ETV Bharat / bharat

ಕಾಶ್ಮೀರದಲ್ಲಿ 'ಮಹಾರಾಜ ದರ್ಬಾರ್ ಮೂವ್' ಸ್ಥಾಪನೆಗೆ ಪ್ರತಿಭಟನೆ: ಹೀಗಂದ್ರೆ ಏನು? ಸಿಎಂಗೆ ಸಂಕಷ್ಟ - MP ENGINEER RASHID

ಜಮ್ಮು ಕಾಶ್ಮೀರದಲ್ಲಿ ಸ್ಥಗಿತಗೊಂಡಿರುವ 'ಮಹಾರಾಜ ದರ್ಬಾರ್ ಮೂವ್' ಅನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಅಬ್ದುಲ್ ರಶೀದ್ ಶೇಖ್, ಅವಾಮಿ ಇತೆಹಾದ್ ಪಕ್ಷದ ತಮ್ಮ ಕಾರ್ಯಕರ್ತರೊಂದಿಗೆ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದರು.

First protest against Omar's government, MP Engineer Rashid demands Darbar Move revival
ಕಾಶ್ಮೀರದಲ್ಲಿ 'ಮಹಾರಾಜ ದರ್ಬಾರ್ ಮೂವ್' ಸ್ಥಾಪನೆಗಾಗಿ ಪ್ರತಿಭಟನೆ (ETV Bharat)
author img

By ETV Bharat Karnataka Team

Published : Oct 25, 2024, 6:35 PM IST

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಸಿಎಂ ಒಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ವಾರದಲ್ಲೇ ಮೊದಲ ಸಾರ್ವಜನಿಕ ಪ್ರತಿಭಟನೆ ಎದುರಿಸಿದ್ದಾರೆ.

ಈಗಾಗಲೇ ಸ್ಥಗಿತಗೊಂಡಿರುವ 'ಮಹಾರಾ ದರ್ಬಾರ್‌ ಮೂವ್‌' ಪದ್ಧತಿಯನ್ನು ಪುನಃ ಜಾರಿಗೆ ತರುವಂತೆ ಸಂಸತ್ ಸದಸ್ಯ ಅಬ್ದುಲ್ ರಶೀದ್ ಶೇಖ್ (ಅಕಾ ಇಂಜಿನಿಯರ್ ರಶೀದ್) ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಕಾಶ್ಮೀರದ ವಿವಿಧೆಡೆ ನಡೆದ ಪ್ರತಿಭಟನೆ ಹಾಗೂ ಮೆರವಣಿಗೆಯಿಂದಾಗಿ ರಾಜ್ಯ ಸರ್ಕಾರ ಸಮಸ್ಯೆ ಎದುರಿಸಬೇಕಾಯಿತು.

'ಮಹಾರಾ ದರ್ಬಾರ್‌ ಮೂವ್‌' ಅಡಿಯಲ್ಲಿ ಎಲ್ಲ ಸಚಿವಾಲಯಗಳು ಮತ್ತು ಕಚೇರಿಗಳು ಬೇಸಿಗೆಯ ಆರು ತಿಂಗಳು ಶ್ರೀನಗರ ಮತ್ತು ವರ್ಷದ ಉಳಿದ ಭಾಗ ಜಮ್ಮುವಿನಲ್ಲಿ ಕಾರ್ಯನಿರ್ವಹಿಸುವುದು ರೂಢಿ. ಇದನ್ನು 1872ರಲ್ಲಿ ಅಂದಿನ ಮಹಾರಾಜ ಗುಲಾಬ್ ಸಿಂಗ್ ಪ್ರಾರಂಭಿಸಿದ್ದರು. ಅಂದಿನಿಂದ ಇತ್ತೀಚಿನವರೆಗೂ ಈ ಪದ್ಧತಿ ನಡೆದುಕೊಂಡು ಬಂದಿತ್ತು. ಆದರೆ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಪದ್ಧತಿಯಿಂದ ವಾರ್ಷಿಕ 200 ಕೋಟಿ ರೂ.ಗೂ ಅಧಿಕ ವೆಚ್ಚವಾಗುತ್ತಿದ್ದು, ಬೊಕ್ಕಸಕ್ಕೆ ಹೊರೆಯಾಗಿದೆ ಎಂದು 2020ರಲ್ಲಿ ಈ ಸಂಪ್ರದಾಯವನ್ನು ಸ್ಥಗಿತಗೊಳಿಸಿದ್ದಾರೆ.

''ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ನೇತಾರ ಒಮರ್ ಅಬ್ದುಲ್ಲಾ ಅವರು ಸ್ಥಗಿತಗೊಂಡಿರುವ ಈ ದರ್ಬಾರ್‌ ಮೂವ್‌ ಪದ್ಧತಿಯನ್ನು ಪುನಃ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೂ ಉಲ್ಲೇಖಿಸಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ವಾರ ಕಳೆದರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಜಮ್ಮು ಅಥವಾ ಶ್ರೀನಗರ ಯಾವುದೆಂದು ಜನರಿಗೆ ತಿಳಿಸಬೇಕಿದೆ. ಜನರು ಶ್ರೀನಗರಕ್ಕೆ ಹೋಗಬೇಕೋ ಅಥವಾ ಜಮ್ಮುವಿಗೆ ಹೋಗಬೇಕೋ ಎಂಬ ಗೊಂದಲದಲ್ಲಿದ್ದಾರೆ. ತಾವು ತಮ್ಮ ಸಮಸ್ಯೆಗಳನ್ನು ಎಲ್ಲಿ ಹೇಳಿಕೊಳ್ಳಬೇಕೆಂದು ಗೊತ್ತಾಗದೇ ಬೇಸತ್ತಿದ್ದಾರೆ. ಅಲ್ಲದೇ ತಮ್ಮ ದಾಖಲೆಗಳು ಶ್ರೀನಗರದಲ್ಲಿದೆಯೇ ಅಥವಾ ಜಮ್ಮುವಿನಲ್ಲಿದೆಯೇ ಎಂಬ ಗೊಂದಲ ಕೂಡ ಅವರನ್ನು ಆವರಿಸಿದೆ. ಈ ಸಮಸ್ಯೆ ನಿವಾರಣೆಯಾಗಬೇಕು. ಹಾಗಾಗಿ ಒಂದೋ ದರ್ಬಾರ್ ಮೂವ್ ಅನ್ನು ಪುನಃಸ್ಥಾಪಿಸಬೇಕು ಅಥವಾ ಶ್ರೀನಗರವನ್ನು ಜಮ್ಮು ಮತ್ತು ಕಾಶ್ಮೀರದ ಶಾಶ್ವತ ರಾಜಧಾನಿಯನ್ನಾಗಿ ಮಾಡಬೇಕು'' ಎಂದು ಅಬ್ದುಲ್ ರಶೀದ್ ಶೇಖ್ ಒತ್ತಾಯಿಸಿದರು.

ಅಬ್ದುಲ್ ರಶೀದ್ ಶೇಖ್ ಅವರ ಪಕ್ಷವಾದ ಅವಾಮಿ ಇತ್ತೆಹಾದ್ ಪಾರ್ಟಿ (ಎಐಪಿ)ಯ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಿಎಂ ಒಮರ್ ಅಬ್ದುಲ್ಲಾ ಮತ್ತು ಅವರ ಕ್ಯಾಬಿನೆಟ್ ಮಂತ್ರಿಗಳು ಕೆಲಸ ಮಾಡುವ ಸಿವಿಲ್ ಸೆಕ್ರೆಟರಿಯೇಟ್​ನಲ್ಲಿ ಮೆರವಣಿಗೆ ನಡೆಸಿದ್ದರಿಂದ ರಾಜ್ಯ ಸರ್ಕಾರ ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.

ಇದನ್ನೂ ಓದಿ: ನ್ಯಾಯಾಂಗ ಕಲಾಪ ನಡೆಸಿದ ಹೈದರಾಬಾದ್​ ಪೊಲೀಸ್ ಆಯುಕ್ತ: ಗಲಭೆಕೋರರಿಗೆ ಖಡಕ್ ವಾರ್ನಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.