ETV Bharat / state

ನಾನು ಯಾವುದೇ ಜಾತಿ-ಧರ್ಮದವರನ್ನು ದ್ವೇಷ ಮಾಡಲ್ಲ, ಪ್ರೀತಿಸುತ್ತೇನೆ : ಸಿಎಂ ಸಿದ್ದರಾಮಯ್ಯ - CM SIDDARAMAIAH

ಸಂತರು, ದಾರ್ಶನಿಕರು ಮತ್ತು ಸಮಾಜ ಸುಧಾರಕರು ಯಾರೂ ಕೂಡ ಜಾತಿ, ಧರ್ಮದ ಬಗ್ಗೆ ತಾರತಮ್ಯ ಮಾಡಿದವರಲ್ಲ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕಿದೆ ಎಂದು ಸಿಎಂ ಹೇಳಿದರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Jan 5, 2025, 8:54 PM IST

ದಾವಣಗೆರೆ : ನಾನು ಯಾವುದೇ ಜಾತಿ, ಧರ್ಮದವರನ್ನು ದ್ವೇಷ ಮಾಡಲ್ಲ, ಪ್ರೀತಿಸುತ್ತೇನೆ. ಜಾತಿ ಮಾಡುವವರನ್ನು ದ್ವೇಷ ಮಾಡಲ್ಲ, ವಿರೋಧ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಭಾನುವಾರ ಜರುಗಿದ ಕನಕದಾಸ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಜನಿಸಿದರು. ಯಾವುದೇ ಸಂತರು, ದಾರ್ಶನಿಕರು, ಸಮಾಜ ಸುಧಾರಕರು ಯಾರೂ ಜಾತಿ ತಾರತಮ್ಯ ಮಾಡಲಿಲ್ಲ. ಆದರೆ ಇಂದಿನ‌ ದಿನಗಳಲ್ಲಿ ದೇಶ, ಭಾಷೆ, ಸಂಸ್ಕೃತಿಯಲ್ಲಿ ತಾರತಮ್ಯ ಇದೆ. ಈ ಎಲ್ಲಾ ತಾರತಮ್ಯ ಹೋಗಿ ಸಮಾನತೆ ಬರಬೇಕು ಎಂದರು.

ನಾವು ಮನುಷ್ಯರಾಗಿ ಬಾಳಬೇಕೆಂಬುದು ಪ್ರತಿಯೊಬ್ಬ ದಾರ್ಶನಿಕರ ಹೋರಾಟ ಆಗಿತ್ತು.‌ ತಾರತಮ್ಯ ಎಂಬುದು ಹೋಗದೆ ಇದ್ರೆ ಸಮಸಮಾಜ ನಿರ್ಮಾಣ ಮಾಡಲು ಅಸಾಧ್ಯ. 'ಕುಲ ಕುಲ ಎಂದು ಹೊಡೆದಾಡದಿರಿ ಕುಲದ ನೆಲೆ ಬಲ್ಲಿರಾ' ಎಂದು ಕನಕದಾಸರು ಕೇಳಿದ್ದಾರೆ. ಏಕೆಂದರೆ ಅಂಬೇಡ್ಕರ್, ಕನಕದಾಸರು, ನಾರಾಯಣಗುರು ಈ ಜಾತಿ ವ್ಯವಸ್ಥೆಯಿಂದ ಅವಹೇಳನಕ್ಕೆ ಒಳಗಾಗಿದ್ರು ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಸಿಎಂ, ಮೋದಿ ಪಿಎಂ ಆಗಲು ಈ ಸಂವಿಧಾನ ಕಾರಣ : ನಾನು ಸಿಎಂ ಆಗಲು, ಮೋದಿ ಪಿಎಂ ಆಗಲು ಈ ಸಂವಿಧಾನ ಕಾರಣ. ಸಂವಿಧಾನ ಬಂದ ಮೇಲೆ ಸಮಾನತೆ ಬಂದಿದೆ. ಸಂವಿಧಾನ ಬಂದ ಮೇಲೆ ನನಗೂ ಒಂದೇ ವೋಟ್, ರಾಷ್ಟ್ರಪತಿಗೂ ಒಂದೇ ವೋಟ್, ಸಾಮಾನ್ಯ ಕೆಲಸ ಮಾಡುವವನಿಗೂ ಒಂದೇ ವೋಟು ಹಾಕುವ ಸಮಾನತೆ ಜಾರಿಗೆ ಬಂತು ಎಂದು ತಿಳಿಸಿದರು.

ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ : ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಎಂದು ಈ ಹಿಂದೆ ನಾರಾಯಣಗುರು ಅವರು ಹೇಳಿದ್ರು. ಯಾವುದೇ ಧರ್ಮದಲ್ಲಿ ಮನುಷ್ಯ ಮನುಷ್ಯನಲ್ಲಿ ಭೇದ ಭಾವ ಮಾಡು, ದ್ವೇಷಿಸು ಎಂದು ಹೇಳಿಲ್ಲ. ಆದರೆ ಪ್ರೀತಿಸು ಎಂದು ಹೇಳಿದೆ. ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದರು. ಅದಕ್ಕೆ ನಾವೆಲ್ಲ ಮಾನವ ಧರ್ಮದವರು. ಮನುಷ್ಯ ಧರ್ಮ ಅಂತಿಮವಾಗಿ ಸ್ಥಾಪನೆ ಆಗ್ಬೇಕು. ನಾವು ಅಲ್ಪ ಮಾನವ ಆಗುವ ಬದಲು, ಕುವೆಂಪು ಅವರು ಹೇಳಿದಂತೆ ವಿಶ್ವಮಾನವರಾಗಬೇಕು ಎಂದರು.‌

ಉಡುಪಿ ಶ್ರೀಕೃಷ್ಣ ಮಠದ ಪ್ರವೇಶ ಮಾಡಲು ಕನಕದಾಸರಿಗೆ ಬಿಟ್ಟಿರಲಿಲ್ಲ. ನೀನು ಕುರುಬ ನಿನಗೆ ಬಿಡಲ್ಲ ಎಂದು ದರ್ಶನ ಮಾಡಲು ಅವಕಾಶ ನೀಡಿರಲಿಲ್ಲ. ಶ್ರೀಕೃಷ್ಣನ ದರ್ಶನ ಮಾಡಲೇಬೇಕೆಂದು ನೆನೆದಾಗ ಶ್ರೀ ಕೃಷ್ಣ ದರ್ಶನ ಕೊಡುತ್ತಾನೆ. ಅದೇ ಕೃಷ್ಣ ಮಠದಲ್ಲಿರುವುದೇ ಕನಕನ ಕಿಂಡಿಯಾಗಿದೆ ಎಂದು ಸಿಎಂ ಹೇಳಿದರು.

ಅನ್ನಭಾಗ್ಯ ಕಾರ್ಯಕ್ರಮ ಮಾಡಿದಾಗ ತಮಾಷೆ ಮಾಡ್ತಿದ್ದರು : ಅನ್ನಭಾಗ್ಯ ಕಾರ್ಯಕ್ರಮ ಮಾಡಿದಾಗ ತಮಾಷೆ ಮಾಡ್ತಿದ್ದರು. ಅಕ್ಕಿ ಕೊಟ್ಟು ಕೆಲವರನ್ನು ಸೋಮಾರಿ ಮಾಡ್ತಿದ್ದಾರೆ, ಅಕ್ಕಿ ಪಡೆದವರು ಕೆಲಸ ಮಾಡ್ತಿಲ್ಲ ಎಂದು ಹೇಳಿದ್ದರು. ಅದಕ್ಕೆ ನಾನು ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್ ನಡೆದ ಪ್ರಾಮಾಣಿಕ ಹಾದಿಯಲ್ಲಿ ನಡೆದು ಪ್ರಯತ್ನ ಮಾಡ್ತಿದ್ದೇನೆ ಎಂದು ಸಿಎಂ ಅನ್ನಭಾಗ್ಯ ಯೋಜನೆಯನ್ನು ಸಮರ್ಥಿಸಿಕೊಂಡರು.

ಕಾಂತರಾಜ್ ವರದಿ ಕ್ಯಾಬಿನೆಟ್​ನಲ್ಲಿ ಚರ್ಚಿಸುತ್ತೇವೆ : ಕಾಂತರಾಜ್ ವರದಿಯನ್ನು ಸರ್ಕಾರ ತೆಗೆದುಕೊಂಡಿದೆ. ಮುಂದಿನ ಕ್ಯಾಬಿನೆಟ್​ನಲ್ಲಿ ಇಟ್ಟು ಚರ್ಚೆ ಮಾಡ್ತೇವೆ. ನಾವು ಜಾತಿ ಗಣತಿ ಪರವಾಗಿದ್ದವರು. ಸಮಾಜದಲ್ಲಿ ಸಮಾನತೆ ತರುವುದೇ ಜಾತಿ ಗಣತಿ ಉದ್ದೇಶ. ಜಾತಿಗಣತಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಕೆಲವರು ದೇಶದ ನೆಮ್ಮದಿಗೆ ಭಂಗ ತರಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ - CM SIDDARAMAIAH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.