ಕೋಟಾ (ರಾಜಸ್ಥಾನ):ವೈದ್ಯಕೀಯ ಪ್ರವೇಶಕ್ಕಾಗಿ ನಡೆದ NEET UG 2024ರ ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಈ ಬಾರಿ ಪರೀಕ್ಷೆಯಲ್ಲಿ ಟಾಪರ್‌ಗಳ ಸಂಖ್ಯೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಕಟ್‌ಆಫ್ ಕೂಡ ಹೆಚ್ಚಾಗಿದೆ. ದೆಹಲಿ ಏಮ್ಸ್ ಟಾಪರ್ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿದೆ. ಆದರೆ, ಈ ಬಾರಿಯ ಪ್ರವೇಶ ಪರೀಕ್ಷೆಯಲ್ಲಿ ಪರಿಪೂರ್ಣ ಅಂಕ ಗಳಿಸಿದ ಟಾಪರ್‌ಗಳ ಸಂಖ್ಯೆ 67 ಇದೆ. ಇದರ ಹೊರತಾಗಿಯೂ, ಹಲವು ಟಾಪರ್‌ಗಳಿಗೆ ದೆಹಲಿ ಏಮ್ಸ್‌ನಲ್ಲಿ ಸೀಟ್ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಕೋಟಾದ ವಿದ್ಯಾರ್ಥಿಗಳು 49ನೇ ರ‍್ಯಾಂಕ್‌ವರೆಗೆ ಮಾತ್ರ ಸೀಟುಗಳನ್ನು ಪಡೆಯಬಹುದು. ಆದರೆ, ಈ ಬಾರಿ 720ಕ್ಕೆ 720 ಅಂಕ ಗಳಿಸಿದ ಟಾಪರ್‌ಗಳ ಸಂಖ್ಯೆ 67 ಆಗಿದೆ. ಇದು ಸಾಮಾನ್ಯ ಕೋಟಾದ ಸೀಟುಗಳಿಗೆ ಹೋಲಿಸಿದರೆ 18 ಸೀಟುಗಳು ಹೆಚ್ಚಿವೆ.
ಡಾ.ಬ್ರಿಜೇಶ್ ಮಹೇಶ್ವರಿ ಪ್ರತಿಕ್ರಿಯೆ:ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಡಾ.ಬ್ರಿಜೇಶ್ ಮಹೇಶ್ವರಿ ಮಾತನಾಡಿ, ''ಈ ಬಾರಿ 67 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಪಡೆದಿದ್ದಾರೆ. ಪ್ರತಿಷ್ಠಿತ ದೆಹಲಿ ಏಮ್ಸ್ ನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸೀಟು ಪಡೆಯುವುದು ಕಷ್ಟ. ಈ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಆದ್ಯತೆಗಾಗಿ ಅಖಿಲ ಭಾರತ ರ‍್ಯಾಂಕ್‌ವರೆಗೆ ಒನ್ ಬದಲಿಗೆ 1.01ರಿಂದ 1.67 ರವರೆಗೆ ನೀಡಲಾಗಿದೆ'' ಎಂದು ತಿಳಿಸಿದರು.
ದೆಹಲಿ ಏಮ್ಸ್‌ನಲ್ಲಿ ಸಾಮಾನ್ಯ ವರ್ಗಕ್ಕೆ 49 ಸೀಟುಗಳು ಮೀಸಲು: ದೆಹಲಿ ಏಮ್ಸ್‌ನಲ್ಲಿ 132 ಸೀಟುಗಳಿವೆ. ಅವುಗಳಲ್ಲಿ 125 ಸೀಟುಗಳು ಮುಕ್ತ ಕೋಟಾದಲ್ಲಿವೆ. ಉಳಿದ 7 ಸೀಟುಗಳು ಎನ್‌ಆರ್‌ಐ ಕೋಟಾಕ್ಕೆ ಮೀಸಲು ಆಗಿವೆ. ಸಾಮಾನ್ಯ, ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ಸೇರಿದಂತೆ ವಿವಿಧ ವರ್ಗಗಳಿಗೆ ಸೀಟುಗಳು ಮೀಸಲು ಇಡಲಾಗಿದೆ. ಇನ್ನು ಸಾಮಾನ್ಯ ವರ್ಗದಲ್ಲಿ 49 ಸೀಟುಗಳು ಇರುತ್ತವೆ. ಇದರಿಂದಾಗಿ ಮೊದಲ 49 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇದರ ನಂತರ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಗಳಿಸಿದರೂ ಮತ್ತೊಂದು ಸಂಸ್ಥೆಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕೋಟಾದ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಬ್ರಿಜೇಶ್ ಮಹೇಶ್ವರಿ ವಿವರಿಸಿದರು.
ಕಳೆದ ವರ್ಷ 710 ಅಂಕ ಪಡೆದವರಿಗೆ ದೆಹಲಿ ಏಮ್ಸ್‌ನಲ್ಲಿ ಸೀಟು:ಕಳೆದ ವರ್ಷ 2023ರ ಅಖಿಲ ಭಾರತ 15 ಪ್ರತಿಶತ ಕೋಟಾ ಕೌನ್ಸೆಲಿಂಗ್ ಪ್ರಕಾರ, ದೆಹಲಿ AIIMS ಅನ್ನು ದೆಹಲಿಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 56ನೇ ಶ್ರೇಣಿಯಲ್ಲಿ ಪಾಸಾದವರಿಗೂ ಸೀಟುಗಳು ಲಭಿಸಿದ್ದವು. ಏಕೆಂದರೆ, ಇದಕ್ಕಿಂತ ಮೇಲಿನ ಶ್ರೇಯಾಂಕದ 7 ಅಭ್ಯರ್ಥಿಗಳು ದೆಹಲಿ ಏಮ್ಸ್ ಬದಲಿಗೆ ಇತರ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕಳೆದ ವರ್ಷ 720ರಿಂದ 710 ಅಂಕಗಳನ್ನು 48 ಅಭ್ಯರ್ಥಿಗಳಿದ್ದರು. ಈ ಬಾರಿ 720 ರಿಂದ 705 ಅಂಕ ಗಳಿಸಿದವರ ಸಂಖ್ಯೆ 540ಕ್ಕೂ ಹೆಚ್ಚು ಅಭ್ಯರ್ಥಿಗಳು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಸೀಟು ಹಂಚಿಕೆಯಲ್ಲಿ ಉನ್ನತ ಶ್ರೇಣಿಯ ಅಭ್ಯರ್ಥಿಗಳಿಗೆ ಮಾತ್ರ ಪ್ರತಿಷ್ಠಿತ ಸಂಸ್ಥೆಗಳು ಸಿಗುತ್ತವೆ.