ಕರ್ನಾಟಕ

karnataka

ETV Bharat / bharat

ಐದನೇ ಹಂತದ ಮತದಾನ: ಕುಟುಂಬಸ್ಥರೊಂದಿಗೆ ವೋಟ್ ಮಾಡಿದ ​ಬಾಲಿವುಡ್ ಸ್ಟಾರ್​ ಹೃತಿಕ್ ರೋಷನ್ - Hrithik Roshan Casts His Vote

ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಕುಟುಂಬಸ್ಥರೊಂದಿಗೆ ಮುಂಬೈನಲ್ಲಿ ಮತ ಚಲಾಯಿಸಿದರು.

ಕುಟುಂಬಸ್ಥರೊಂದಿಗೆ ವೋಟ್ ಮಾಡಿದ ​ಬಾಲಿವುಡ್ ಸ್ಟಾರ್​ ಹೃತಿಕ್ ರೋಷನ್
ಕುಟುಂಬಸ್ಥರೊಂದಿಗೆ ವೋಟ್ ಮಾಡಿದ ​ಬಾಲಿವುಡ್ ಸ್ಟಾರ್​ ಹೃತಿಕ್ ರೋಷನ್ (ETV Bharat)

By ETV Bharat Karnataka Team

Published : May 20, 2024, 4:40 PM IST

ಹೈದರಾಬಾದ್: ಇಂದು ನಡೆಯುತ್ತಿರುವ ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಮುಂಬೈನಲ್ಲಿ ವೋಟ್​ ಮಾಡಿದರು. ಈ ವೇಳೆ, ಅವರ ಸಹೋದರಿ ಸುನೈನಾ ರೋಷನ್ ಮತ್ತು ಪೋಷಕರಾದ ರಾಕೇಶ್ ರೋಷನ್, ಪಿಂಕಿ ರೋಷನ್ ಕೂಡ ಮತ ಚಲಾಯಿಸಿದರು. ನಂತರ ರೋಷನ್ ಕುಟುಂಬ ಮತಗಟ್ಟೆಯ ಮುಂದಿದ್ದ ಮಾಧ್ಯಮದವರಿಗೆ ಶಾಯಿ ಹಾಕಿಸಿಕೊಂಡ ಬೆರಳನ್ನು ಪ್ರದರ್ಶಿಸಿದರು.

ಇನ್ನು ನಟ ಹೃತಿಕ್ ಆಲ್ ಬ್ಲ್ಯಾಕ್ ಲುಕ್​ನಲ್ಲಿ ಕಂಗೊಳಿಸಿದರು. ಕಪ್ಪು ಪ್ಯಾಂಟ್, ಕಪ್ಪು ಟಿ ಶರ್ಟ್ ಜೊತೆಗೆ ಮ್ಯಾಚಿಂಗ್ ಟೋಪಿ ಧರಿಸಿದ್ದರು. ಅವರೊಂದಿಗೆ ಅವರ ತಂದೆ ರಾಕೇಶ್ ರೋಷನ್ ಅವರು ಆಲಿವ್ ಹಸಿರು ಶರ್ಟ್, ಕಪ್ಪು ಪ್ಯಾಂಟ್ ಮತ್ತು ಪವರ್ ಗ್ಲಾಸ್ ಧರಿಸಿದ್ದರು.

ಚುನಾವಣಾ ಆಯೋಗದ ಪ್ರಕಾರ, 4.69 ಕೋಟಿ ಪುರುಷರು, 4.26 ಕೋಟಿ ಮಹಿಳೆಯರು ಮತ್ತು 5,409 ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು 8.95 ಕೋಟಿ ಮತದಾರರು ಐದನೇ ಹಂತದ ಮತದಾನದಲ್ಲಿ 695 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಐದನೇ ಹಂತದಲ್ಲಿ ರಾಹುಲ್ ಗಾಂಧಿ, ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ರಾಜೀವ್ ಪ್ರತಾಪ್ ರೂಡಿ, ಪಿಯೂಷ್ ಗೋಯಲ್, ಉಜ್ವಲ್ ನಿಕಮ್, ಕರಣ್ ಭೂಷಣ್ ಸಿಂಗ್, ಎಲ್​ಜೆಪಿ (ರಾಮ್​ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಜೆಕೆಎನ್‌ಸಿ ಮುಖ್ಯಸ್ಥ ಒಮರ್ ಅಬ್ದುಲ್ಲಾ ಮತ್ತು ಆರ್‌ಜೆಡಿ ನಾಯಕಿ ರೋಹಿಣಿ ಆಚಾರ್ಯ ಮುಂತಾದ ನಾಯಕರು ಚುನಾವಣಾ ಕಣದಲ್ಲಿದ್ದಾರೆ.

ಬಿಹಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದೆ. 49 ಲೋಕಸಭಾ ಸ್ಥಾನಗಳ ಪೈಕಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರದ 5, ಜಾರ್ಖಂಡ್​ನ 3, ಒಡಿಶಾದ 5, ಜಮ್ಮು ಮತ್ತು ಕಾಶ್ಮೀರ, ಲಡಾಖ್​ನ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಮತದಾರರಿಗೆ ಶಾಂತಿಯುತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಒಟ್ಟು 2,000 ಫ್ಲೈಯಿಂಗ್ ಸ್ಕ್ವಾಡ್‌ಗಳು, 2,105 ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡಗಳು, 881 ವಿಡಿಯೋ ಕಣ್ಗಾವಲು ತಂಡಗಳು ಮತ್ತು 502 ವಿಡಿಯೋ ವೀಕ್ಷಣೆ ತಂಡಗಳು 94,732 ಮತಗಟ್ಟೆಗಳಲ್ಲಿ ಹಗಲು ರಾತ್ರಿ ಕಣ್ಗಾವಲು ಇರಿಸುತ್ತಿವೆ.

ಇದನ್ನೂ ಓದಿ:5ನೇ ಹಂತದ ಲೋಕಸಭಾ ಚುನಾವಣೆ: ವೋಟ್​ ಹಾಕಿದ ಉದ್ಯಮಿಗಳು, ರಾಜಕೀಯ ನಾಯಕರು - Lok Sabha Election 2024

ABOUT THE AUTHOR

...view details