ಕರ್ನಾಟಕ

karnataka

ETV Bharat / bharat

ವೈದ್ಯೆಯ ಅತ್ಯಾಚಾರ, ಕೊಲೆ ಕೇಸಲ್ಲಿ ಪೊಲೀಸರೇ ಸಂಚುಕೋರರು: ಪಶ್ಚಿಮ ಬಂಗಾಳ ರಾಜ್ಯಪಾಲ - Kolkata Doctor Rape Murder Case

ಬಂಗಾಳ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ವಿರುದ್ಧ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಯುತ್ತಿದೆ. ರಾಜ್ಯಪಾಲ ಸಿ.ವಿ.ಆನಂದ್​​ ಬೋಸ್ ಇಂದು ಘಟನೆ ನಡೆದ ಆರ್​.ಜಿ.ಕರ್​​ ಆಸ್ಪತ್ರೆಗೆ ಭೇಟಿ ನೀಡಿದರು.

ಪಶ್ಚಿಮಬಂಗಾಳ ರಾಜ್ಯಪಾಲ
ಪಶ್ಚಿಮ ಬಂಗಾಳ ರಾಜ್ಯಪಾಲ (ANI)

By ANI

Published : Aug 15, 2024, 8:03 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ):ಕಾನೂನು ಪಾಲಕರೇ ಸಂಚುಕೋರರಾಗಿದ್ದಾರೆ. ಪೊಲೀಸರು ರಾಜಕೀಯ ದಾಳಕ್ಕೆ ಕುಣಿಯುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಸರ್ಕಾರ ಹೊಣೆ ಹೊರಬೇಕು. ವೈದ್ಯರಿಗೆ ಕೆಲಸದ ಸ್ಥಳದಲ್ಲಿ ಭದ್ರತೆ ನೀಡಲಾಗದಿದ್ದರೆ ಹೇಗೆ?. ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ್​​ ಬೋಸ್ ಅವರು ಹೀಗೆ ಲೀಲಾಜಾಲವಾಗಿ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೋಲ್ಕತ್ತಾದ ಆರ್.​ಜಿ.ಕರ್​ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ ಅವರು ಭದ್ರತೆ, ನ್ಯಾಯ ಒದಗಿಸಬೇಕಾದ ಪೊಲೀಸರು ಪ್ರಕರಣದಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಕೆಲ ವಿಧ್ವಂಸಕ ವ್ಯಕ್ತಿಗಳು ಕಾಲೇಜಿನಲ್ಲಿ ದಾಂಧಲೆ ನಡೆಸಿ ದಾಖಲೆಗಳನ್ನು ಹಾಳು ಮಾಡಿದ್ದಾರೆ. ಇದು ತನಿಖೆಗೆ ಅಡ್ಡಿಯಾಗಲಿದೆ ಎಂದು ಅವರು ತಿಳಿಸಿದರು.

ಪೊಲೀಸರಲ್ಲಿ ಕೆಲವರು ರಾಜಕೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿದ್ದಾರೆ. ಇಂತಹ ಕೊಳೆತ ವ್ಯವಸ್ಥೆಯನ್ನು ಸರಿ ಮಾಡಬೇಕಿದೆ. ಪ್ರಕರಣದ ಹೊಣೆಯನ್ನು ಸರ್ಕಾರವೇ ಹೊರಬೇಕು. ಮೊದಲು ಭದ್ರತೆ ನೀಡಬೇಕು. ನೀವು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋದಾಗ ಹೀಗಾದರೆ ಸುರಕ್ಷತೆ ಎಲ್ಲಿದೆ?. ಇದು ರಕ್ತಪಾತವಲ್ಲದೆ ಬೇರೇನೂ ಅಲ್ಲ ಎಂದು ಕಟುವಾಗಿ ಜರಿದರು.

ಆಸ್ಪತ್ರೆಯ ಮೇಲೆ ದಾಳಿ:ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿದ ರಾಜ್ಯಪಾಲ, ಕೊಳಕು ಮನಸ್ಸುಗಳು ಆಸ್ಪತ್ರೆಯಲ್ಲಿನ ದಾಖಲೆಗಳನ್ನು ಛಿದ್ರ ಮಾಡಿರುವುದು ಬಂಗಾಳ ಮತ್ತು ಮಾನವೀಯತೆಗೆ ನಾಚಿಕೆಗೇಡಿನ ಸಂಗತಿ. ನಮ್ಮ ಸುತ್ತಲೂ ಕಂಡ ಅತ್ಯಂತ ದೊಡ್ಡ ಅಧಃಪತನ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, "ನಿಮಗೆ ನ್ಯಾಯ ಸಿಗುತ್ತದೆ. ನಿಮ್ಮ ಅಹವಾಲುಗಳನ್ನು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ನಿಮ್ಮೊಂದಿಗಿದ್ದೇನೆ. ಹೋರಾಟದಲ್ಲಿ ನಾವು ಜಯಿಸುತ್ತೇವೆ" ಎಂದು ಭರವಸೆ ನೀಡಿದರು.

ಆಗಸ್ಟ್ 9ರಂದು ಆರ್‌.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದರು. ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಘಟನೆ ವೈದ್ಯರು ಮತ್ತು ವೈದ್ಯಕೀಯ ಸಮುದಾಯದಿಂದ ರಾಷ್ಟ್ರವ್ಯಾಪಿ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

ಇದನ್ನೂ ಓದಿ:ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಕೇಸ್​; ಮಧ್ಯರಾತ್ರಿ ಸಾವಿರಾರು ಮಹಿಳೆಯರಿಂದ ಪ್ರತಿಭಟನೆ - Trainee doctor rape and murder case

ABOUT THE AUTHOR

...view details