ಅನೇಕ ಬಾರಿ ಎಡಗೈ ಬರಹಗಾರರನ್ನು ಬೆರಗುಗಣ್ಣುಗಳಿಂದ ನೋಡುತ್ತಿರುತ್ತೇವೆ. ಅವರಲ್ಲಿರುವ ಈ ವಿಶಿಷ್ಟ ಗುಣದೊಂದಿಗೆ ಅವರು ಎದುರಿಸುವ ಸವಾಲುಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಉದ್ದೇಶದಿಂದ ಇಂದು ಅಂತಾರಾಷ್ಟ್ರೀಯ ಎಡಗೈ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ಆಚರಣೆಗಾಗಿ ವಿಶ್ವದ ಮೂಲೆ ಮೂಲೆಯ ಜನರು ಒಟ್ಟಾಗುತ್ತಾರೆ. ಈ ಮೂಲಕ ನಿರ್ದಿಷ್ಟ ಸವಾಲುಗಳ ಕುರಿತು ಬೆಳಕು ಚೆಲ್ಲುವ ಹಾಗು ಅವರಿಗೆ ಬೆಂಬಲ ನೀಡಲಾಗುತ್ತಿದೆ.
ಪ್ರಸ್ತುತ ವರ್ಷದ ಅಂತಾರಾಷ್ಟ್ರೀಯ ಎಡಗೈ ದಿನದ ಆಚರಣೆಯಲ್ಲಿ ಜಗತ್ತಿನೆಲ್ಲೆಡೆಯ ಎಡಗೈ ಬಳಕೆದಾರರ ವೈವಿಧ್ಯತೆ ಮತ್ತು ವ್ಯಕ್ತಿತ್ವ ಪ್ರದರ್ಶನದ ಮೇಲೆ ಗಮನಹರಿಸಲಾಗುತ್ತಿದೆ.
ದಿನದ ಇತಿಹಾಸ: ಎಡಗೈ ಬಳಕೆದಾರರ ವಿಶಿಷ್ಟತೆ, ವ್ಯಕ್ತಿತ್ವಕ್ಕೆ ಗೌರವ ನೀಡುವ ಮೂಲಕ ಈ ದಿನಾಚರಣೆ ನಡೆಯುತ್ತದೆ. 1976ರಲ್ಲಿ ಲೆಫ್ಟ್ಹ್ಯಾಂಡರ್ ಇಂಟರ್ನ್ಯಾಷನಲ್ ಸಂಸ್ಥಾಪಕ ಡೀನ್ ಆರ್ ಕ್ಯಾಪ್ಬೆಲ್ ಈ ದಿನವನ್ನು ಸ್ಥಾಪಿಸಿದರು. ಅಂದಿನಿಂದ ದಿನಾಚರಣೆ ನಡೆಯುತ್ತಿದೆ. ಎಡಗೈ ಬಳಕೆದಾರರು 1,600ರಲ್ಲಿ ದೆವ್ವಗಳೊಂದಿಗೆ ಸಂಬಂಧ ಹೊಂದಿದ್ದರು ಎಂಬ ನಂಬಿಕೆಯಿಂದ ಇಂದಿನ ಆಧುನಿಕ ಕಾಲದವರೆಗೆ ಅವರು ಅನೇಕ ಅಡೆತಡೆ ಮತ್ತು ಸವಾಲುಗಳನ್ನು ಪ್ರತಿನಿತ್ಯದ ಕೆಲಸಗಳಲ್ಲಿ ಎದುರಿಸುತ್ತಿದ್ದಾರೆ.
ಮಹತ್ವ: ಎಡಗೈ ಬಳಕೆದಾರರ ವಿಭಿನ್ನ ಅನುಭವಗಳ ಕುರಿತು ಜಾಗೃತಿ, ಒಳಗೊಳ್ಳುವಿಕೆ, ಅರ್ಥೈಸಿಕೊಳ್ಳುವಿಕೆ, ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸುವುದು ಹಾಗೂ ಅನೇಕ ಕ್ಷೇತ್ರಗಳಲ್ಲಿನ ಅವರ ಕೊಡುಗೆಗಳನ್ನು ತಿಳಿಸುವುದು ದಿನದ ಮಹತ್ವ.
- ಜಾಗೃತಿ: ಎಡಗೈ ಬಳಕೆದಾರರು ಎದುರಿಸುವ ಸವಾಲಿನ ಕುರಿತು ಜಾಗೃತಿ ಮೂಡಿಸುವುದು.
- ವೈವಿಧ್ಯತೆಯ ಆಚರಣೆ: ವಿಶಿಷ್ಟ ಗುಣ ಮತ್ತು ಪ್ರತಿಭೆಗೆ ಮನ್ನಣೆ ನೀಡುವುದು.
- ಉದ್ಯಮ ಮತ್ತು ಉತ್ಪಾದನೆಯ ಉತ್ಪನ್ನಗಳನ್ನು ಎಡಗೈ ಮತ್ತು ಬಲಗೈ ಬಳಕೆದಾರರಿಬ್ಬರು ಬಳಕೆ ಮಾಡುವಂತೆ ವಿನ್ಯಾಸ ಮಾಡಲು ಪ್ರೋತ್ಸಾಹ ನೀಡುವುದು.
ಆಸಕ್ತಿಕರ ಅಂಶಗಳು:
- ಜಗತ್ತಿನಲ್ಲಿ ಅಂದಾಜು ಶೇ 12ರಷ್ಟು ಮಂದಿ ಎಡಗೈ ಬಳಕೆದಾರರಾದರೆ, ಶೇ 87ರಷ್ಟು ಬಲಗೈ ಹಾಗೂ 1ರಷ್ಟು ಮಂದಿ ಎರಡು ಕೈ ಬಳಕೆದಾರರಾಗಿದ್ದಾರೆ.
- ಎಡಗೈ ಬಳಕೆದಾರರು ಅಲರ್ಜಿಗೆ ತೆರೆದುಕೊಳ್ಳುವವರಾಗಿದ್ದು, ಇವರು ಅಪರೂಪದ ಸ್ವಯಂ ರೋಗನಿರೋಧಕ ಸಮಸ್ಯೆಯಿಂದ ಎರಡು ಪಟ್ಟು ಹೆಚ್ಚು ಬಳಲುತ್ತಾರೆ.
- ಬಲಗೈ ಬಳಕೆದಾರರಿಗಿಂತ ಎಡಗೈ ಬಳಕೆದಾರರಲ್ಲಿ ಮೈಗ್ರೇನ್ ಹೆಚ್ಚು ಎಂದು ಅಧ್ಯಯನ ತಿಳಿಸಿದೆ.
- ಇತರರಿಗೆ ಹೋಲಿಸಿದಾಗ ಬಹುತೇಕ ಎಡಗೈ ಬಳಕೆದಾರರು ಕಳಪೆ ನಿದ್ರೆ ಗುಣಮಟ್ಟವನ್ನು ಹೊಂದಿರುತ್ತಾರೆ.
- ಎಡಗೈ ಬಳಕೆದಾರರು ತಮ್ಮ ಬಲ ಬದಿಯ ಮಿದುಳನ್ನು ಹೆಚ್ಚು ಬಳಕೆ ಮಾಡುತ್ತಾರೆ.
- ಇವರಲ್ಲಿ ಇತರರಿಗಿಂತ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚು.