ಹೈದರಾಬಾದ್: ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಕೆಪಿಎಚ್ಬಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. 31 ವರ್ಷದ ಕೆ ವಿಷ್ಣು ವರ್ಧನ (31) ಸಾವನ್ನಪ್ಪಿದ ವ್ಯಕ್ತಿ.
ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಮಂಡಲ ಮೂಲದ ವಿಷ್ಣು ವರ್ಧನ ಹೈದರಾಬಾದ್ನ ಕೆಪಿಎಚ್ಪಿ ಕಾಲೋನಿಯ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ನಿತ್ಯ ಈತನಿಗೆ ಆಂಜನೇಯ ದೇಗುಲಕ್ಕೆ ಭೇಟಿ ನೀಡುವ ಅಭ್ಯಾಸವಿತ್ತು. ಸೋಮವಾರ ಕೂಡ ಎಂದಿನಂತೆ ತೆರಳಿ ದೇಗುಲ ಪ್ರದಕ್ಷಿಣೆ ಹಾಕಿದ್ದರು.
ಇದಾದ ಬಳಿಕ ಇಲ್ಲಿನ ಧ್ಯಾನ ಮಂದಿರದ ಮೆಟ್ಟಿಲು ಬಳಿ ಕುಳಿತು ವಿಶ್ರಾಂತಿ ಪಡೆದಿದ್ದಾರೆ. ನಂತರ ಅಲ್ಲಿಯೇ ನೀರು ಕುಡಿದ್ದಿದ್ದಾರೆ. ಇದಾದ ಕೊಂಚ ಕ್ಷಣದಲ್ಲಿ ಕೊಂಚ ತೊಂದರೆ ಒಳಗಾದಂತೆ ಕಂಡು ಹಾಗೇಯೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಭಕ್ತರು ಅವರಿಗೆ ತಕ್ಷಣಕ್ಕೆ ಸಿಪಿಆರ್ ಮಾಡಿದ್ದಾರೆ. ಆದರೆ, ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಪ್ರಾಣ ಹೋಗಿದೆ. ಈ ಎಲ್ಲಾ ಘಟನೆಗಳು ದೇವಸ್ಥಾನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈತ ಹಲವು ದಿನಗಳಿಂದ ಜ್ವರಕ್ಕೆ ತುತ್ತಾಗಿದ್ದ ಎಂಬುದು ತಿಳಿದು ಬಂದಿದೆ. ಇದೀಗ ವಿಷ್ಣುವರ್ಧನ ಅವರ ಸಹೋದರಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತರ ಶರೀರವನ್ನು ಕುಟುಂಬಕ್ಕೆ ನೀಡಲಾಯಿತು.
ಇದನ್ನೂ ಓದಿ:₹50 ಸಾವಿರದಿಂದ ಹೂಡಿಕೆ ಪ್ರಾರಂಭಿಸಿ ₹1 ಕೋಟಿ ಕಳೆದುಕೊಂಡ ಸಿವಿಲ್ ಇಂಜಿನಿಯರ್!