ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ 114ನೇ ಬ್ರ್ಯಾಂಚ್​​ ಆರಂಭಿಸಿದ ಮಾರ್ಗದರ್ಶಿ ಚಿಟ್​ ಫಂಡ್​ - Margadarsi Chit Fund New branch - MARGADARSI CHIT FUND NEW BRANCH

Margadarsi Chit Fund New branch: ಚಿಟ್ ಫಂಡ್ ಪ್ರವರ್ತಕರಾಗಿರುವ ಮಾರ್ಗದರ್ಶಿ ಚಿಟ್ ಫಂಡ್ ಕಂಪನಿಯು ಕೊಯಮತ್ತೂರಿನಲ್ಲಿ ತನ್ನ ಎರಡನೇ ಶಾಖೆಯನ್ನು ತೆರೆದಿದೆ. ನೂತನ ಶಾಖೆಯನ್ನು ಮಾರ್ಗದರ್ಶಿ ಚಿಟ್ ಫಂಡ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಉದ್ಘಾಟಿಸಿದರು.

MARGADARSI CHIT FUND 114TH BRANCH  COIMBATORE MARGADARSI CHIT FUND  MARGADARSI CHIT FUND  MARGADARSI CHIT FUND NEW BRANCH
ಮಾರ್ಗದರ್ಶಿ ನೂತನ ಶಾಖೆ (ETV Bharat)

By ETV Bharat Karnataka Team

Published : Jul 12, 2024, 4:47 PM IST

ಕೊಯಮತ್ತೂರು (ತಮಿಳುನಾಡು):ನಗರದಲ್ಲಿ ಮಾರ್ಗದರ್ಶಿ ಚಿಟ್ಸ್​​​​​ನ ಮತ್ತೊಂದು ಶಾಖೆ ಉದ್ಘಾಟನೆಗೊಂಡಿದೆ. ಮಾರ್ಗದರ್ಶಿ ಚಿಟ್ ಫಂಡ್ ಅನ್ನು 1962 ರಲ್ಲಿ ಸ್ಥಾಪಿಸಲಾಯಿತು. ರಾಮೋಜಿ ಗ್ರೂಪ್‌ನ ಭಾಗವಾಗಿರುವ ಕಂಪನಿಯು ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಾದ್ಯಂತ ಶಾಖೆಗಳನ್ನು ಹೊಂದಿದ್ದು, ಸುಮಾರು 60 ಲಕ್ಷ ಚಂದಾದಾರರನ್ನು ಹೊಂದಿದೆ.

ಮಾರ್ಗದರ್ಶಿ ಚಿಟ್​ ಫಂಡ್​ ನೂತನ ಶಾಖೆ (ETV Bharat)

ನಂಬಿಕೆಗೆ ಮತ್ತೊಂದು ಹೆಸರೇ ಮಾರ್ಗದರ್ಶಿ ಚಿಟ್ ಫಂಡ್ ತನ್ನ 114ನೇ ಶಾಖೆಯನ್ನು ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿ ಇಂದಿನಿಂದ ಆರಂಭಗೊಂಡಿದೆ. ಕೊಯಮತ್ತೂರಿನ ಅವಿನಾಶ್ ರೋಡ್ ಹೋಪ್ ಕಾಲೇಜು ಪ್ರದೇಶದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಮತ್ತು ಉಪಾಧ್ಯಕ್ಷ ಬಲರಾಮಕೃಷ್ಣ ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಿದರು.

ಮಾರ್ಗದರ್ಶಿ ಚಿಟ್​ ಫಂಡ್​ ನೂತನ ಶಾಖೆ (ETV Bharat)

ಕೊಯಮತ್ತೂರಿನ ಜನರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಇಲ್ಲಿ ಎರಡನೇ ಶಾಖೆಯನ್ನು ತೆರೆಯಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಬಳಿಕ ಮಾರ್ಗದರ್ಶಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತ್ಯನಾರಾಯಣ ನೂತನ ಶಾಖೆಯ ಮೊದಲ ರಸೀದಿಯನ್ನು ಶಾಖಾ ವ್ಯವಸ್ಥಾಪಕ ನಿಕ್ಸನ್ ಅವರಿಗೆ ನೀಡಿದರು. ಈ ಹೊಸ ಶಾಖೆಯ ಮೂಲಕ ಮಾರ್ಗದರ್ಶಿ ಚಿಟ್ ಫಂಡ್ ತನ್ನ ಗ್ರಾಹಕರಿಗೆ ಹಣಕಾಸು ನಿರ್ವಹಣೆ ಮತ್ತು ಸುಧಾರಿತ ತಂತ್ರಜ್ಞಾನ ಸೇವೆಗಳನ್ನು ಒದಗಿಸಲಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಮಾರ್ಗದರ್ಶಿ ಚಿಟ್ ಫಂಡ್​ನ ವ್ಯವಸ್ಥಾಪಕರು, ಉದ್ಯೋಗಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಾರ್ಗದರ್ಶಿ ಚಿಟ್ ಫಂಡ್ ಅನ್ನು 1962 ರಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಕಂಪನಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 113 ಶಾಖೆಗಳು ತೆರೆಯುವ ಮೂಲಕ 60 ಲಕ್ಷ ಗ್ರಾಹಕರನ್ನು ಹೊಂದಿದೆ. ಇದೀಗ 114ನೇ ಶಾಖೆಯನ್ನು ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿ ಸ್ಥಾಪಿಸಲಾಗಿದ್ದು, ಮಾರ್ಗದರ್ಶಿ ಮುಂದೆ ಸಾಗುತ್ತಿದೆ. ವ್ಯವಸ್ಥಾಪಕ ನಿರ್ದೇಶಕಿ ಶೈಲಜಾಕಿರಣ್ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮಾರ್ಗದರ್ಶಿ ವಾರ್ಷಿಕ ರೂ.9,396 ಕೋಟಿ ವಹಿವಾಟು ನಡೆಸುತ್ತಿದೆ. ಬಳಕೆದಾರರ ಅಗತ್ಯತೆಗಳು ಮತ್ತು ಸೌಲಭ್ಯಗಳಿಗೆ ಅನುಗುಣವಾಗಿ ವಿವಿಧ ರೀತಿಯ ಚಿಟ್ ಗುಂಪುಗಳನ್ನು ಆಯೋಜಿಸಲಾಗಿದೆ.

ಓದಿ:Margadarsi 110th Branch: ಹಾವೇರಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್ ನೂತನ ಶಾಖೆ​ ಆರಂಭ

ABOUT THE AUTHOR

...view details