ಕರ್ನಾಟಕ

karnataka

ETV Bharat / bharat

ಡಾನಾ ಚಂಡಮಾರುತದ ಅಬ್ಬರದ ನಡುವೆ ನಿರಾಶ್ರಿತ ಕೇಂದ್ರದಲ್ಲಿನ 1,600 ಗರ್ಭಿಣಿಯರಿಗೆ ಹೆರಿಗೆ

ಬಾಲಸೋರ್​ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರನ್ನು ಅಂದರೆ 1,72,916 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇದರ ನಂತರದ ಸ್ಥಾನದಲ್ಲಿ ಮಯೂರ್​ಬಂಜ್​ ಇದೆ.

Odisha CM Says 1600 Pregnant Women Gave Birth In Relief Centres Amid Cyclone Dana
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

By ETV Bharat Karnataka Team

Published : 6 hours ago

ಭುವನೇಶ್ವರ:ಒಡಿಶಾದಲ್ಲಿ ಡಾನಾ ಅಬ್ಬರ ಜೋರಾಗಿದ್ದು, ಭಾರಿ ಮಳೆಯಾಗುತ್ತಿದೆ. ಈ ನಡುವೆ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಜನರ ಸುರಕ್ಷಿತ ಸ್ಥಳಾಂತರ ನಡೆದಿದ್ದು, ಇದರಲ್ಲಿ 4,431 ಗರ್ಭಿಣಿಯರನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅದರಲ್ಲಿ 1,600 ಗರ್ಭಿಣಿಯರಿಗೆ ಹೆರಿಗೆಯಾಗಿದೆ ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.

ಗುರುವಾರ ರಾಜ್ಯದಲ್ಲಿ 5,54,888 ಜನರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದ್ದು, ಶುಕ್ರವಾರ ಮುಂಜಾನೆ ವೇಳೆಗೆ ಇದು 6 ಲಕ್ಷದ ಗಡಿ ದಾಡಿದೆ. ಚಂಡಮಾರುತದ ನಿರಾಶ್ರಿತರ ಕೇಂದ್ರದಲ್ಲಿ 6,008 ಮಂದಿ ಇದ್ದು, ಅವರಿಗೆ ಆಹಾರ, ವೈದ್ಯಕೀಯ ಸೇವೆ, ನೀರು ಸೇರಿದಂತೆ ಅಗತ್ಯ ಪೂರೈಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಾಲಸೋರ್​ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರನ್ನು ಅಂದರೆ 1,72,916 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇದರ ನಂತರದ ಸ್ಥಾನದಲ್ಲಿ ಮಯೂರ್​ಬಂಜ್​ ಇದ್ದು, ಇಲ್ಲಿ 1,00,000 ಜನರನ್ನ ಸ್ಥಳಾಂತರಗೊಳಿಸಲಾಗಿದೆ.

ಭದ್ರಕ್​ನಲ್ಲಿ 75,000 ಮಂದು ಜಜ್ಪುರ್​​ನಲ್ಲಿ 58,000, ಕೇಂದ್ರಪರದಲ್ಲಿ 46,000 ಜನರ ಸ್ಥಳಾಂತರ ಮಾಡಲಾಗಿದೆ. ಆರಂಭದಲ್ಲಿ 10 ಲಕ್ಷ ಜನರ ಸ್ಥಳಾಂತರ ಮಾಡುವ ಗುರಿಯನ್ನು ಸರ್ಕಾರ ಹೊಂದಿತ್ತು.

ರಾಜ್ಯದಲ್ಲಿನ ಚಂಡಮಾರುತದ ಪರಿಸ್ಥಿತಿ, ಅದರ ನಿರ್ವಹಣೆ ಸೇರಿದಂತೆ ಎಲ್ಲ ಅಗತ್ಯ ಮಾಹಿತಿಗಳನ್ನು ಪ್ರಧಾನ ಮಂತ್ರಿ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾಗೆ ನೀಡಲಾಗಿದ್ದು, ರಾಜ್ಯ ಸರ್ಕಾರ ನಡೆಸಿರುವ ಕ್ರಮಗಳಿಗೆ ಕೇಂದ್ರ ಕೂಡ ತೃಪ್ತಿ ವ್ಯಕ್ತಪಡಿಸಿದೆ ಎಂದು ಸಿಎಂ ತಿಳಿಸಿದರು.

ಹಾನಿ ಪರಿಶೀಲನೆ ನಡೆಸಿದ ಸಿಎಂ:ಡಾನಾ ಚಂಡಮಾರುತ ಅಪ್ಪಳಿಸದ ಬೆನ್ನಲ್ಲೇ ಗುರುವಾರ ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಗಂಟೆಗೆ 110 ಕಿ.ಮೀ ವೇಗದಲ್ಲಿ ಗಾಳಿಯು ಬೀಸುತ್ತಿದೆ. ಶುಕ್ರವಾರ ಹಾನಿ ಮತ್ತು ಪರಿಹಾರ ಕ್ರಮ ಕುರಿತು ಸಿಎಂ ಸಭೆ ನಡೆಸಿದ್ದು, ಈ ವೇಳೆ ನಾವು ಶೂನ್ಯ ಅಪಾಯದ ಸಾಧನೆ ಮಾಡಿದ್ದು, ಕಳೆದ ಮಧ್ಯರಾತ್ರಿಯಿಂದಲೇ ಪುನರ್ವಸತಿಕರಣ ಮತ್ತು ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದ ಸಿಎಂ ತಿಳಿಸಿದ್ದಾರೆ.

ಚಂಡಮಾರುತದ ಪರಿಣಾಮ ನಿರ್ವಹಣೆಯಲ್ಲಿ ಎನ್​ಡಿಆರ್​ಎಫ್​, ಒಡಿಆರ್​ಎಎಫ್​, ಅಗ್ನಿಶಾಮಕ, ಆರೋಗ್ಯ ಹಾಗೂ ಜನರ ಪಾತ್ರ ಹೆಚ್ಚಿದೆ. ಜಿಲ್ಲಾಧಿಕಾರಿಗಳಿಗೆ ಹಾನಿ ಕುರಿತು ಮೌಲ್ಯಮಾಪನ ನಡೆಸುವಂತೆ ಸೂಚಿಸಲಾಗಿದೆ. ಮರ, ವಿದ್ಯುತ್​ ಕಂಬಗಳು ಬಿದ್ದ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಇದನ್ನೂ ಓದಿ: ಒಡಿಶಾ ಕರಾವಳಿಯಲ್ಲಿ ಡಾನಾ ಅಬ್ಬರ: ಭಾರಿ ಮಳೆಗೆ ಧರೆಗುರುಳಿದ ಮರಗಳು, ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ABOUT THE AUTHOR

...view details