ಕರ್ನಾಟಕ

karnataka

ಇಂದು ರಾಷ್ಟ್ರೀಯ ಪ್ರಸಾರ ದಿನ: ಭಾರತದ ಬೆಳವಣಿಗೆಯಲ್ಲಿ ಪ್ರಸಾರ ಕ್ಷೇತ್ರದ ಪಾತ್ರ - National Broadcasting Day

By ETV Bharat Karnataka Team

Published : Jul 23, 2024, 8:51 AM IST

ಜುಲೈ 23. ಈ ದಿನವನ್ನು ಭಾರತದಲ್ಲಿ 'ರಾಷ್ಟ್ರೀಯ ಪ್ರಸಾರ ದಿನ' ಎಂದು ಆಚರಿಸಲಾಗುತ್ತದೆ. ದೇಶದಲ್ಲಿ 'ಪ್ರಸಾರ ಉದ್ಯಮದ ವಿಜಯದ ಆಚರಣೆ' ಎಂಬುದು ಈ ಬಾರಿಯ ಥೀಮ್​.

National Broadcasting Day
ರಾಷ್ಟ್ರೀಯ ಪ್ರಸಾರ ದಿನ (ETV Bharat)

ಹೈದರಾಬಾದ್: ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವ ವಲಯಗಳ ಪೈಕಿ 'ಪ್ರಸಾರ ಕ್ಷೇತ್ರ'ವೂ ಒಂದು. ಈ ಉದ್ಯಮ ರೋಮಾಂಚಕ, ಕ್ರಿಯಾತ್ಮಕ ಮತ್ತು ಅತ್ಯಂತ ವೇಗವಾಗಿ ವಿಕಸನಗೊಳ್ಳುತ್ತಿದೆ. ದೇಶದ ತಾಂತ್ರಿಕ ಪರಿಣತಿ ಮತ್ತು ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರಸಾರ ಕ್ಷೇತ್ರ ಅನೇಕ ವರ್ಷಗಳಿಂದ ನಿರಂತರವಾಗಿ ಜಗತ್ತಿಗೆ ಪರಿಚಯಿಸುತ್ತಿದೆ.

ಡಿಜಿಟಲ್ ಕ್ರಾಂತಿ ಮತ್ತು ತಂತ್ರಜ್ಞಾನದ ಪ್ರಗತಿಯೊಂದಿಗೆ ಈ ಕ್ಷೇತ್ರ ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುವಲ್ಲಿ, ಸೃಜನಶೀಲತೆಯನ್ನು ಬೆಳೆಸುವಲ್ಲಿ ಹಾಗು ಜಾಗತಿಕವಾಗಿ ದೇಶದ ಪ್ರತಿಷ್ಠೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತಿದೆ. ಪ್ರಸಾರ ಕ್ಷೇತ್ರ ಇಂದು ದೇಶದ ಸಾಂಸ್ಕೃತಿಕ ರಾಯಭಾರಿ ಎಂದರೆ ಉತ್ಪ್ರೇಕ್ಷೆಯಲ್ಲ.

ಈ ದಿನ 'ಆಲ್ ಇಂಡಿಯಾ ರೇಡಿಯೋ' (ಎಐಆರ್) ಎಂದು ಕರೆಯಲ್ಪಡುವ ದೇಶದ ಮೊದಲ ರೇಡಿಯೋ ಪ್ರಸಾರದ ಪ್ರಾರಂಭವನ್ನು ಸೂಚಿಸುತ್ತದೆ. ಆಧುನಿಕ ಭಾರತವನ್ನು ರೂಪಿಸುವಲ್ಲಿ ಮತ್ತು ಸಂವಹನದ ಹೊಸ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಪ್ರಸಾರದ ಪಾತ್ರ ಹಿರಿದು ಎಂಬ ವಿಷಯದ ಕುರಿತು ಆಲ್ ಇಂಡಿಯಾ ರೇಡಿಯೋ (ಎಐಆರ್) ನವದೆಹಲಿಯಲ್ಲಿ ವಿಚಾರ ಸಂಕಿರಣ ಆಯೋಜಿಸಿದೆ.

1927ರ ಜುಲೈ 22ರಂದು ಖಾಸಗಿ ಅಧೀನದ ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಕಂಪನಿಯ ಅಡಿಯಲ್ಲಿ ಬಾಂಬೆ ಸ್ಟೇಷನ್‌ನಿಂದ ದೇಶದ ಮೊದಲ ರೇಡಿಯೋ ಪ್ರಸಾರ ಪ್ರಾರಂಭವಾಯಿತು. 1936ರ ಜೂನ್ 8ರಂದು ಭಾರತೀಯ ರಾಜ್ಯ ಪ್ರಸಾರ ಸೇವೆಯು ಆಲ್ ಇಂಡಿಯಾ ರೇಡಿಯೋ (ಎಐಆರ್) ಆಗಿ ಮಾರ್ಪಟ್ಟಿತು. ಸೆಂಟ್ರಲ್ ನ್ಯೂಸ್ ಆರ್ಗನೈಜೇಶನ್ (ಸಿಎನ್ಒ) ಆಗಸ್ಟ್ 1937ರಲ್ಲಿ ಅಸ್ತಿತ್ವಕ್ಕೆ ಬಂತು. ಅದೇ ವರ್ಷ, ಎಐಆರ್ ಸಂವಹನ ಇಲಾಖೆಯಡಿ ಬಂತು. ನಾಲ್ಕು ವರ್ಷಗಳ ನಂತರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.

ಥೀಮ್: 2024ರ ರಾಷ್ಟ್ರೀಯ ಪ್ರಸಾರ ದಿನದಲ್ಲಿ ಯಾವುದೇ ನಿರ್ದಿಷ್ಟ ವಿಷಯವಿಲ್ಲ. ಆದರೆ ದೇಶದ ಪ್ರಸಾರ ಉದ್ಯಮದ ವಿಜಯವನ್ನು ಆಚರಿಸುತ್ತಿದೆ. ಆಯಾ ವರ್ಷಗಳಲ್ಲಿ ಅದರ ಬೆಳವಣಿಗೆ ಮತ್ತು ಯಶಸ್ಸಿಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುತ್ತದೆ.

ವಿವಿಧ ವಾಹಿನಿಗಳು ಮತ್ತು ರೇಡಿಯೋ ಕೇಂದ್ರಗಳು ದೇಶದಲ್ಲಿ ಪ್ರಸಾರ ಉದ್ಯಮದ ಇತಿಹಾಸ ಮತ್ತು ವಿಕಾಸದ ಕುರಿತ ವಿಶೇಷ ಕಾರ್ಯಕ್ರಮಗಳನ್ನು ಇಂದು ಪ್ರಸಾರ ಮಾಡುತ್ತವೆ. ಪ್ರಸಾರ ಉದ್ಯಮದ ಪ್ರಮುಖ ವ್ಯಕ್ತಿಗಳೊಂದಿಗೆ ಸಂದರ್ಶನ, ಚರ್ಚೆ ಮತ್ತು ಸಾಕ್ಷ್ಯಚಿತ್ರಗಳನ್ನು ಇದು ಒಳಗೊಂಡಿದೆ.

ಮಹತ್ವ: 1927ರಲ್ಲಿ ಮೊಟ್ಟಮೊದಲ ರೇಡಿಯೋ ಕೇಂದ್ರ ಸ್ಥಾಪನೆಯಾಯಿತು. 1927ರಲ್ಲಿ ಈ ದಿನದಂದು, ಭಾರತೀಯ ಟೆಲಿಕಾಂ ಸಂಸ್ಥೆ (ಐಬಿಸಿ) ಬಾಂಬೆಯಿಂದ ಅತ್ಯಂತ ಸ್ಮರಣೀಯ ಪ್ರಸಾರ ಮಾಡಿತು. ಈ ಪ್ರಸಾರವು ದೇಶದಲ್ಲಿ ಅತ್ಯಗತ್ಯ ಸಂವಹನ ವಿಧಾನವಾಗಲು ಅಡಿಪಾಯ ಹಾಕಿತು. 1930ರಲ್ಲಿ ಭಾರತೀಯ ಬ್ರಾಡ್‌ಕಾಸ್ಟಿಂಗ್ ಕಂಪನಿಯ ರಾಷ್ಟ್ರೀಕರಣದ ನಂತರ, ಆಲ್ ಇಂಡಿಯಾ ರೇಡಿಯೋ (ಎಐಆರ್) ಸ್ಥಾಪಿಸಲಾಯಿತು. ಆಕಾಶವಾಣಿ ಜನಸಾಮಾನ್ಯರಲ್ಲಿ ತನ್ನ ಪ್ರಭಾವ ವಿಸ್ತರಿಸಿತು. ಮುಂದೆ, ಭಾರತದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಎಐಆರ್ ಬೇರ್ಪಡಿಸಲಾಗದ ಸಾಧನವಾಯಿತು. ಸುದ್ದಿ, ಸಂಗೀತ ಮತ್ತು ಸಾರ್ವಜನಿಕ ಸೇವಾ ಪ್ರಕಟಣೆಗಳಿಗೆ ವೇದಿಕೆ ಒದಗಿಸಿತು ಎಂಬುದು ಇತಿಹಾಸ.

ಸ್ವಾತಂತ್ರ್ಯ ಚಳವಳಿ ಮತ್ತು ನಂತರದ ರಾಷ್ಟ್ರ ನಿರ್ಮಾಣ ಪ್ರಯತ್ನಗಳು, 1983ರಲ್ಲಿ ಭಾರತದ ಕ್ರಿಕೆಟ್ ವಿಶ್ವಕಪ್ ಗೆಲುವು ಸೇರಿದಂತೆ ದೇಶದ ಇತಿಹಾಸದ ಪ್ರಮುಖ ಕ್ಷಣಗಳಲ್ಲಿ ರೇಡಿಯೋ ನಿರ್ಣಾಯಕ ಪಾತ್ರ ವಹಿಸಿದೆ. ಭಾರತೀಯ ಸಮಾಜದ ಮೇಲೆ ರೇಡಿಯೋ ಪ್ರಸಾರದ ಪ್ರಭಾವ ಮತ್ತು ಡಿಜಿಟಲ್ ಯುಗದಲ್ಲೂ ಪ್ರಸ್ತುತತೆಯನ್ನು ಸಂಭ್ರಮಿಸಲು ರಾಷ್ಟ್ರೀಯ ಪ್ರಸಾರ ದಿನಾಚರಣೆ ಅತ್ಯಂತ ಸೂಕ್ತ.

ಇದನ್ನೂ ಓದಿ:ಇಂದು ಕೇಂದ್ರ ಬಜೆಟ್​: ನಿರ್ಮಲಾ ಸೀತಾರಾಮನ್‌ರಿಂದ ದಾಖಲೆಯ 7ನೇ ಆಯವ್ಯಯ! ಎಲ್ಲಿ ನೇರಪ್ರಸಾರ? ನಿರೀಕ್ಷೆಗಳೇನು? - Union Budget 2024

ABOUT THE AUTHOR

...view details