ಕೋಲ್ಕತ್ತಾ (ಪಶ್ಚಿಮಬಂಗಾಳ) :"ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರು ಒಬ್ಬ ಮಹಾನ್ ವ್ಯಕ್ತಿ, ಉತ್ತಮ ರಾಜಕೀಯ ನಾಯಕ, ಜಗತ್ತಿನ ಅವಶ್ಯಕತೆಗಳನ್ನು ಅರಿತುಕೊಂಡಿದ್ದ ಅದ್ಭುತ ಅರ್ಥಶಾಸ್ತ್ರಜ್ಞ" ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, "ಮನಮೋಹನ್ ಸಿಂಗ್ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ ಸ್ನೇಹಿತರಾಗಿದ್ದೆವು. ಅವರು ಸಿಖ್ ಸಮುದಾಯದವರಾಗಿದ್ದರೂ 'ವಜ್ರಚ್ಛೇದಿಕ ಪ್ರಜ್ಞಾಪರಮಿತಾ'ದಲ್ಲಿ ಗೌತಮ ಬುದ್ಧರ ಸಂದೇಶಗಳನ್ನು ಅಳವಡಿಸಿಕೊಂಡಿದ್ದರು" ಎಂದು ತಿಳಿಸಿದರು.
"ವಜ್ರಚ್ಛೇದಿಕಾ ಪ್ರಜ್ಞಾಪರಮಿತಾ ಸೂತ್ರ' ಅಥವಾ 'ಮಹಾಯಾನ'ದಲ್ಲಿರುವ ಗೌತಮ ಬುದ್ಧನ ಸಂದೇಶವಾದ ಮಾನವರ ವಿಭಿನ್ನ ನಂಬಿಕೆಗಳನ್ನು ಗೌರವಿಸುವುದು ಮತ್ತು ಒಂದು ನಿರ್ದಿಷ್ಟ ನಂಬಿಕೆಯನ್ನು ಬೆಂಬಲಿಸುವುದು, ಇತರರನ್ನು ಅವಹೇಳನ ಮಾಡದಿರುವುದನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದರು" ಎಂದು ಸೇನ್ ಹೇಳಿದರು.
"ಹೀಗಾಗಿ, ಭಾರತದಲ್ಲಿ ಪಾಕಿಸ್ತಾನವು ಭಯೋತ್ಪಾದನೆ ನಡೆಸಿದ ಪುರಾವೆಗಳು ಸಿಕ್ಕರೂ, ಬುದ್ಧನ ಸಂದೇಶದ ಅನುಸಾರ ಪ್ರತಿಕ್ರಿಯಿಸುತ್ತಿದ್ದರು. ನೆರೆಯ ರಾಷ್ಟ್ರದ ವಿರುದ್ಧ ತೀಕ್ಷ್ಣವಾಗಿ ನಡೆದುಕೊಳ್ಳಬಾರದು ಎಂಬುದನ್ನು ಅವರು ಅರಿತಿದ್ದರು" ಎಂದು ಅಮರ್ತ್ಯ ಸೇನ್ ತಿಳಿಸಿದರು.