ETV Bharat / state

ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್: ಖಾಸಗಿ ರೆಸಾರ್ಟ್​ಗಳಿಗೆ ಹಲವು ರೂಲ್ಸ್ - RULES FOR CELEBRATING THE NEW YEAR

ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧ ಹೇರಲಾಗಿದೆ.

ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್
ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ (ETV Bharat)
author img

By ETV Bharat Karnataka Team

Published : Dec 29, 2024, 3:18 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಡಿ.31 ಮತ್ತು 2025ರ ಜ.1 ರಂದು ಬಂಡೀಪುರ‌ ಅರಣ್ಯ ಇಲಾಖೆ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಸಫಾರಿ ವ್ಯವಸ್ಥೆ ಇರಲಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿ ಮೋಜು ಮಸ್ತಿ ಮಾಡುವುದರಿಂದ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡ ಅರಣ್ಯ ಇಲಾಖೆ, ಡಿ.31 ಹಾಗೂ ಜ.1ರಂದು ಎರಡು ದಿನಗಳ ಕಾಲ ವಸತಿ ಗೃಹಗಳ ವಾಸ್ತವ್ಯಕ್ಕೆ ಅವಕಾಶ ನಿರಾಕರಿಸಿದೆ. ಇದರಿಂದ ಮೋಜು ಮಸ್ತಿಗೆ ಕಡಿವಾಣ ಬಿದ್ದಿದೆ.

ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್: ಖಾಸಗಿ ರೆಸಾರ್ಟ್​ಗಳಿಗೆ ಹಲವು ರೂಲ್ಸ್ (ETV Bharat)

ಬಂಡೀಪುರ ಅರಣ್ಯವು ದೇಶದ ಪ್ರಮುಖ ವನ್ಯಜೀವಿ ತಾಣವಾಗಿರುವ ಹಿನ್ನೆಲೆ ಪ್ರತಿನಿತ್ಯ ಕೇರಳ, ತಮಿಳುನಾಡು, ಬೆಂಗಳೂರು, ಮೈಸೂರು ಹಾಗು ವಿದೇಶಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಬಂಡೀಪುರದಲ್ಲಿ ವಾಸ್ತವ್ಯ ಹೂಡಲು ಬಯಸುತ್ತಾರೆ. ಈ ಮಧ್ಯೆ ಹೊಸ ವರ್ಷಾಚರಣೆಯನ್ನು ಬಂಡೀಪುರದಲ್ಲೇ ಮಾಡಬೇಕು ಎಂದು ಪ್ರವಾಸಿಗರು ಯೋಜನೆ ರೂಪಿಸುವ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ನಿರ್ಬಂಧ ಹೇರಲಾಗಿದೆ.

ಬಂಡೀಪುರ ವ್ಯಾಪ್ತಿಯ ಖಾಸಗಿ ವಸತಿ ಗೃಹಗಳು ಮತ್ತು ಹೋಂ ಸ್ಟೇಗಳಿಂದಲೂ ಸಹ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹಲವು ನಿಯಮಗಳನ್ನು ವಿಧಿಸಲಾಗಿದೆ. ಅಧಿಕ ಪ್ರಮಾಣದ ಶಬ್ಧ ಮಾಡಬಾರದು, ಲೈಟಿಂಗ್ಸ್ ಬಳಸಬಾರದು, ಡಿಜೆ ಬಳಸುವಂತಿಲ್ಲ, ಫೈರ್ ಕ್ಯಾಂಪ್ ಹಾಕಬಾರದು ಎನ್ನುವುದು ಸೇರಿದಂತೆ ಇನ್ನಿತ್ಯಾದಿ ಹಲವು ಎಚ್ಚರಿಕೆ ನೀಡಲಾಗಿದೆ.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೆಚ್ಚು ಪ್ರವಾಸಿಗರ ನಿರೀಕ್ಷೆ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹಿಮವದ್​ ಗೋಪಾಲಸ್ವಾಮಿ ಬೆಟ್ಟಕ್ಕೆ ಹೊಸ ವರ್ಷದ ದಿನದಂದು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವ ಕಾರಣ ಕೆಎಸ್‍ಆರ್​ಟಿಸಿ ವತಿಯಿಂದಲೂ ಸಹ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್‍ಗಳನ್ನು ಬಿಡಲು ಚಿಂತನೆ ನಡೆಸಲಾಗಿದೆ.

ಎಂದಿನಂತೆ ಸಫಾರಿ: ಬಂಡೀಪುರದಲ್ಲಿ ಹೊಸ ವರ್ಷಕ್ಕೆ ಕೇವಲ ವಸತಿಗೃಹಕ್ಕೆ ಮಾತ್ರ ನಿರ್ಬಂಧ ಹಾಕಿರುವ ಅರಣ್ಯ ಇಲಾಖೆ ಎಂದಿನಂತೆ ಸಫಾರಿ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ದಿನದಂತೆ ಬೆಳಗ್ಗೆ ಮತ್ತು ಸಂಜೆ ವೇಳೆ ಸಫಾರಿ ಇರಲಿದ್ದು, ಇದರ ಸೌಲಭ್ಯವನ್ನು ಪ್ರವಾಸಿಗರು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಆನ್​ಲೈನ್ ಮೂಲಕ ಅಂದಿನ ಸಫಾರಿ ಟಿಕೆಟ್‍ಗಳು ಕೂಡ ಬುಕ್ ಆಗಿವೆ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕ್ರಿಸ್ಮಸ್, ಹೊಸ ವರ್ಷಾಚರಣೆಗೆ 7 ಲಕ್ಷ ಜನ ಸೇರುವ ಸಾಧ್ಯತೆ; ಅಹಿತಕರ ಘಟನೆ ನಡೆದರೆ ಡಿಸಿಪಿಗಳೇ ಹೊಣೆ- ಪರಮೇಶ್ವರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.