IRCTC Sri Lanka Ramayana Yatra: ಶ್ರೀಲಂಕಾ. ಇದು ರಾಮಾಯಣ ಕಾಲದ ಪ್ರಾಚೀನ ಇತಿಹಾಸವನ್ನು ಹೊಂದಿರುವ ದ್ವೀಪ ರಾಷ್ಟ್ರ. ರಮಣೀಯ ಭೂದೃಶ್ಯಗಳನ್ನು ನೀವು ನೋಡಬೇಕೆಂದು ಬಯಸುತ್ತಿದ್ದರೆ ಇದು ನಿಮಗೆ ಹೇಳಿ ಮಾಡಿಸಿದ ತಾಣ. ಇದಕ್ಕಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನಿಮಗಾಗಿ ಅದ್ಭುತ ಪ್ಯಾಕೇಜ್ ತಂದಿದೆ. ಈ ಪ್ಯಾಕೇಜ್ ಎಷ್ಟು ದಿನಗಳವರೆಗೆ ಇರುತ್ತದೆ? ಯಾವ ಸ್ಥಳಗಳನ್ನು ನೋಡಬಹುದು? ಪ್ರವಾಸಕ್ಕೆ ತಗಲುವ ವೆಚ್ಚವೆಷ್ಟು ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ.
IRCTC 'ಶ್ರೀಲಂಕಾ ರಾಮಾಯಣ ಯಾತ್ರೆ' ಎಂಬ ಪ್ಯಾಕೇಜ್ ಅನ್ನು ಶಂಕರಿ ದೇವಿ ಶಕ್ತಿ ಪೀಠದೊಂದಿಗೆ ನೀಡುತ್ತಿದೆ. ಈ ಪ್ರವಾಸದಲ್ಲಿ ಕೊಲಂಬೊ, ದಂಬುಲ್ಲಾ, ಕ್ಯಾಂಡಿ, ನುವಾರ ಎಲಿಯಾದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೆ ನೀವು ಭೇಟಿ ನೀಡಬಹುದು. 5 ರಾತ್ರಿ ಮತ್ತು 6 ದಿನಗಳನ್ನು ಪ್ಯಾಕೇಜ್ ಒಳಗೊಂಡಿರುತ್ತದೆ. ಪ್ರವಾಸವನ್ನು ಹೈದರಾಬಾದ್‌ನಿಂದ ವಿಮಾನ ಪ್ರಯಾಣದ ಮೂಲಕ ನಿರ್ವಹಿಸಲಾಗುತ್ತದೆ.
1ನೇ ದಿನ: ಬೆಳಿಗ್ಗೆ 8 ಗಂಟೆಗೆ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ವಿಮಾನದಲ್ಲಿ ಹೊರಟು ಮಧ್ಯಾಹ್ನ 2 ಗಂಟೆಗೆ ಶ್ರೀಲಂಕಾ ತಲುಪುವುದು. ಅಲ್ಲಿಂದ ದಂಬುಲಾಗೆ ತೆರಳುವುದು. ದಾರಿಯಲ್ಲಿ ಚಿಲಾವ್‌ನಲ್ಲಿರುವ ಮುನೀಶ್ವರಂ ದೇವಸ್ಥಾನಕ್ಕೆ ಭೇಟಿ. ಬಳಿಕ ಮನವೇರಿ ದೇವಸ್ಥಾನ ತಲುಪುವುದು. ಅಲ್ಲಿಂದ ದಂಬುಲಕ್ಕೆ ಪ್ರಯಾಣ. ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ ಮತ್ತು ರಾತ್ರಿ ಅಲ್ಲಿಯೇ ಉಳಿಯವುದು.
2ನೇ ದಿನ: ಹೋಟೆಲ್‌ನಲ್ಲಿ ಉಪಹಾರದ ನಂತರ, ದಂಬುಲ್ಲಾ ಗುಹಾ ದೇವಾಲಯಕ್ಕೆ ಭೇಟಿ. ಊಟದ ನಂತರ ಟ್ರಿಂಕೋಮಲಿಗೆ ತೆರಳಿ ತಿರುಕೋಣೇಶ್ವರ ಮತ್ತು ಲಕ್ಷ್ಮೀನಾರಾಯಣ ಪೆರುಮಾಳ್ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ದಂಬುಲ್ಲಾಗೆ ಹಿಂತಿರುಗುವುದು. ರಾತ್ರಿ ಇಲ್ಲಿಯೇ ಹೋಟೆಲ್‌ನಲ್ಲಿ ಉಳಿದುಕೊಳ್ಳುವುದು.
3ನೇ ದಿನ: ಉಪಹಾರದ ನಂತರ ಕ್ಯಾಂಡಿಗೆ ಹೋಗುವುದು. ದಿನವಿಡೀ, ಜೆಮ್ಸ್ ಫ್ಯಾಕ್ಟರಿ/ಬಾಟಿಕ್ ಫ್ಯಾಕ್ಟರಿ, ಟೂತ್ ಟೆಂಪಲ್ (ವಿಶ್ವ ಪ್ರಸಿದ್ಧ ಗೌತಮ ಬುದ್ಧ ದೇವಸ್ಥಾನ)ನಂತಹ ಅನೇಕ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುವುದು. ಸಂಜೆಯ ವೇಳೆಯೂ ಹಲವು ಸ್ಥಳಗಳಿಗೆ ಭೇಟಿ ನೀಡುವುದು. ಕ್ಯಾಂಡಿಯಲ್ಲಿ ರಾತ್ರಿ ತಂಗುವುದು.
4ನೇ ದಿನ: ಬೆಳಗಿನ ಉಪಹಾರದ ನಂತರ ನುವಾರ ಎಲಿಯಾಗೆ ಹೋಗುವುದು. ಮಾರ್ಗಮಧ್ಯೆ ರಾಂಬೋದ ಹನುಮಾನ್ ದೇವಸ್ಥಾನಕ್ಕೆ ಭೇಟಿ. ನಂತರ ಸೀತಾ ಅಮ್ಮನ ದೇವಸ್ಥಾನ, ಸೀತಾ ಎಲಿಯಾ, ಅಶೋಕ ವಾಟಿಕಾಗೆ ಭೇಟಿ. ನಂತರ ಕ್ಯಾಂಡಿಗೆ ಹಿಂತಿರುಗುವುದು. ಕ್ಯಾಂಡಿ ಹೋಟೆಲ್‌ನಲ್ಲಿ ರಾತ್ರಿ ವಿಶ್ರಾಂತಿ.
5ನೇ ದಿನ: ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ಔಟ್ ಮಾಡಿ ಪಿನ್ನವಾಲಾ ಆನೆ ಅನಾಥಾಶ್ರಮಕ್ಕೆ ಭೇಟಿ. ನಂತರ ಕೊಲಂಬೊ, ಪಂಚಮುಗ ಆಂಜನೇಯರ್ ದೇವಾಲಯ, ಕೆಲನಿಯಾ ಬುದ್ಧ ದೇವಾಲಯಕ್ಕೆ ಭೇಟಿ. ಸಂಜೆ ಕೊಲಂಬೊದಲ್ಲಿ ಶಾಪಿಂಗ್ ಮಾಡಿ ರಾತ್ರಿ ಅಲ್ಲೇ ಉಳಿದುಕೊಳ್ಳುವುದು.
6ನೇ ದಿನ: ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ಔಟ್ ಮಾಡಿ ಮಧ್ಯಾಹ್ನದವರೆಗೆ ಕೊಲಂಬೊದಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ನಂತರ ವಿಮಾನ ನಿಲ್ದಾಣಕ್ಕೆ ಪಯಣ. ಮಧ್ಯಾಹ್ನ 3 ಗಂಟೆಗೆ ಕೊಲಂಬೊದಿಂದ ಹೊರಟು ಸಂಜೆ ಹೈದರಾಬಾದ್ ತಲುಪುವ ಮೂಲಕ ಪ್ರವಾಸ ಪೂರ್ಣ.
ಪ್ರವಾಸದ ದರ ವಿವರ:
- ಸಿಂಗಲ್ ಶೇರಿಂಗ್ಗೆ ₹83,170
- ಡಬಲ್ ಶೇರಿಂಗ್ಗೆ ₹68,420
- ಟ್ರಿಪಲ್ ಶೇರಿಂಗ್ಗೆ ₹67,480.
- ಹಾಸಿಗೆ ಇರುವ ಮಕ್ಕಳಿಗೆ ₹43,400, ₹41,160
ಪ್ಯಾಕೇಜ್ ಏನೆಲ್ಲ ಒಳಗೊಂಡಿದೆ?:
- ವಿಮಾನ ಶುಲ್ಕಗಳು
- ಹೋಟೆಲ್ ವಸತಿ
- 5 ಉಪಹಾರಗಳು, 5 ಊಟಗಳು ಮತ್ತು 5 ರಾತ್ರಿಯ ಊಟಗಳು ಸೇರಿವೆ.
- ಪ್ರವಾಸ ಮಾರ್ಗದರ್ಶಿ ಲಭ್ಯ.
- ಪ್ಯಾಕೇಜ್ ನಮೂದಿಸಿದ ಸ್ಥಳಗಳ ಪ್ರವೇಶ ಶುಲ್ಕವನ್ನೂ ಒಳಗೊಂಡಿದೆ.
- ಪ್ರಯಾಣ ವಿಮೆ ಲಭ್ಯ.
- ಪ್ರಸ್ತುತ ಈ ಪ್ರವಾಸವು ನವೆಂಬರ್ 28ರಂದು ಲಭ್ಯ.
- ಪ್ರವಾಸದ ಬಗ್ಗೆ ಸಂಪೂರ್ಣ ವಿವರ ಮತ್ತು ಪ್ಯಾಕೇಜ್ ಬುಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಐಆರ್ಸಿಟಿಸಿ ವೆಬ್ಸೈಟ್ನ್ನು ಸಂಪರ್ಕಿಸಬಹುದು: https://www.irctctourism.com/pacakage_description?packageCode=SHO10