ಮುಂಬೈ:ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಕೊಲೆ ಪ್ರಕರಣದ ಆರೋಪಿ ಶುಭಂ ಲೋಂಕರ್ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಸಿದ್ದಿಕ್ ಅವರನ್ನು ಅ. 12ರ ರಾತ್ರಿ ನಿರ್ಮಲ್ ನಗರ ಪ್ರದೇಶದಲ್ಲಿ ಅವರ ಪುತ್ರ, ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಲೋಂಕರ್ ಸೇರಿ ನಾಲ್ವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ.
ನಾಲ್ಕನೇ ಆರೋಪಿಯಾದ ಲೋಂಕರ್‌ನನ್ನು ಪುಣೆಯಲ್ಲಿ ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಸಿದ್ದಿಕ್ ಅವರ ಹತ್ಯೆಗೆ ಸಂಚು ರೂಪಿಸಲು ಲೋಂಕರ್ ಸಹಾಯ ಮಾಡಿರುವುದು ಮತ್ತು ಆಸ್ಟ್ರೇಲಿಯಾ ಮತ್ತು ಟರ್ಕಿಯಿಂದ ಪಿಸ್ತೂಲ್ ಆರ್ಡರ್ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಲೋಂಕರ್ ಆರೋಪಿಗೆ ಆರ್ಥಿಕ ಸಹಾಯ ಮಾಡಿದ್ದಲ್ಲದೇ ಕೊಲೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ವ್ಯವಸ್ಥೆ ಮಾಡಿರುವ ಪ್ರಬಲ ಸಾಕ್ಷಿಗಳು ಲಭ್ಯವಾಗಿವೆ. ಸಿದ್ದಿಕ್ ಹತ್ಯೆ ಮಾಡಲೆಂದೇ ಟರ್ಕಿ ಮತ್ತು ಆಸ್ಟ್ರೇಲಿಯಾದಿಂದ ಪಿಸ್ತೂಲುಗಳನ್ನು ತರಿಸಲಾಗಿದ್ದು, ಅದರಿಂದಲೇ ಕೊಲೆ ನಡೆದಿರುವುದು ತನಿಖೆ ವೇಳೆ ಗೊತ್ತಾಗಿದೆ. ಬಾಬಾ ಸಿದ್ದಿಕ್ ಹತ್ಯೆ ಬಳಿಕ ಶುಭಂ ಲೋಂಕರ್ ನೇಪಾಳ, ಆಸ್ಟ್ರೇಲಿಯಾ ಹಾಗೂ ಟರ್ಕಿಯಲ್ಲಿ ದಾಳಿ ನಡೆಸಲು ತಯಾರಿ ನಡೆಸುತ್ತಿರುವ ಬಗ್ಗೆಯೂ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯಲ್ಲಿ ಡೈರಿ ನಡೆಸುತ್ತಿರುವ ಶುಭಂ ಲೋಂಕರ್‌ಗೆ ಕ್ರಿಮಿನಲ್ ಇತಿಹಾಸವಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನೊಂದಿಗೆ ಸಂಪರ್ಕವಿದೆ ಎನ್ನಲಾಗಿದೆ. ಬಾಂದ್ರಾದಲ್ಲಿರುವ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಕುರಿತು ಇತ್ತೀಚೆಗೆ ಈತನನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ:VIPಗಳಿಗೆ ಇನ್ನು ಮುಂದೆ ಎನ್ಎಸ್ಜಿ ಬದಲು ಸಿಆರ್ಪಿಎಫ್ ಯೋಧರಿಂದ ಭದ್ರತೆ: ಕೇಂದ್ರದ ಆದೇಶ