ಹೈದರಾಬಾದ್: ಮಹಾರಾಷ್ಟ್ರ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಿದ್ದಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದತ್ತ ಜನ ಒಲವು ತೋರುತ್ತಿದ್ದಾರೆ ಎಂದು ಹೇಳುತ್ತಿವೆ. ಮಹಾವಿಕಾಸ್ ಅಘಾಡಿ ಕೂಡ ತೀವ್ರ ಪೈಪೋಟಿ ನೀಡಿದರೂ ಮೆಜಾರಿಟಿ ಮಾರ್ಕ್ ಮುಟ್ಟುವುದು ಅನುಮಾನ ಎಂದು ಹೇಳುತ್ತಿವೆ.
ಪೋಲ್ ಆಫ್ ಪೋಲ್
ಸಮೀಕ್ಷೆ ನಡೆಸಿದ ಸಂಸ್ಥೆ | ಮಹಾಯುತಿ | ಅಘಾಡಿ ಕೂಟ | ಇತರ |
ಮ್ಯಾಟ್ರಿಜ್ | 150-170 | 110-130 | 8-10 |
ಪೀಪಲ್ಸ್ ಪಲ್ಸ್ | 182 | 97 | 9 |
ಪಿ ಮಾರ್ಕ್ | 137-157 | 126-146 | 2-8 |
ಚಾಣಕ್ಯ | 152-160 | 130-138 | 6-8 |
ಟೈಮ್ಸ್ ನೌ-ಜೆವಿಸಿ | 150-167 | 107-125 | 13-14 |
ಪೀಪಲ್ಸ್ ಪಲ್ಸ್
- ಬಿಜೆಪಿ+ 182
- ಕಾಂಗ್ರೆಸ್+ 97
- ಇತರರು 9
ಎಬಿಪಿ-ಮ್ಯಾಟ್ರಿಜ್
- ಬಿಜೆಪಿ+ 150-170
- ಕಾಂಗ್ರೆಸ್+ 110-130
- ಇತರರು 8-10
ಪಿ-ಮಾರ್ಕ್
- ಬಿಜೆಪಿ+ 137-157
- ಕಾಂಗ್ರೆಸ್+ 126-146
- ಇತರರು 2-8
ಚಾಣಕ್ಯ ಸ್ಟ್ರಾಟಜೀಸ್
- ಬಿಜೆಪಿ+ 152-160
- ಕಾಂಗ್ರೆಸ್+ 130-138
- ಇತರರು 6-8
ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಮುನ್ನೋಟ: ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಬಹುತೇಕ ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. 81 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ 46 ರಿಂದ 58 ಸ್ಥಾನಗಳನ್ನು ಪಡೆಯಲಿದೆ ಎಂದು ಪೀಪಲ್ಸ್ ಪಲ್ಸ್ ಅಂದಾಜಿಸಿದೆ. 42 ರಿಂದ 47 ಸೀಟುಗಳಿರುತ್ತವೆ ಎಂದು ಮ್ಯಾಟ್ರಿಜ್ ಹೇಳಿದೆ.
ಸಮೀಕ್ಷೆ ನಡೆಸಿದ ಸಂಸ್ಥೆ | ಬಿಜೆಪಿ ಮೈತ್ರಿಕೂಟ | ಜೆಎಂಎಂ- ಕಾಂಗ್ರೆಸ್ ಕೂಟ | ಇತರ |
ಮ್ಯಾಟ್ರಿಜ್ | 42-47 | 25-30 | 1-4 |
ಪೀಪಲ್ಸ್ ಪಲ್ಸ್ | 46-58 | 24-37 | 6-10 |
ಪಿ ಮಾರ್ಕ್ | 31-40 | 37-47 | 1-6 |
ಚಾಣಕ್ಯ | 45-50 | 35-38 | 3-5 |
ಟೈಮ್ಸ್ ನೌ-ಜೆವಿಸಿ | 40-44 | 30-40 | 1-2 |