡಲಾಗುತ್ತಿತ್ತು ಎಂದು ಪೇಟಾ ಈ ಹಿಂದೆ ಆರೋಪಿಸಿತ್ತು.

ಇದನ್ನೂ ಓದಿ: ವಾಹನಗಳಿಗೆ ಭಾರತ್​​ ಸರಣಿಯ ನಂಬರ್​ ಪ್ಲೇಟ್​: ಅನುಕೂಲವೇನು? ಅರ್ಜಿ ಸಲ್ಲಿಸುವುದು ಹೇಗೆ?

ABOUT THE AUTHOR

...view details