ಕರ್ನಾಟಕ

karnataka

ETV Bharat / bharat

ವಿದೇಶದಿಂದ ಬಂದ ಮಾವನನ್ನು ಸ್ವಾಗತಿಸಲು ಹೋಗುವಾಗ ಭೀಕರ ಅಪಘಾತ: ಇಬ್ಬರು ಮಕ್ಕಳು ಸೇರಿ ಐವರು ಸಾವು! - HORRIFIC ROAD ACCIDENT - HORRIFIC ROAD ACCIDENT

ಬಿಹಾರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐವರು ಸಾವಿಗೀಡಾಗಿದ್ದಾರೆ.

ಕಾರು ಅಪಘಾತದಲ್ಲಿ ಐವರು ಸಾವು
ಕಾರು ಅಪಘಾತದಲ್ಲಿ ಐವರು ಸಾವು (ETV Bharat)

By ETV Bharat Karnataka Team

Published : Jul 14, 2024, 6:41 PM IST

ಕಿಶನ್‌ಗಂಜ್(ಬಿಹಾರ):ವಿದೇಶದಿಂದ ಬಂದ ಸೋದರ ಮಾವನನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬರಲು ಹೋದ ಕುಟುಂಬವೊಂದು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದೆ. ಸ್ಕಾರ್ಪಿಯೋ ವಾಹನ ಮತ್ತು ಡಂಪರ್​​ ನಡುವಿನ ಡಿಕ್ಕಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ದುರಂತ ಸಾವಿಗೀಡಾಗಿದ್ದಾರೆ. ಜೊತೆಗೆ 6 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ಕಾರು ಚಲಾಯಿಸುತ್ತಿದ್ದ ಮೊಹಮ್ಮದ್ (30 ವರ್ಷ), ಮೊಹಮದ್​ ಅಫ್ಫಾನ್ (4 ವರ್ಷ), ಗುಲ್ಶನ್ ಅರಾ (27 ವರ್ಷ), ಗುಡಿಯಾ ಬೇಗಂ (13 ವರ್ಷ) ಮತ್ತು ಅಯಾನ್ (8 ವರ್ಷ) ಎಂದು ಗುರುತಿಸಲಾಗಿದೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಗಾಯಗೊಂಡ ಮಕ್ಕಳನ್ನು ಕಿಶನ್​ಗಂಜ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾವನಿಗಾಗಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಕುಟುಂಬ:ವಿದೇಶದಿಂದ ಸೋದರ ಮಾವ ಊರಿಗೆ ಬರುತ್ತಿದ್ದು, ಅವರನ್ನು ಕರೆದುಕೊಂಡು ಬರುವ ಸಂಭ್ರಮದಲ್ಲಿ ಕುಟುಂಬ ಇತ್ತು. ಮಾವನನ್ನು ಕರೆತರಲು ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಡಂಪರ್​ ವಾಹನಕ್ಕೆ ಕಾರು ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ದುರಂತವನ್ನು ಕಂಡವರು ತಕ್ಷಣವೇ ಕಾರಿನಲ್ಲಿ ಸಿಲುಕಿದ್ದ ಗಾಯಾಳು ಮಕ್ಕಳನ್ನು ಹೊರತೆಗೆದು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.

ದುರಂತದಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಸ್ಕಾರ್ಪಿಯೋ ಚಾಲಕ ಸಾವನ್ನಪ್ಪಿದ್ದಾನೆ. 6 ಮಂದಿ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ;ಮಂಗಳೂರು: ಮೀನು ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; ₹10 ಕೋಟಿ ಮೌಲ್ಯದ ಮತ್ಸ್ಯೋತ್ಪನ್ನ ಬೆಂಕಿಗಾಹುತಿ - FIRE AT FISH FACTORY

ABOUT THE AUTHOR

...view details