ನವದೆಹಲಿ:18ನೇ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಈಗಾಗಲೇ 5 ಹಂತದ ಮತದಾನ ಮುಗಿದಿದೆ. ಇನ್ನೆರಡು ಹಂತಗಳು ಮಾತ್ರ ಬಾಕಿ ಉಳಿದಿದ್ದು, ಜೂನ್ 4 ರಂದು ನಡೆಯುವ ಮತ ಎಣಿಕೆಯ ಮೇಲೆ ದೇಶದ ನಾಗರಿಕರ ನಿರೀಕ್ಷೆ ಹೆಚ್ಚಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ಭರ್ಜರಿ ಹೋರಾಟ ನಡೆಸುತ್ತಿವೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಗ್ರಹಿಸಿದ ಚುನಾವಣಾ ಅಂಕಿ - ಅಂಶಗಳ ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ 8,360 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 8,337 ಅಭ್ಯರ್ಥಿಗಳ ನಾಮಪತ್ರ ದಾಖಲೆಯ ಪರಿಶೀಲಿಸಲಾಗಿದೆ. ಅದರಲ್ಲಿ 25 ರಿಂದ 30 ವರ್ಷದೊಳಗೆ 2,642 ಹುರಿಯಾಳುಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 11 ಅಭ್ಯರ್ಥಿಗಳು 80 ವರ್ಷ ಮೇಲ್ಪಟ್ಟವರಿದ್ದಾರೆ ಎಂದಿದೆ.
ಮೊದಲ ಹಂತ:ಏಪ್ರಿಲ್ 19 ರಂದು ನಡೆದ ಮೊದಲನೇ ಹಂತದ ಚುನಾವಣೆಯಲ್ಲಿ 25 ರಿಂದ 40 ವರ್ಷದೊಳಗಿನ 505 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 41ರಿಂದ 60 ವರ್ಷದೊಳಗಿನ 849 ಅಭ್ಯರ್ಥಿಗಳು, 61ರಿಂದ 80 ವರ್ಷದೊಳಗಿನ 260 ಮತ್ತು 80 ವರ್ಷ ಮೇಲ್ಪಟ್ಟ ನಾಲ್ವರು ಅಭ್ಯರ್ಥಿಗಳಿದ್ದರು. |
ಎರಡನೇ ಹಂತ:ಏಪ್ರಿಲ್ 26 ರಂದು ನಡೆದ ಎರಡನೇ ಹಂತದಲ್ಲಿ 25 ರಿಂದ 40 ವಯೋಮಾನದ 363 ಅಭ್ಯರ್ಥಿಗಳು ಕಣದಲ್ಲಿದ್ದರೆ, 41 ರಿಂದ 60 ವರ್ಷದೊಳಗೆ 578, 61 ರಿಂದ 80 ವರ್ಷದೊಳಗಿನ 249 ಮತ್ತು 80 ವರ್ಷ ಮೇಲ್ಪಟ್ಟ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು.
ಮೂರನೇ ಹಂತ:ಮೇ 7 ರಂದು ನಡೆದ ಮೂರನೇ ಹಂತದಲ್ಲಿ 25 ರಿಂದ 40 ವರ್ಷದ 411 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, 712 ಮಂದಿ 41ರಿಂದ 60 ವರ್ಷದೊಳಗಿದ್ದಾರೆ. 61 ರಿಂದ 80 ವರ್ಷದೊಳಗಿನ 228 ಅಭ್ಯರ್ಥಿಗಳು ಮತ್ತು 84 ವರ್ಷದ ಒಬ್ಬರು ಇದ್ದರು. |