ಕರ್ನಾಟಕ

karnataka

ETV Bharat / bharat

ಕುಟುಂಬದ 4 ಮತಗಳಲ್ಲಿ 2 ಮತಗಳು ಬಿದ್ದಿವೆ ಎಂದು MNS ಅಭ್ಯರ್ಥಿ ಆರೋಪ - EVM

ಸೋಲಿಗೆ ಇವಿಎಂಗಳನ್ನು ದೂರುವುದು ಸರಿಯೋ, ತಪ್ಪೋ? ಆದರೆ, ಮಹಾರಾಷ್ಟ್ರದ ದಹಿಸರ್ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬದ ನಾಲ್ಕು ಮತಗಳಲ್ಲಿ 2 ಮತ ಮಾತ್ರ ಬಿದ್ದಿದೆ ಎಂದು ಎಂಎನ್‌ಎಸ್ ಅಭ್ಯರ್ಥಿ ರಾಜೇಶ್ ಯೆರುಂಕರ್ ಆರೋಪಿಸಿದ್ದಾರೆ.

ಕುಟುಂಬದ 4 ಮತಗಳಲ್ಲಿ MNS ಅಭ್ಯರ್ಥಿಗೆ ಬಿದ್ದಿದ್ದು 2
ಕುಟುಂಬದ 4 ಮತಗಳಲ್ಲಿ MNS ಅಭ್ಯರ್ಥಿಗೆ ಬಿದ್ದಿದ್ದು 2 (ETV Bharat)

By ETV Bharat Karnataka Team

Published : Nov 25, 2024, 10:40 PM IST

ಮುಂಬೈ (ಮಹಾರಾಷ್ಟ್ರ) :ಇವಿಎಂಗಳ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಚಕಾರ ಎತ್ತುತ್ತಲೇ ಇವೆ. ವಿದ್ಯುತ್​ಚಾಲಿತ ಮತಯಂತ್ರಗಳಲ್ಲಿ (ಇವಿಎಂ) ಹಾಕಲಾದ ಮತಗಳು ಬದಲಾಗುತ್ತಿವೆ ಎಂದು ಆರೋಪವನ್ನೂ ಮಾಡಲಾಗಿದೆ. ಆದರೆ, ಚುನಾವಣಾ ಆಯೋಗ ಇದನ್ನು ನಿರಾಕರಿಸುತ್ತಲೇ ಬಂದಿದೆ.

ಈಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಯು ಮತ್ತೆ ಭರ್ಜರಿಯಾಗಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ. ಮಹಾ ವಿಕಾಸ್ ಅಘಾಡಿಯು ಸೋತು ಸುಣ್ಣವಾಗಿ, ವಿಪಕ್ಷ ನಾಯಕ ಸ್ಥಾನದ ಅರ್ಹತೆಯನ್ನೂ ಆ ಕೂಟದ ಪಕ್ಷಗಳು ಕಳೆದುಕೊಂಡಿವೆ. ಈ ನಡುವೆ ನಮ್ಮ ಕುಟುಂಬಸ್ಥರು ಹಾಕಿದ ನಾಲ್ಕು ಮತಗಳಲ್ಲಿ ಕೇವಲ 2 ಮತ ಬಿದ್ದಿವೆ ಎಂದು ಎಂಎನ್‌ಎಸ್ ಅಭ್ಯರ್ಥಿ ರಾಜೇಶ್ ಯೆರುಂಕರ್ ಆರೋಪಿಸಿದ್ದಾರೆ.

ಇದ್ದಿದ್ದು ನಾಲ್ಕು ಬಿದ್ದಿದ್ದು ಎರಡು - ಅಭ್ಯರ್ಥಿ ಆರೋಪವೇನು?:ರಾಜೇಶ್ ಯೆರುಂಕರ್ ಅವರು ಎಂಎನ್​ಎಸ್​ ಪಕ್ಷದಿಂದ ದಹಿಸರ್​ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಈ ಕ್ಷೇತ್ರದ ಫಲಿತಾಂಶದಂತೆ ಬಿಜೆಪಿಯ ಮನೀಶಾ ಚೌಧರಿ ಅವರು ಗೆಲುವು ಸಾಧಿಸಿದ್ದಾರೆ. ರಾಜೇಶ್​ ಅವರಿಗೆ ಇಡೀ ಕ್ಷೇತ್ರದಲ್ಲಿ 5456 ಮತಗಳು ಬಿದ್ದಿವೆ. ರಾಜೇಶ್​, ಅವರ ಪತ್ನಿ, ಮಗಳು ಮತ್ತು ತಾಯಿ ನಿಗದಿತ ಬೂತ್​ನಲ್ಲಿ ಮತ ಚಲಾಯಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಕುಟುಂಬಸ್ಥರು ಹಾಕಿದ ನಾಲ್ಕು ಮತಗಳಲ್ಲಿ ಅಭ್ಯರ್ಥಿಗೆ ದಾಖಲಾಗಿದ್ದು ಎರಡೇ ಮತಗಳು.

ಉಳಿದ ಮತಗಳು ಏನಾಯ್ತು?:ಈ ಬಗ್ಗೆ ಮಾತನಾಡಿರುವ ಪರಾಜಿತ ಅಭ್ಯರ್ಥಿ ರಾಜೇಶ್​ ಅವರು, ನಮ್ಮ ಹೆಸರಿರುವ ಬೂತ್​ನಲ್ಲಿ ನನ್ನ ಕುಟುಂಬಸ್ಥರೇ ಹಾಕಿದ ಮತಗಳಲ್ಲಿ ಎರಡು ಖೋತಾ ಆಗಿವೆ. ನನ್ನ ಮನೆಯಲ್ಲಿ ನಾಲ್ಕು ಮತಗಳಿವೆ. ನಾನು, ನನ್ನ ಹೆಂಡತಿ, ಮಗಳು ಮತ್ತು ತಾಯಿ ಮತ ಹಾಕಿದ್ದೇವೆ. ಇದರಲ್ಲಿ ನನಗೆ ಎರಡು ಮತಗಳು ಮಾತ್ರ ದಾಖಲಾಗಿವೆ. ಹಾಗಾದರೆ, ನನ್ನ ತಾಯಿ, ಪತ್ನಿ, ಮಗಳು ನನಗೆ ಮತ ಹಾಕಲಿಲ್ಲವೇ?. ನನ್ನ ಕಾರ್ಯಕರ್ತರ ಮತಗಳು ಎಲ್ಲಿ ಹೋದವು ಎಂದು ಪ್ರಶ್ನೆ ಮಾಡಿದ್ದಾರೆ.

95 ಕ್ಷೇತ್ರಗಳಲ್ಲಿ ವ್ಯತ್ಯಾಸದ ಅನುಮಾನ:ಹಲವು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಗಳು ಹಾಗೂ ಇವಿಎಂಗಳ ಲೆಕ್ಕಾಚಾರದಲ್ಲಿ ತಾಳೆಯಾಗಲಿಲ್ಲ. ರಾಜ್ಯದ ಒಟ್ಟು 288 ಕ್ಷೇತ್ರಗಳ ಪೈಕಿ 95 ಕ್ಷೇತ್ರಗಳಲ್ಲಿ ಚುನಾವಣಾ ದಿನವಾದ ನ.20ರಂದು ಇವಿಎಂಗಳಲ್ಲಿ ದಾಖಲಾದ ಮತದಾನಕ್ಕೂ ನವೆಂಬರ್ 23ರಂದು ಅದೇ ಇವಿಎಂಗಳಿಂದ ಪ್ರಕಟವಾದ ಮತದಾನಕ್ಕೂ ಎಣಿಕೆಗೂ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ.

ಇವಿಎಂ ಪರ ಜನರು:ಭಾರತದಲ್ಲಿ ಯಾವುದೇ ಚುನಾವಣೆಯ ನಂತರ, ವಿರೋಧ ಪಕ್ಷಗಳಿಂದ ಇವಿಎಂ ಯಂತ್ರಗಳ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಕಾರಣಕ್ಕಾಗಿ, YUGOVERNMENT MINT CPR ಮಿಲೇನಿಯಲ್ ಜುಲೈನಲ್ಲಿ ಸಮೀಕ್ಷೆ ನಡೆಸಿದೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲದ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಶೇ.61ರಷ್ಟು ಜನರು ಮತದಾನಕ್ಕೆ ಇವಿಎಂಗಳು ಶಕ್ತವಾಗಿವೆ ಎಂದು ತಿಳಿಸಿದ್ದಾರೆ. 39 ಪ್ರತಿಶತ ಜನರು ಬ್ಯಾಲೆಟ್​ ಪೇಪರ್​​ ಜಾರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ;ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ: ಇವರೇ ನೋಡಿ ಅತೀ ಹೆಚ್ಚು, ಅತ್ಯಂತ ಕನಿಷ್ಠ ಮತಗಳ ಅಂತರದಿಂದ ಗೆದ್ದವರು!

ABOUT THE AUTHOR

...view details