ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಅಕ್ಟೋಬರ್ 01 ರಂದು ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ 3ನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಕಾಶ್ಮೀರ ವಿಭಾಗದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ, ಜಮ್ಮು ವಿಭಾಗದಲ್ಲಿ ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಉತ್ತರ ಕಾಶ್ಮೀರದ ಬಾರಾಮುಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದು, ದೇಶದ ಗಮನ ಸೆಳೆದಿದೆ. ಇನ್ನು ಜಮ್ಮು ಜಿಲ್ಲೆಯ ಅಖ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡದಲ್ಲಿರುವುದು ಕೇವಲ ಮೂವರು ಅಭ್ಯರ್ಥಿಗಳು.
ಕಾಶ್ಮೀರ ವಿಭಾಗದಲ್ಲಿ, ಕರ್ನಾಹ್, ಟ್ರೆಹ್ಗಾಮ್, ಕುಪ್ವಾರಾ, ಲೋಲಾಬ್, ಹಂದ್ವಾರಾ, ಲಂಗೇಟ್, ಸೋಪೋರ್, ರಫಿಯಾಬಾದ್, ಉರಿ, ಬಾರಾಮುಲ್ಲಾ, ಗುಲ್ಮಾರ್ಗ್, ವಾಗೂರಾ-ಕ್ರೀರಿ, ಪಟ್ಟಾನ್, ಸೋನಾವರಿ, ಬಂಡಿಪೋರಾ ಮತ್ತು ಗುರೇಜ್ (ಎಸ್‌ಟಿ) ಒಳಗೊಂಡ 16 ವಿಧಾನಸಭಾ ಕ್ಷೇತ್ರಗಳಿವೆ.
ಜಮ್ಮು ವಿಭಾಗದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಉಧಮ್‌ಪುರ ಪಶ್ಚಿಮ, ಉಧಮ್‌ಪುರ ಪೂರ್ವ, ಚೆನಾನಿ, ರಾಮನಗರ (SC), ಬನಿ, ಬಿಲ್ಲವರ್, ಬಸೋಹ್ಲಿ, ಜಸ್ರೋಟಾ, ಕಥುವಾ (SC), ಹೀರಾನಗರ, ರಾಮಗಢ (SC), ಸಾಂಬಾ, ವಿಜಯಪುರ, ಬಿಷ್ನಾಹ್ (SC), ಸುಚೇತ್‌ಗಢ (SC) ಒಳಗೊಂಡಿದೆ. ಜಮ್ಮು ದಕ್ಷಿಣದಲ್ಲಿ ಜಮ್ಮು ಪೂರ್ವ, ನಗ್ರೋಟಾ, ಜಮ್ಮು ಪಶ್ಚಿಮ, ಜಮ್ಮು ಉತ್ತರ, ಮರ್ಹ್ (ಎಸ್‌ಸಿ), ಅಖ್ನೂರ್ (ಎಸ್‌ಸಿ) ಮತ್ತು ಛಾಂಬ್ ಈ ಹಂತದಲ್ಲಿ ಮತದಾನ ನಡೆಯಲಿದೆ.