ಮುಂಬೈ:ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನದ ವಿಶೇಷ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಈ ವೇಳೆ ನೂತನವಾಗಿ ಆಯ್ಕೆಯಾದ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸದ್ಯ ಮಹಾರಾಷ್ಟ್ರ ವಿಧಾನಸಭೆಗೆ ಕಾಳಿದಾಸ್ ಕೊಲಂಬ್ಕರ್ ಅವನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.
ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಎರಡನೇ ಅವಧಿಯ ಮಹಾಯುತಿ ಮೈತ್ರಿ ಸರ್ಕಾರದ ಮೊದಲ ಅಧಿವೇಶನ ಇದಾಗಿದ್ದು, ಇದು ಶಾಸಕಾಂಗ ಅವಧಿಯ ಔಪಚಾರಿಕ ಆರಂಭವಾಗಿದೆ.
ಈಗಾಗಲೇ 9 ಬಾರಿ ಶಾಸಕರಾಗಿರುವ ಹಿರಿಯ ಬಿಜೆಪಿ ನಾಯಕ ಕಾಳಿದಾಸ್ ಕೊಲಂಬ್ಕರ್ ಅವರ ಅಧ್ಯಕ್ಷತೆಯಲ್ಲಿ ಈ ಮೂರು ದಿನದ ವಿಶೇಷ ವಿಧಾನಸಭಾ ಅಧಿವೇಶನ ನಡೆಯಲಿದೆ. ಈ ಅಧಿವೇಶನವು ಡಿಸೆಂಬರ್ 7ರಿಂದ 9ರ ವರೆಗೆ ಸಾಗಲಿದ್ದು, ಈ ಮೂರು ದಿನದಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದ 288 ಶಾಸಕರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಈ ಅಧಿವೇಶನದ ಮಹತ್ವ ಕುರಿತು ಮಾತನಾಡಿರುವ ಬಿಜೆಪಿ ಶಾಸಕ ಪರಾಗ್ ಅಲವನಿ, ಮಹಾರಾಷ್ಟ್ರ ಜನರು ಮೈತ್ರಿ ಸರ್ಕಾರಕ್ಕೆ ದೊಡ್ಡ ಬಹುಮತ ನೀಡಿದ್ದಾರೆ. ಮುಂದಿನ ಮೂರು ದಿನ ಶಾಸಕರ ಪ್ರಮಾಣವಚನ ನಡೆಯಲಿದ್ದು, ಕೆಲ ನೂತನ ಶಾಸಕರು ಸದನಕ್ಕೆ ಪ್ರವೇಶ ಮಾಡಲಿದ್ದಾರೆ ಎಂದರು.