ಮಹಾರಾಷ್ಟ್ರ: ಇಲ್ಲಿನ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರು ಮಹಾರಾಷ್ಟ್ರದ ಸಚಿವಾಲಯದ ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಕೆಳಗೆ ಸುರಕ್ಷತಾ ನೆಟ್ ಅಳವಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧಂಗರ್ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಎನ್‌ಸಿಪಿ ಶಾಸಕರಾದ ಜಿರ್ವಾಲ್, ಕಿರಣ್ ಲಹಮಟೆ ಮತ್ತು ಬಿಜೆಪಿಯ ಬುಡಕಟ್ಟು ಸಮುದಾಯದ ಸಂಸದ ಹೇಮಂತ್ ಸಾವರ ಮಹಡಿಯಿಂದ ಕೆಳಗೆ ಜಿಗಿದಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಾದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೋಟಾ ವಿಷಯದ ಬಗ್ಗೆ ಚರ್ಚಿಸಲು ತಮ್ಮನ್ನು ಭೇಟಿ ಮಾಡುತ್ತಿಲ್ಲ ಎಂದು ಆರೋಪಿಸಿ ಶಾಸಕರು ಧರಣಿ ನಡೆಸಿದರು.
ನಾನು ಮೊದಲು ಆದಿವಾಸಿ, ನಂತರ ಶಾಸಕ ಮತ್ತು ಉಪಸಭಾಪತಿ. ಸಿಎಂ ಏಕನಾಥ್ ಶಿಂಧೆ ನಮ್ಮನ್ನು ಭೇಟಿ ಮಾಡಬೇಕು. ಧಂಗರ್ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಿದರೆ 65 ಶಾಸಕರು ರಾಜೀನಾಮೆ ನೀಡುತ್ತೇವೆ. ಈ ಕುರಿತು ಇತರ ಬುಡಕಟ್ಟು ಮುಖಂಡರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಉಪ ಸ್ಪೀಕರ್ ನರಹರಿ ಜಿರ್ವಾಲ್ ತಿಳಿಸಿದ್ದಾರೆ.