ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಲಾಟರಿ ಟಿಕೆಟ್ ಮೂಲಕ ಹಣಕಾಸು ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿರುವುದು ಇಡಿ ತನಿಖೆಯಲ್ಲಿ ಬಯಲಾಗಿದೆ. ಸದ್ಯ ಇಡಿ ಅಧಿಕಾರಿಗಳು ಪ್ರಕರಣವನ್ನು ಮೂರು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ತನಿಖೆಯ ಮೊದಲ ಆಯಾಮ ಹೀಗಿದೆ: ಮಾರಾಟವಾಗದ ಟಿಕೆಟ್ಗೆ ಲಕ್ಕಿ ಡ್ರಾ ಸಿಗುವಂತೆ ಮಾಡುವುದು ಮತ್ತು ಆ ಮೂಲಕ ಜನರನ್ನು ವಂಚಿಸುವುದು. ನಂತರ ನಕಲಿ ವಿಜೇತರನ್ನು ಅಸಲಿ ಎಂದು ಬಿಂಬಿಸಿ ಆ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತದೆ. ಈ ಮೂಲಕ ಆಮಿಷ ಒಡ್ಡಿ ಮತ್ತಷ್ಟು ಜನ ಲಾಟರಿ ಟಿಕೆಟ್ ಕೊಳ್ಳುವಂತೆ ಪ್ರಚೋದಿಸಲಾಗುತ್ತದೆ. ಆದರೆ ಮಾರಾಟವಾಗದ ಟಿಕೆಟ್ಗೆ ಲಕ್ಕಿ ಬಹುಮಾನ ಬರುತ್ತದೆ ಎಂಬುದನ್ನು ತಿಳಿಯದ ಜನತೆ ಹೆಚ್ಚೆಚ್ಚು ಟಿಕೆಟ್ಗಳನ್ನು ಕೊಂಡು ಮೋಸ ಹೋಗುತ್ತಲೇ ಇರುತ್ತಾರೆ. ಈ ಪ್ರಕ್ರಿಯೆಯಲ್ಲಿ, ಈ ನಿರ್ದಿಷ್ಟ ಲಾಟರಿ ಕಂಪನಿ ಮತ್ತು ಅದರ ಏಜೆಂಟರು ಮುಖ್ಯವಾಗಿ ಅಶಿಕ್ಷಿತ ದುರ್ಬಲ ಆರ್ಥಿಕ ಹಿನ್ನೆಲೆಯ ಜನರನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆಯ ಎರಡನೇ ಆಯಾಮ ಹೀಗಿದೆ: ಲಕ್ಕಿ ಡ್ರಾನಲ್ಲಿ ವಿಜೇತನೆಂದು ಬಿಂಬಿಸಲಾಗುವ ನಕಲಿ ವ್ಯಕ್ತಿಗೆ ಸಹ ಬಹುಮಾನದ ಪೂರ್ತಿ ಮೊತ್ತವನ್ನು ನೀಡಲಾಗುವುದಿಲ್ಲ. ಲಾಟರಿ ಕಂಪನಿಯು ಆ ವ್ಯಕ್ತಿಗೆ ಬಹುಮಾನದ ಶೇ 5ರಷ್ಟು ಅಥವಾ ಅದಕ್ಕೂ ಕಡಿಮೆ ಹಣ ನೀಡಿ ಉಳಿದ ಹಣವನ್ನು ತಾನೇ ಲಪಟಾಯಿಸುತ್ತದೆ. ಇದು ಅಕ್ರಮ ಹಣ ವರ್ಗಾವಣೆಯ ವಿಶಿಷ್ಟ ಪ್ರಕರಣದ ಅಡಿಯಲ್ಲಿ ಬರುತ್ತದೆ.
ತನಿಖೆಯ ಮೂರನೇ ಆಯಾಮ ಹೀಗಿದೆ: ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವ ಮೂರನೇ ಕೋನವೆಂದರೆ, ಈ ಲಾಟರಿ ಕಂಪನಿಯು ವಂಚನೆಯಿಂದ ಗಳಿಸಿದ ಆದಾಯವನ್ನು ಭಾರತ ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡಿರುವುದು ಹಾಗೂ ಈ ಬಗ್ಗೆ ಮಾಹಿತಿ ಕಲೆ ಹಾಕುವುದು. ಇಂಥ ಹೂಡಿಕೆಗಳ ಮೂಲಕ ವಂಚಕ ಲಾಟರಿ ಕಂಪನಿಯು ತನ್ನ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿದೆ ಎಂದು ಮೂಲಗಳು ತಿಳಿಸಿವೆ.
ಆ ಸಮಯದಲ್ಲಿ ನಗರದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದಿಬ್ಬರನ್ನು ಬಂಧಿಸಲಾಯಿತು ಮತ್ತು ಕೆಲ ಬ್ಯಾಂಕ್ ಖಾತೆಗಳನ್ನು ಸಹ ಸ್ಥಗಿತಗೊಳಿಸಲಾಯಿತು. ಆದರೆ ಅಂತಿಮವಾಗಿ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ.