ಹೈದರಾಬಾದ್: ದಕ್ಷಿಣ ಚಿತ್ರರಂಗದ ಖ್ಯಾತ ನಟ ಧನುಷ್ ಅವರ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಜೊತೆಗಿನ ಸಮಸ್ಯೆ ಇತ್ಯರ್ಥಗೊಂಡಿದೆ. ನಟನ ಮೇಲಿದ್ದ ನಿಷೇಧ ತೆರವುಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಸೌತ್ ಸೂಪರ್ಸ್ಟಾರ್ ಹೊಸ ಸಿನಿಮಾ ಘೋಷಣೆಯಾಗಿದೆ.
NEW BEGINNINGS! 💥
— DawnPictures (@DawnPicturesOff) September 17, 2024
Dawn Pictures launches with a bang!
We are proud to announce our maiden project #D52, starring @dhanushkraja sir 🔥@aakashbaskaran @wunderbarfilms @DawnPicturesOff #DawnPictures @theSreyas pic.twitter.com/Iet4X0cdD1
ಇಂದು 'ಡಾನ್ ಪಿಕ್ಚರ್ಸ್' ಸೋಷಿಯಲ್ ಮೀಡಿಯಾದಲ್ಲಿ ಧನುಷ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾ ಅನೌನ್ಸ್ ಮಾಡಿದೆ. ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾನ್ ಪಿಕ್ಚರ್ಸ್'ನ ಚೊಚ್ಚಲ ಚಿತ್ರವಿದು. ತಾತ್ಕಾಲಿಕವಾಗಿ ಇದನ್ನು 'D52' ಎಂದು ಹೆಸರಿಸಲಾಗಿದೆ. ಟಿಎಫ್‌ಪಿಸಿ ಜೊತೆಗಿದ್ದ ಸಮಸ್ಯೆ ಪರಿಹಾರಗೊಂಡ ನಂತರ ಇದು ನಟನ ಗಮನಾರ್ಹ ಬೆಳವಣಿಗೆ ಅಂತಲೇ ಹೇಳಬಹುದು.
ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪೋಸ್ಟ್ ಶೇರ್ ಮಾಡಿರುವ ಡಾನ್ ಪಿಕ್ಚರ್ಸ್, "ಹೊಸ ಆರಂಭ. ಡಾನ್ ಪಿಕ್ಚರ್ಸ್ ಅಬ್ಬರದಿಂದ ಪ್ರಾರಂಭವಾಗುತ್ತಿದೆ. ನಮ್ಮ ಮೊದಲ ಪ್ರಾಜೆಕ್ಟ್ - ಧನುಷ್ ಸರ್ ನಟನೆಯ D52 ಅನ್ನು ಘೋಷಿಸಲು ಹೆಮ್ಮೆಯಾಗುತ್ತಿದೆ" ಎಂದು ಬರೆದುಕೊಂಡಿದೆ. ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್ ಈ ಸಿನಿಮಾವನ್ನು ಸಹ - ನಿರ್ಮಾಣ ಮಾಡಲಿದೆ. ಡಿ52 ಚಿತ್ರದ ತಾರಾಗಣ, ಸಿಬ್ಬಂದಿ ಮತ್ತು ನಿರ್ದೇಶಕರ ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಇಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿರುವ ಬಹುಬೇಡಿಕೆ ನಟ ಧನುಷ್ ಅವರ ಕೈಯಲ್ಲೀಗ ಹಲವು ಬಹುನಿರೀಕ್ಷಿತ ಚಿತ್ರಗಳಿವೆ. 'ನಿಲವುಕು ಎನ್ ಮೆಲ್ ಎನ್ನಡಿ ಕೋಬಂ' ಎಂಬ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಜುಲೈನಲ್ಲಿ ತಾವು ನಿರ್ದೇಶಿಸಿ ನಟಿಸಿದ್ದ ರಾಯನ್ ಸಿನಿಮಾ ತೆರೆಕಂಡಿದೆ. ಸಂದೀಪ್ ಕಿಶನ್ ಮತ್ತು ಕಾಳಿದಾಸ್ ಜಯರಾಮ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.
ಹಲವು ನಿರ್ಮಾಪಕರಿಂದ ಅಡ್ವಾನ್ಸ್ ಪಡೆದಿದ್ದರೂ ಕೂಡಾ ಸಿನಿಮಾ ಪ್ರಾರಂಭಿಸಲು ವಿಫಲರಾಗಿದ್ದಾರೆ ಎಂಬ ಆರೋಪ ನಟನ ಮೇಲಿತ್ತು. ಹಾಗಾಗಿ ಧನುಷ್ ಅವರ ಮೇಲೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ನಿಷೇಧ ಹೇರಿತ್ತು. ನಂತರ, ಫೈವ್ ಸ್ಟಾರ್ ಕ್ರಿಯೇಷನ್ಸ್‌ಗೆ ಮುಂಗಡ ಹಣವನ್ನು ಮರುಪಾವತಿಸಲು ಮತ್ತು ತೇನಂಡಾಲ್ ಫಿಲ್ಮ್ಸ್‌ನೊಂದಿಗೆ ಸಿನಿಮಾ ಮಾಡಲು ಒಪ್ಪಿದ್ದು, ಸಮಸ್ಯೆ ಇತ್ಯರ್ಥಗೊಂಡಿದೆ. ಈ ಬೆನ್ನಲ್ಲೇ ನಟನ ಹೊಸ ಸಿನಿಮಾ ಘೋಷಣೆ ಆಗಿದೆ.
ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ: ಮತ್ತೆ ಸಾಬೀತಾಯ್ತು ಕಿಚ್ಚನ ಭಾಷಾಪ್ರೇಮ; ಸುದೀಪ್ ವಿಡಿಯೋ ವೈರಲ್ - Sudeep
ತಾತ್ಕಾಲಿಕ ಶೀರ್ಷಿಕೆಯ ಡಿ52 ಅಲ್ಲದೇ, ಶೇಖರ್ ಕಮ್ಮುಲ ಅವರ ಕುಬೇರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ನಾಗಾರ್ಜುನ ಮತ್ತು ಜಿಮ್ ಸರ್ಭ್ ಕೂಡಾ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.