ಕರ್ನಾಟಕ

karnataka

ETV Bharat / bharat

ಬಿಜೆಪಿಯೊಂದಿಗೆ ಒಡಿಶಾದ ಜನರು ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದಾರೆ: ಪ್ರಧಾನಿ ಮೋದಿ - Prime Minister Narendra Modi - PRIME MINISTER NARENDRA MODI

''ಒಡಿಶಾದ ಜನರು ಬಿಜೆಪಿ ಜೊತೆಗೆ ಆಳವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ಕಮಲ ಅರಳಲು ಮನಸ್ಸು ಮಾಡಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ODISHA  BHUBANESWAR  LOK SABHA ELECTION 2024  PRIME MINISTER NARENDRA MODI
ಚುನಾವಣಾ ರೋಡ್‌ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ (ETV Bharat)

By PTI

Published : May 11, 2024, 11:30 AM IST

ಭುವನೇಶ್ವರ್ (ಒಡಿಶಾ): ''ಒಡಿಶಾದ ಜನರು ಬಿಜೆಪಿಯೊಂದಿಗೆ ಆಳವಾದ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಕಮಲ ಅರಳಿಸಲು ಮನಸ್ಸು ಮಾಡಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

''ರಾಜ್ಯದ ನಾಗರಿಕರು ಬಿಜೆಡಿ ಸರ್ಕಾರದೊಂದಿಗೆ ಸಂಪರ್ಕ ಕಡಿತಗೊಂಡಿದ್ದಾರೆ'' ಎಂದ ಅವರು, ''ಭಾಷಾ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಡಿಶಾದ ಜನರು ಮತ್ತು ಬಿಜೆಪಿ ನಡುವೆ ಆಳವಾದ ಭಾವನಾತ್ಮಕ ಸಂಪರ್ಕವು ಬೆಳೆದಿದೆ. ಜನರಲ್ಲಿ ಈ ಉತ್ಸಾಹವನ್ನು ನಾನು ಎಂದಿಗೂ ನೋಡಿಲ್ಲ'' ಇಲ್ಲಿ ನಡೆದ ರೋಡ್‌ಶೋ ವೇಳೆ ಖಾಸಗಿ ಚಾನಲ್‌ಗೆ ತಿಳಿಸಿದರು.

''ರಾಜ ಮತ್ತು ಮಹಾರಾಜರ ಯುಗದಲ್ಲೂ, ಆಡಳಿತಗಾರರು ಮತ್ತು ಸಾಮಾನ್ಯ ಜನರ ನಡುವೆ ಸ್ವಲ್ಪ ಸಂಪರ್ಕವಿತ್ತು. ಆದ್ರೆ, ಒಡಿಶಾದಲ್ಲಿ ಈಗ ಇದರ ಕೊರತೆಯಿದೆ'' ಎಂದು ಮೋದಿ ಕಿಡಿಕಾರಿದರು.

BJD ಜೊತೆಗೆ ಚುನಾವಣಾ ಪೂರ್ವ ಮೈತ್ರಿಗೆ ಬಿಜೆಪಿಯ ಪ್ರಯತ್ನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ''ಕೆಲವು ವಿಷಯಗಳಲ್ಲಿ ನಾವು ಸಂಸತ್ತಿನಲ್ಲಿ (BJD) ಬೆಂಬಲವನ್ನು ಪಡೆಯುತ್ತೇವೆ. ಆದರೆ, ರಾಜ್ಯ ವಿಧಾನಸಭೆಯಲ್ಲಿ ನಾವು ವಿರೋಧಿಸುತ್ತಲೇ ಬಂದಿದ್ದೇವೆ'' ಎಂದರು.

2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪ್ರಧಾನಿ ಭುವನೇಶ್ವರದಲ್ಲಿ ಇದೇ ರೀತಿಯ ರೋಡ್ ಶೋ ನಡೆಸಿದ್ದರು. ಮೋದಿ ಅವರು ಇಂದು ರಾಜ್ಯದಲ್ಲಿ ಮೂರು ಚುನಾವಣಾ ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.(ಪಿಟಿಐ)

ಇದನ್ನೂ ಓದಿ:ಎನ್​ಡಿಎ ಸೇರಿಕೊಳ್ಳುವಂತೆ ಶರದ್ ಪವಾರ್​ಗೆ ಆಫರ್​ ನೀಡಿದ ಪ್ರಧಾನಿ ಮೋದಿ - Pm Modi Offered To Sharad Pawar

ABOUT THE AUTHOR

...view details