ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮಕುಸಿತ: ಓರ್ವ ವಿದೇಶಿಗ ಸಾವು, ಐವರ ರಕ್ಷಣೆ - Gulmarg avalanche

ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮಕುಸಿತದಿಂದ ಓರ್ವ ವಿದೇಶಿಗ ಮೃತಪಟ್ಟಿರುವ ಘಟನೆ ವರದಿಯಾಗಿದೆ.

One foreigner dead, another missing in Gulmarg avalanche
ಜಮ್ಮು-ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಹಿಮಕುಸಿತ: ಓರ್ವ ವಿದೇಶಿಗ ಸಾವು, ಐವರ ರಕ್ಷಣೆ

By PTI

Published : Feb 22, 2024, 5:03 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಹಿಮಕುಸಿತ ಸಂಭವಿಸಿ ಓರ್ವ ವಿದೇಶಿಗ ಸಾವನ್ನಪ್ಪಿದ್ದು, ಮತ್ತೊಬ್ಬರು ನಾಪತ್ತೆಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ಗುರುವಾರ ನಡೆದಿದೆ. ಇದೇ ವೇಳೆ, ಐವರ ಸ್ಕೀಯಿಂಗ್ ಪಟುಗಳನ್ನು ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್‌ದೂರಿ ಇಳಿಜಾರಿನಲ್ಲಿ ಹಿಮಕುಸಿತವು ಅಪ್ಪಳಿಸಿದೆ. ಇದರಿಂದ ಹಲವಾರು ಸ್ಕೀಯಿಂಗ್ ಪಟು ಸಿಕ್ಕಿಬಿದ್ದಿದ್ದಾರೆ. ಈ ವಿದೇಶಿಗರು ಸ್ಥಳೀಯ ನಿವಾಸಿಗಳಲ್ಲದೇ ಸ್ಕೀಯಿಂಗ್ ಇಳಿಜಾರುಗಳಿಗೆ ಹೋಗಿದ್ದರು. ಸದ್ಯ ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರದ ಗಸ್ತು ತಂಡವು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಿಮಪಾತಕ್ಕೆ ಬಾಲಕಿ ಸೇರಿ ಇಬ್ಬರು ಬಲಿ : ವಿದೇಶಿ ಪ್ರವಾಸಿಗನ ರಕ್ಷಣೆ

ABOUT THE AUTHOR

...view details