ನವದೆಹಲಿ: ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಕೈಯನ್ನು ಮತದಾರರು ಹಿಡಿದಿದ್ದಾರೆ. ಬಿಜೆಪಿಯ ಲೆಕ್ಕಾಚಾರವನ್ನು ಉತ್ತರ ಪ್ರದೇಶದ ಮತದಾರ ತಲೆಕೆಳಗೆ ಮಾಡಿದ್ದರಿಂದ ಸರಳ ಬಹುಮತ ಗಳಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ.
ಉತ್ತರ ಪ್ರದೇಶವು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿದೆ. ದೇಶದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ರಾಜ್ಯವಾಗಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ ಪ್ರಬಲ ಹೋರಾಟ ನಡೆಸುತ್ತಿದೆ.
- ಯುಪಿಯಲ್ಲಿ ಎಷ್ಟು ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಜಯ?
- ಬಿಜೆಪಿ - 33
- ಸಮಾಜವಾದಿ ಪಕ್ಷ - 37
- ಕಾಂಗ್ರೆಸ್ - 06
- ಆರ್ಎಲ್ಡಿ -02
- ಆಜಾದ್ ಸಮಾಜ ಪಾರ್ಟಿ - 01
ಕಳೆದ ಚುನಾವಣೆಯಲ್ಲಿ ನೆಲಕಚ್ಚಿದ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೆದ್ದಿವೆ. ಸಮಾಜವಾದಿ ಪಕ್ಷ ಈ ಬಾರಿ ಬಿಜೆಪಿಂತ ಹೆಚ್ಚು ಕ್ಷೇತ್ರಗಳನ್ನು ಗೆದ್ದಿದೆ. ಬಿಜೆಪಿ 33 ರಲ್ಲಿ ಗೆದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಎಸ್ಪಿ 37ರಲ್ಲಿ ಜಯಿಸಿದೆ. ಈ ಮೂಲಕ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿರುವ ಸೂಚನೆಯನ್ನು ನೀಡಿದೆ.