ಕರ್ನಾಟಕ

karnataka

ETV Bharat / bharat

ಮಹಾ ಕುಂಭಮೇಳಕ್ಕೆ ಭಕ್ತರ ಪ್ರವಾಹ, 30 ಕಿಲೋಮೀಟರ್ ಟ್ರಾಪಿಕ್​ ಜಾಮ್​ - ರೈಲು ನಿಲ್ದಾಣವೇ ಬಂದ್​ - UP KUMBH CROWD MASSIVE JAM

ಕುಂಭಮೇಳ ಸ್ಥಳದಲ್ಲಿ ಕಿಮೀ ಗಟ್ಟಲೇ ಟ್ರಾಫಿಕ್​ ಜಾಮ್​. ಎಲ್ಲಿ ನೋಡಿದರು ಭಕ್ತರ ದಂಡು, ವಾಹನಗಳ ಸಾಲು - ಸರ್ಕಾರದ ವಿರುದ್ಧ ಅಖಿಲೇಶ ಯಾದವ್ ಕೆಂಡಾಮಂಡಲ

UP-KUMBH-LD CROWD
ಮಹಾಕುಂಭ ವೈಭವ: ಪ್ರಯಾಗರಾಜ್​​​ ಗೆ ಭಕ್ತರ ಪ್ರವಾಹ, ಟ್ರಾಪಿಕ್​ ಜಾಮ್​ - ರೈಲು ನಿಲ್ದಾಣವೇ ಬಂದ್​ (IANS)

By ETV Bharat Karnataka Team

Published : Feb 10, 2025, 6:58 AM IST

Updated : Feb 10, 2025, 7:11 AM IST

ಪ್ರಯಾಗರಾಜ್ (ಉತ್ತರ ಪ್ರದೇಶ):ಇಲ್ಲಿನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭಾನುವಾರವೂ ಭಕ್ತ ಮಹಾಸಾಗರವೇ ಹರಿದು ಬಂತು. ಕುಂಭಮೇಳದ ಮಾರ್ಗಗಳಲ್ಲಿ 30 ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ದಟ್ಟಣೆ ಉಂಟಾಗಿದೆ.

ಈ ಮಧ್ಯೆ, ನಿಲ್ದಾಣದ ಹೊರಗೆ ವಿಪರೀತ ಜನಸಂದಣಿಯಿಂದಾಗಿ ಪ್ರಯಾಗರಾಜ್‌ನ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ. ಭಾನುವಾರ ಸಂಜೆ 6 ಗಂಟೆಯವರೆಗೆ 1.42 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಮಹಾಕುಂಭದ ಆಡಳಿತ ಬಿಡುಗಡೆ ಮಾಡಿದ ಅಂಕಿ- ಅಂಶಗಳು ತಿಳಿಸಿವೆ. ಇದುವರೆಗೆ 42 ಕೋಟಿಗೂ ಹೆಚ್ಚು ಭಕ್ತರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ಯೋಗಿ ಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ:ಟ್ರಾಫಿಕ್ ಜಾಮ್ ಕುರಿತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಪ್ರಯಾಗ್ರಾಜ್ ಮಹಾಕುಂಭದಲ್ಲಿ ಸಿಲುಕಿರುವ ಕೋಟ್ಯಂತರ ಭಕ್ತರಿಗೆ ತುರ್ತು ವ್ಯವಸ್ಥೆ ಮಾಡಬೇಕು. ಎಲ್ಲೆಡೆ ಟ್ರಾಫಿಕ್ ಜಾಮ್‌ನಲ್ಲಿ ಹಸಿವು, ಬಾಯಾರಿಕೆ, ಸಂಕಷ್ಟ ಮತ್ತು ದಣಿದ ಯಾತ್ರಾರ್ಥಿಗಳನ್ನು ಮಾನವೀಯ ದೃಷ್ಟಿಕೋನದಿಂದ ನೋಡಬೇಕು. ನವಾಬ್‌ಗಂಜ್‌ನಲ್ಲಿ ಈಗಾಗಲೇ ಲಕ್ನೋ ಕಡೆಗೆ ಪ್ರಯಾಗರಾಜ್‌ಗೆ ಪ್ರವೇಶಿಸುವ ಮೊದಲು 30 ಕಿಲೋಮೀಟರ್ ಟ್ರಾಫಿಕ್​ ಜಾಮ್, ರೀವಾ ರಸ್ತೆಯ 16 ಕಿಮೀ ಮೊದಲು ಗೌಹಾನಿಯಾದಲ್ಲಿ ಜಾಮ್, ಮತ್ತು ವಾರಣಾಸಿ ಕಡೆಗೆ 12 ರಿಂದ 15 ಕಿಮೀ ಜಾಮ್ ಆಗಿದೆ. ರೈಲಿನ ಇಂಜಿನ್‌ಗೂ ಜನರು ಪ್ರವೇಶಿಸಿದ ಸುದ್ದಿ ಎಲ್ಲೆಡೆ ಪ್ರಕಟವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜೀವನ ಕಷ್ಟಕರವಾಗಿದೆ ಎಂದು ವರದಿಯಾಗುತ್ತಿದೆ.

ಯುಪಿ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಲು ವಿಫಲವಾಗಿದೆ, ದುರಹಂಕಾರದಿಂದ ತುಂಬಿದ ಸುಳ್ಳು ಜಾಹೀರಾತುಗಳಲ್ಲಿ ಮಾತ್ರ ಅದು ಗೋಚರಿಸುತ್ತದೆ. ಆದರೆ, ವಾಸ್ತವದಲ್ಲಿ ಅದು ನೆಲದ ಮೇಲೆ ಕಾಣೆಯಾಗಿದೆ ಎಂದು ಯಾದವ್ ಟೀಕಾ ಪ್ರಹಾರ ನಡೆಸಿದ್ದಾರೆ.

'X' ನಲ್ಲಿ ಈ ಸಂಬಂಧ ಮತ್ತೊಂದು ಪೋಸ್ಟ್‌ ಮಾಡಿರುವ ಅಖಿಲೇಶ​ ಯಾದವ್, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಮಧ್ಯಪ್ರದೇಶ ಪೊಲೀಸ್ ಸಿಬ್ಬಂದಿಗಳು ಮಾರ್ಗದಲ್ಲಿ ಭಾರಿ ದಟ್ಟಣೆಯನ್ನು ಪರಿಗಣಿಸಿ ಪ್ರಯಾಗರಾಜ್ ಕಡೆಗೆ ಪ್ರಯಾಣಿಸದಂತೆ ರಸ್ತೆಯಲ್ಲಿರುವ ಜನರನ್ನು ಕೇಳುತ್ತಿರುವುದು ಕಂಡು ಬಂದಿದೆ ಎಂದಿದ್ದಾರೆ. ಮಧ್ಯಪ್ರದೇಶ, ಉತ್ತರಪ್ರದೇಶ ಎರಡೂ ಕಡೆ 'ಬಿಜೆಪಿ ಸರ್ಕಾರ' ಇದೆ. ಒಬ್ಬರು ಮಹಾ ಕುಂಭಕ್ಕೆ ಬನ್ನಿ ಎನ್ನುತ್ತಾರೆ, ಮತ್ತೊಬ್ಬರು ಅಡ್ಡಗಾಲು ಹಾಕಬೇಡಿ ಎನ್ನುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಐದು ಗಂಟೆ ಟ್ರಾಫಿಕ್​​​ನಲ್ಲಿ ಕಾಲ ಕಳೆಯಬೇಕಾಯಿತು:ರಾಯ್ ಬರೇಲಿಯಿಂದ ಬಂದ ರಾಮ್ ಕೃಪಾಲ್, ಲಖನೌ - ಪ್ರಯಾಗ್ರಾಜ್ ಹೆದ್ದಾರಿಯಲ್ಲಿ ಫಾಫಮೌಗೆ ಐದು ಗಂಟೆಗಳ ಕಾಲ ಜಾಮ್​​​​ ನಲ್ಲಿ ಸಿಲುಕಿಕೊಂಡಿದ್ದೆ ಎಂದು ಹೇಳಿದ್ದಾರೆ. ಹೇಗಾದರೂ ತನ್ನ ವಾಹನವನ್ನು ಬೇಲಾ ಕಚ್ಚರ್ನಲ್ಲಿ ನಿಲ್ಲಿಸಿ ಅಲ್ಲಿಂದ ಸಂಗಮ್ ಘಾಟ್​ ಗೆ ಕಾಲ್ನಡಿಗೆಯಲ್ಲಿ ಹೊರಟೆ ಎಂದು ತಿಳಿಸಿದ್ದಾರೆ.

ಎಲ್ಲರೂ ವಾಹನ ಸಮೇತ ಬರುತ್ತಿರುವುದರಿಂದ ಹೀಗಾಗಿದೆ:ಸಂಚಾರ ವಿಭಾಗದ ಎಡಿಜಿಪಿ ಕುಲದೀಪ್ ಸಿಂಗ್ ಮಾತನಾಡಿ, ವಾಹನಗಳ ಸಂಖ್ಯೆ ತುಂಬಾ ಹೆಚ್ಚಿದ್ದು, ಪ್ರಯಾಣಿಕರು ಮಹಾ ಕುಂಭಮೇಳದ ಪ್ರದೇಶಕ್ಕೆ ಸಾಧ್ಯವಾದಷ್ಟು ಹತ್ತಿರ ಬರಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಟ್ರಾಫಿಕ್​ ಜಾಮ್​ ಉಂಟಾಗಿದೆ ಎಂದು ಹೇಳಿದ್ದಾರೆ. ಮೌನಿ ಅಮಾವಾಸ್ಯೆಯಂದು ಬಂದಿದ್ದ ಜನಸ್ತೋಮವೇ ಈಗಲೂ ಹರಿದು ಬರುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.

ಇನ್ನಷ್ಟು ದಿನ ಇದೇ ಪರಿಸ್ಥಿತಿ ಇರಲಿದೆ:ಕಳೆದ (2019) ಕುಂಭದಲ್ಲಿ, ವಿಶೇಷವಾಗಿ ಸಾಮಾನ್ಯ ದಿನಗಳಲ್ಲಿ ಹೆಚ್ಚು ಜನಸಂದಣಿ ಇರಲಿಲ್ಲ. ಆದರೆ, ಈ ಬಾರಿ ಸಾಮಾನ್ಯ ದಿನಗಳಲ್ಲಿ ಇಷ್ಟೊಂದು ದೊಡ್ಡ ಜನಸಂದಣಿ ಬರುತ್ತಿದೆ ಎಂದು ಸಿಂಗ್ ಹೇಳಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ಭಕ್ತರ ಜನಸಂದಣಿ ಕಡಿಮೆಯಾಗುವುದಿಲ್ಲ ಎಂದೂ ಅವರು ಹೇಳಿದರು.

ಸಂಗಮ್​ ರೈಲು ನಿಲ್ದಾಣ ತಾತ್ಕಾಲಿಕ ಮುಚ್ಚಲು ತೀರ್ಮಾನ:ಸಂಗಮ್​ ನಿಲ್ದಾಣ ಮುಚ್ಚಲು ನಿರ್ಧಾರ: ಏತನ್ಮಧ್ಯೆ ಲಖನೌದ ಉತ್ತರ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕುಲದೀಪ್ ತಿವಾರಿ ಮಾತನಾಡಿ, ಪ್ರಯಾಗ್ರಾಜ್ ಸಂಗಮ್ ನಿಲ್ದಾಣದ ಹೊರಗೆ ಹೆಚ್ಚಿನ ಜನಸಂದಣಿ ಇದೆ. ಈ ಕಾರಣದಿಂದ ಪ್ರಯಾಣಿಕರು ನಿಲ್ದಾಣದಿಂದ ಹೊರಬರಲು ಕಷ್ಟಪಡುತ್ತಿದ್ದಾರೆ. ಈ ದಟ್ಟಣೆ ಕಡಿಮೆ ಮಾಡಲು, ಪ್ರಯಾಗ್ರಾಜ್ ಸಂಗಮ್ ನಿಲ್ದಾಣವನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಹೆಚ್ಚಿನ ಸಂಖ್ಯೆಯ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಪ್ರಯಾಗರಾಜ್ ಜಂಕ್ಷನ್ ನಿಲ್ದಾಣದಲ್ಲಿ ಉತ್ತರ ಮಧ್ಯ ರೈಲ್ವೆ ಏಕ ದಿಕ್ಕಿನ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ನಗರದ ಕಡೆಯಿಂದ (ಪ್ಲಾಟ್‌ಫಾರ್ಮ್ ನಂ.1 ಕಡೆಗೆ) ಮಾತ್ರ ಪ್ರವೇಶ ನೀಡಲಾಗುವುದು ಮತ್ತು ಸಿವಿಲ್ ಲೈನ್ಸ್ ಕಡೆಯಿಂದ ಮಾತ್ರ ನಿರ್ಗಮನಕ್ಕೆ ಅವಕಾಶ ನೀಡಲಾಗುವುದು ಎಂದು ಉತ್ತರ ಮಧ್ಯ ರೈಲ್ವೆ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಮಾಳವಿಯಾ ತಿಳಿಸಿದ್ದಾರೆ.

ಇದನ್ನು ಓದಿ:ಅಯೋಧ್ಯೆಯಲ್ಲಿ ಭಕ್ತಾದಿಗಳ ಸಂಖ್ಯೆ ಏರಿಕೆ; ಶ್ರೀರಾಮ ಮಂದಿರದ ದರ್ಶನಾವಧಿ 2 ಗಂಟೆ ಹೆಚ್ಚಳ

Last Updated : Feb 10, 2025, 7:11 AM IST

ABOUT THE AUTHOR

...view details