ಕರ್ನಾಟಕ

karnataka

ETV Bharat / bharat

96 ಎನ್​​ಕೌಂಟರ್​ಗಳಲ್ಲಿ 180 ನಕ್ಸಲರು ಹತ: 229 ಶಸ್ತ್ರಾಸ್ತ್ರಗಳು ಭದ್ರತಾ ಪಡೆಗಳ ವಶ

ಛತ್ತೀಸ್​ಗಢದ ಬಸ್ತಾರ್​ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಎನ್​​ಕೌಂಟರ್​ಗಳಲ್ಲಿ ಈ ವರ್ಷ 189 ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲರು ಹತ
ನಕ್ಸಲರು ಹತ (ETV Bharat)

By ETV Bharat Karnataka Team

Published : Nov 12, 2024, 5:16 PM IST

ಬಸ್ತಾರ್ (ಛತ್ತೀಸ್​ಗಢ):ನಕ್ಸಲ್ ಸಮಸ್ಯೆ ವಿರುದ್ಧದ ಹೋರಾಟದಲ್ಲಿ ಈ ವರ್ಷ ಭರ್ಜರಿ ಯಶಸ್ಸು ಸಿಕ್ಕಿದೆ. ಕಳೆದ 309 ದಿನಗಳಲ್ಲಿ 189 ನಕ್ಸಲೀಯರು ಹತರಾಗಿದ್ದಾರೆ. ಪೊಲೀಸರು ಎಲ್ಲ ಶವಗಳನ್ನು ಪತ್ತೆ ಮಾಡಿದ್ದಾರೆ. ಲೂಟಿ ಮಾಡಿದ್ದ 10 ಕೋಟಿ ರೂಪಾಯಿ, 229 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಸ್ತಾರ್ ರೇಂಜ್ ಐಜಿ ಪಿ.ಸುಂದರರಾಜ್ ತಿಳಿಸಿದರು.

ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಈ ವರ್ಷ 96 ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ ಒಟ್ಟು 195ಕ್ಕೂ ಹೆಚ್ಚು ನಕ್ಸಲೀಯರು ಹತರಾಗಿರುವ ಸಾಧ್ಯತೆ ಇದೆ. ಅದರಲ್ಲಿ ಪೊಲೀಸರು 189 ನಕ್ಸಲೀಯರ ಶವಗಳನ್ನು ವಶಪಡಿಸಿಕೊಂಡಿದ್ದಾರೆ. ಹತ್ಯೆಯಾದ ಮಾವೋವಾದಿಗಳಿಗೆ 9 ಕೋಟಿ 72 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಭದ್ರತಾ ಪಡೆಗಳು ಹಲವು ಮಾರಕಾಸ್ತ್ರಗಳನ್ನೂ ವಶಪಡಿಸಿಕೊಂಡಿವೆ. ನಕ್ಸಲೀಯರ ದಾಳಿಯಲ್ಲಿ ಲೂಟಿ ಮಾಡಿದ್ದ ಹಲವು ಮಾರಕ ಆಯುಧಗಳೂ ಅದರಲ್ಲಿವೆ. ಒಟ್ಟು 229 ಆಧುನಿಕ ಶಸ್ತ್ರಾಸ್ತ್ರಗಳು ಸಿಕ್ಕಿವೆ. LMG, AK-47, INSAS ರೈಫಲ್, ASLR ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಇವೆ. ಇದಲ್ಲದೇ, ಬಿಜಿಎಲ್ ಲಾಂಚರ್ ಮತ್ತು ಮಾವೋವಾದಿಗಳೇ ಸಿದ್ಧಪಡಿಸಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಸ್ತಾರ್ ಐಜಿ ತಿಳಿಸಿದರು.

ಭದ್ರತಾ ಪಡೆಗಳು ತನ್ನ ತನಿಖೆಯಲ್ಲಿ ನಕ್ಸಲರಿಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದನ್ನು ಖಚಿತಪಡಿಸಿವೆ. ಆಯುಧಗಳ ಸಂಖ್ಯೆ ಮತ್ತು ಅದರ ಮೇಲಿನ ಬರಹ, ಆಯುಧಕ್ಕಿರುವ ವಿಶೇಷ ಕೋಡ್​ಗಳನ್ನು ಪತ್ತೆ ಮಾಡಲಾಗಿದೆ. ಈ ಎಲ್ಲಾ ಶಸ್ತ್ರಾಸ್ತ್ರಗಳು ಭದ್ರತಾ ಪಡೆಗಳ ಡೇಟಾಗೆ ಲಿಂಕ್ ಆಗಿವೆ. ಅದರ ನಂತರ ಶಸ್ತ್ರಾಸ್ತ್ರಗಳನ್ನು ಸಂಕೇತಗಳ ಮೂಲಕ ಗುರುತಿಸಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಡೇಟಿಂಗ್ ಆ್ಯಪ್​​ನ ವಿದೇಶಿ 'ನಕಲಿ ಸಖ'ನಿಂದ ₹18 ಲಕ್ಷ ಕಳೆದುಕೊಂಡ ಏಮ್ಸ್​ ವೈದ್ಯೆ

ABOUT THE AUTHOR

...view details