ಜಲವಾರ್(ರಾಜಸ್ಥಾನ):ರಾಜ್ಯದಜಲವಾರ್ ಜಿಲ್ಲೆಯ ಪಗಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳ ಗುಂಪೊಂದು ಡಂಪರ್ ಟ್ರಕ್ ಹರಿಸಿ ಐವರನ್ನು ನಿರ್ದಯವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಸಾವಿಗೀಡಾದವರ ಪೈಕಿ ಇಬ್ಬರು ಸಹೋದರರು ಸೇರಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಕುರಿತು ಮಾಹಿತಿ ನೀಡಿದ ಭವಾನಿಮಂಡಿ ಡಿಎಸ್ಪಿ ಪ್ರೇಮ್ ಚೌಧರಿ, ''ತಡರಾತ್ರಿ ಯಾವುದೋ ವಿಚಾರಕ್ಕೆ ಎರಡು ಗುಂಪಿಗಳ ನಡುವೆ ಜಗಳ ನಡೆದಿದೆ. ನಂತರ ಐವರು ಪಗರಿಯಾ ಪೊಲೀಸ್ ಠಾಣೆಗೆ ದೂರು ದಾಖಲಿಸುವುದಾಗಿ ಹೇಳಿ ಹೊರಟಿದ್ದರು. ಇದರಿಂದ ಕೋಪಗೊಂಡ ಗುಂಪೊಂದು ಡಂಪರ್ ಟ್ರಕ್ ಅನ್ನು ಮತ್ತೊಂದು ಗುಂಪಿನ ಇಬ್ಬರು ಸಹೋದರರು ಸೇರಿದಂತೆ ಐವರ ಮೇಲೆ ಹರಿಸಿ ಹತ್ಯೆ ಮಾಡಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ'' ಎಂದರು.